ಮುಂಬೈ : 90ರ ದಶಕದಲ್ಲಿ ಭಾರತ ಕಂಡಂತಹ ಶ್ರೇಷ್ಠ ವೇಗದ ಬೌಲರ್ಗಳಲ್ಲಿ ಒಬ್ಬರಾಗಿರುವಂತಹ ವೆಂಕಟೇಶ್ ಪ್ರಸಾದ್ ತಮ್ಮ ವೃತ್ತಿ ಜೀವನದಲ್ಲಿ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್ ಮತ್ತು ಸೌರವ್ ಗಂಗೂಲಿ ಅವರಂತಹ ಐಕಾನಿಕ್ ನಾಯಕರ ನೇತೃತ್ವದಲ್ಲಿ ಆಡಿದ್ದು, ತಮ್ಮ ನೆಚ್ಚಿನ ನಾಯಕ ಅಜರುದ್ದೀನ್ ಎಂದು ತಿಳಿಸಿದ್ದಾರೆ.
ಮೊಹಮ್ಮದ್ ಅಜರುದ್ಧೀನ್ ನಾಯಕರಾಗಿದ್ದಾಗ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮಾಜಿ ವೇಗಿ, ಗಂಗೂಲಿ ನಾಯಕರಾಗಿದ್ದ ಸಂದರ್ಭದಲ್ಲಿ ವಿದಾಯ ಘೋಷಿಸಿದ್ದರು. ಅಜರುದ್ಧೀನ್ ಮತ್ತು ಗಂಗೂಲಿಯಲ್ಲದೆ ಸಚಿನ್ ತೆಂಡೂಲ್ಕರ್ ಅವಧಿಯಲ್ಲೂ ಭಾರತ ಕ್ರಿಕೆಟ್ನಲ್ಲಿ ಪ್ರಮುಖ ಭಾಗವಾಗಿದ್ದರು.
ಮೂರು ಲೆಜೆಂಡ್ಗಳ ನಾಯಕತ್ವದಲ್ಲಿ ಆಡಿದ್ದರೂ ಪ್ರಸಾದ್ ಅಜರುದ್ಧೀನ್ರನ್ನು ಅತ್ಯುತ್ತಮ ನಾಯಕ ಎಂದು 'ದಿ ಗ್ರೇಟ್ ಕ್ರಿಕೆಟರ್' ಪೋಡ್ಕಾಸ್ಟ್ ಸಂವಾದದಲ್ಲಿ ತಿಳಿಸಿದ್ದಾರೆ.
"ಯಾರೋ ಒಬ್ಬರನ್ನು ಶ್ರೇಷ್ಠ ಎಂದು ಹೇಳಲಾಗುವುದಿಲ್ಲ. ನೋಡಿ, ಪ್ರತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ಭಿನ್ನರಾಗಿರುತ್ತಾರೆ ಎಂದು ನಾನು ಸುಲಭವಾಗಿ ಹೇಳಬಲ್ಲೆ.
ಆದರೆ, ಅಜರ್ ನಾಯಕತ್ವದಲ್ಲಿ ನಾನು ಯಾವಾಗಲೂ ಆರಾಮದಾಯಕವಾಗಿರುತ್ತಿದ್ದೆ. ಯಾಕೆಂದರೆ, ಅವರು ನನ್ನತ್ತ ಚೆಂಡನ್ನು ಎಸೆದು, ಫೀಲ್ಡ್ ಸೆಟ್ಟಿಂಗ್ ನನಗೆ ಬೇಕಾದ ಸ್ಥಳಗಳಲ್ಲಿ ಹೊಂದಿಸಿ ಕೊಡುತ್ತಿದ್ದರು.
ಆ ಸಂದರ್ಭದಲ್ಲಿ ಅದಕ್ಕೆ ತಕ್ಕನಾದ ರೀತಿಯಲ್ಲಿ ಬೌಲಿಂಗ್ ಮಾಡುವ ಜವಾಬ್ದಾರಿ ನನ್ನದಾಗಿರುತ್ತಿತ್ತು, ಮಾಡಬೇಕಲ್ವ? ಆದ್ದರಿಂದ ಅಜರುದ್ದೀನ್ಗೆ ನಾನು ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ:18 ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಅವಕಾಶ.. ಮೊದಲ ಓವರ್ನಲ್ಲೇ ವಿಕೆಟ್ ಪಡೆದು ಕಣ್ಣೀರಿಟ್ಟ ಬೌಲರ್