ತಿರುವನಂತಪುರಂ: ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪುದುಚೆರಿ ತಂಡವನ್ನು ಕೇವಲ 53 ರನ್ಗೆ ಆಲೌಟ್ ಮಾಡಿದ ಕರ್ನಾಟಕವು 236 ರನ್ಗಳ ಬೃಹತ್ ಅಂತರದ ಜಯ ದಾಖಲಿಸಿದೆ.
ತಿರುವನಂತಪುರಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪುದುಚೆರಿ ತಂಡವು ಕರ್ನಾಟಕಕ್ಕೆ ಬ್ಯಾಟಿಂಗ್ಗೆ ಆಹ್ವಾನಿಸಿತು. ಕರ್ನಾಟಕವು ಆರಂಭಿಕ ಆಟಗಾರ ಸಮರ್ಥ್ (95), ಸಿದ್ದಾರ್ಥ್ (61), ನಾಯಕ ಮನೀಶ್ ಪಾಂಡೆ (ಅಜೇಯ 64), ಎಸ್. ಶರತ್ (55) ಅವರ ಅರ್ಧಶತಕಗಳ ನೆರವಿನಿಂದ 50 ಓವರ್ಗಳಲ್ಲಿ 5 ವಿಕೆಟ್ಗೆ 289 ರನ್ ಪೇರಿಸಿತು. ಪುದುಚೆರಿ ಪರ ಸುಬೋತ್, ಸಾಗರ್ ತಲಾ ಎರಡು ಹಾಗೂ ಫಾಬಿದ್ ಅಹ್ಮದ್ ಒಂದು ವಿಕೆಟ್ ಪಡೆದರು.
ಬಳಿಕ 290 ರನ್ ಗುರಿ ಬೆನ್ನಟ್ಟಿದ ಪುದುಚೆರಿ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಕೇವಲ 17.3 ಓವರ್ಗೆ ತಂಡದ ಇನ್ನಿಂಗ್ಸ್ ಅಂತ್ಯಕಂಡಿದ್ದು, ಮೂವರು ಆಟಗಾರರು ಮಾತ್ರ ಎರಡಂಕಿ ಮೊತ್ತ ತಲುಪಿದರು. ವಿ ಕೌಶಿಕ್ (3 ವಿಕೆಟ್), ಜೆ. ಸುಚಿಥ್ (4 ವಿಕೆಟ್) ದಾಳಿಗೆ ತತ್ತರಿಸಿದ ಪುದುಚೆರಿ 53 ರನ್ಗೆ ಸರ್ವಪತನ ಕಂಡಿತು. ಈ ಮೂಲಕ ಕರ್ನಾಟಕ ತಂಡವು 236 ರನ್ಗಳ ಬೃಹತ್ ಅಂತರದ ಜಯ ಸಾಧಿಸಿದೆ.
ಇದನ್ನೂ ಓದಿ: ODI ಗೆಲುವಿನ ಸರಾಸರಿಯಲ್ಲಿ ಕೊಹ್ಲಿಯೇ ಅಗ್ರ... ಭಾರತದ ನಾಯಕನಾಗಿ ವಿರಾಟ್ ಸಾಧನೆ ಹೀಗಿದೆ