ETV Bharat / sports

ಶಾಹಿದ್ ಕಪೂರ್, ಬಾಬಿ ಡಿಯೋಲ್, ಪ್ರೊಫೆಸರ್‌.. ನಿಮಗೆ ಕೊಹ್ಲಿ ಯಾರ ಥರ ಕಾಣ್ತಿದ್ದಾರೆ? - ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ

ಐಪಿಎಲ್ 14ನೇ ಆವೃತ್ತಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಟೀಮ್ ಇಂಡಿಯಾ ಮುಂದಿನ ದಿನಗಳಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್‌ಶಿಪ್ ಹಾಗೂ ಇಂಗ್ಲೆಂಡ್​ ಜೊತೆ ಟೆಸ್ಟ್ ಸರಣಿ ಆಡಲು​ ಇಂಗ್ಲೆಂಡ್​ಗೆ ತೆರಳಲು ಸಿದ್ದವಾಗಿದೆ. ಈ ನಡುವೆ ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ತಮ್ಮ ತಲೆಕೂದಲು ಹಾಗು ಗಡ್ಡಕ್ಕೆ ಹೊಸ ಲುಕ್ ಕೊಟ್ಟಿದ್ದಾರೆ.

ವಿರಾಟ್​ ಕೊಹ್ಲಿ ನ್ಯೂ ಲುಕ್​
ವಿರಾಟ್​ ಕೊಹ್ಲಿ ನ್ಯೂ ಲುಕ್​
author img

By

Published : May 25, 2021, 8:41 AM IST

ಹೈದರಾಬಾದ್: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆಗಾಗ ಮೈದಾನದಲ್ಲಿ ಹಾಗೂ ಮೈದಾನಾಚೆಗೂ ಸಖತ್ ಸುದ್ದಿಯಲ್ಲಿರುತ್ತಾರೆ. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಇವರ ವಿಭಿನ್ನ ಫೋಟೋವೊಂದು ಸಖತ್​ ಸದ್ದು ಮಾಡುತ್ತಿದೆ.

ಐಪಿಎಲ್ 14ನೇ ಆವೃತ್ತಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಟೀಮ್ ಇಂಡಿಯಾ ಮುಂದಿನ ದಿನಗಳಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್‌ಶಿಪ್ ಹಾಗೂ ಇಂಗ್ಲೆಂಡ್​ ಜೊತೆ ಟೆಸ್ಟ್ ಸರಣಿ ಆಡಲು​ ಇಂಗ್ಲೆಂಡ್​ಗೆ ತೆರಳಲು ಸಿದ್ದವಾಗಿದೆ. ಈ ನಡುವೆ ವಿಶ್ರಾಂತಿಯಲ್ಲಿರುವ ಕೊಹ್ಲಿ ತಮ್ಮ ತಲೆಕೂದಲು ಹಾಗು ಗಡ್ಡಕ್ಕೆ ಹೊಸ ರೂಪ ಕೊಟ್ಟಿದ್ದಾರೆ.

ಮೊದಲೇ ಗಡ್ಡಧಾರಿಯಾಗಿದ್ದ ಕೊಹ್ಲಿ ಈ ಫೋಟೋದಲ್ಲಿ ಕೂದಲು ಮತ್ತು ಗಡ್ಡವನ್ನು ಮತ್ತಷ್ಟು ಬೆಳೆಸಿಕೊಂಡಿದ್ದಾರೆ. ಜತೆಗೆ ದೊಡ್ಡದಾದ ಕನ್ನಡಕ ಹಾಕಿದ್ದು, ಸಂಪೂರ್ಣ ವಿಭಿನ್ನ ಲುಕ್‌ನಲ್ಲಿ ಕಾಣುತ್ತಾರೆ. ನೆಟ್ಟಿಗರು ಅವರ ಹೊಸ ಲುಕ್‌ ಅನ್ನು ವಿವಿಧ ವ್ಯಕ್ತಿಗಳಿಗೆ, ಸಿನಿಮಾ-ವೆಬ್ ಸಿರೀಸ್ ಪಾತ್ರಧಾರಿಗಳಿಗೆ ಹೋಲಿಸಿ ಟ್ರೋಲ್‌ ಮಾಡುತ್ತಿದ್ದಾರೆ.

ಇನ್ನು, ಈ ಹೊಸ ಅವತಾರವನ್ನು ಕೆಲವರು ಜನಪ್ರಿಯ ಇಂಗ್ಲಿಷ್ ವೆಬ್ ಸಿರೀಸ್ 'ಮನಿ ಹೀಸ್ಟ್'ನ ಪ್ರೊಫೆಸರ್ ಪಾತ್ರಧಾರಿಗೂ ಹೋಲಿಸಿದ್ದು, ಈ ಸರಣಿಯ ಭಾರತೀಯ ಆವೃತ್ತಿಗೆ ಕೊಹ್ಲಿ ಹೊಂದಿಕೆಯಾಗ್ಬೋದು ಎನ್ನುತ್ತಿದ್ದಾರೆ. ಇನ್ನೂ ಕೆಲವರು ವಿರಾಟ್ ಈಗ ಬಾಬಿ ಡಿಯೋಲ್‌ರಂತೆ ಕಾಣುತ್ತಿದ್ದಾರೆ ಎಂದ್ರೆ, ಮತ್ತೆ ಹಲವರು 'ಕಬೀರ್ ಸಿಂಗ್' ಸಿನಿಮಾದ ಶಾಹೀದ್ ಕಪೂರ್ ಪಾತ್ರದ ಲುಕ್ ಜತೆಗೆ ಹೋಲಿಕೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.