ನವದೆಹಲಿ: ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ತನ್ನ ಅಪಾಯಕಾರಿ ಬೌಲಿಂಗ್ನಿಂದಾಗಿ ಗಮನಸೆಳೆದಿರುವ ಭಾರತ ಕ್ರಿಕೆಟ್ ತಂಡದ ಟ್ರಂಪ್ಕಾರ್ಡ್ ಬೌಲರ್ ಜಸ್ಪ್ರೀತ್ ಬೂಮ್ರಾ ಈ ಬಾರಿಯ ಟಿ-20 ಲೀಗ್ನ ಲೀಡಿಂಗ್ ಬೌಲರ್ ಎನಿಸಿದ್ದಾರೆ.
ತಮ್ಮ ಸ್ಪೀಡ್ ಹಾಗೂ ವಿಭಿನ್ನ ಶೈಲಿಯ ಬೌಲಿಂಗ್ನಿಂದಲೇ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಅವರು ಕಟ್ಟಿಹಾಕುತ್ತಾರೆ. ಈ ಕುರಿತಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಮೆಚ್ಚುಗೆಯ ಮಾತನಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೂಮ್ರಾ ವಿಭಿನ್ನ ಮತ್ತು ವೇಗದ ಬೌಲರ್ ಆಗಿರಲು ಕಾರಣ ಅವರ ಬೌಲಿಂಗ್ನಲ್ಲಿರುವ ವ್ಯತ್ಯಾಸಗಳೇ ಕಾರಣ ಎಂದು ಪ್ರಸಾದ್ ಹೇಳಿದ್ದಾರೆ. ಇದಕ್ಕೂ ಮೊದಲು ಆರ್ಸಿಬಿ ಬೌಲರ್ ಹರ್ಷಲ್ ಪಟೇಲ್ ಅವರ ಬೌಲಿಂಗ್ ಶೈಲಿ ಹಾಗೂ ಸ್ಥಿರತೆಯ ಕುರಿತು ಅವರು ಪ್ರಶಂಸೆ ವ್ಯಕ್ತಪಡಿಸಿದ್ದರು.
ವೆಂಕಟೇಶ್ ಪ್ರಸಾದ್ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಧೋನಿ ತಂಡದಲ್ಲಿರುವುದನ್ನ ಇಷ್ಟಪಡುತ್ತೇವೆ, ಅವರ ಪ್ರತಿ ಸಲಹೆ ಬಳಸಿಕೊಳ್ಳುತ್ತೇವೆ: ಕೆ. ಎಲ್. ರಾಹುಲ್