ETV Bharat / sports

ವೆಸ್ಟ್​ ಇಂಡೀಸ್​ ವಿರುದ್ಧ ಸರಣಿ ಕೈಚೆಲ್ಲಿದ ಭಾರತ.. ಹಾರ್ದಿಕ್​ ಬಗ್ಗೆ ವೆಂಕಟೇಶ್​ ಪ್ರಸಾದ್​ ಬೇಸರ - ನಾಯಕ ಹಾರ್ದಿಕ್ ಪಾಂಡ್ಯ ನೀಡಿರುವ ಹೇಳಿಕೆ ಟೀಕೆ

ಮಾಜಿ ಬೌಲರ್ ವೆಂಕಟೇಶ್​ ಪ್ರಸಾದ್​ ಅವರು ಭಾರತೀಯ ತಂಡದ ಆಟಗಾರರಿಗೆ ತಮ್ಮ ಕೌಶಲ್ಯವನ್ನು ಸುಧಾರಿಸಲು ಸಲಹೆ ನೀಡಿದ್ದಾರೆ ಮತ್ತು ಕ್ಯಾಪ್ಟನ್ ಹಾರ್ದಿಕ್ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

hunger and intensity deficiency  illusion Venkatesh Prasad on Team India  Team India performance after series loss to WI  ಹಾರ್ದಿಕ್​ ವಿರುದ್ಧ ವೆಂಕಟೇಶ್​ ಪ್ರಸಾದ್​ ಬೇಸರ  ವೆಸ್ಟ್​ ಇಂಡೀಸ್​ ವಿರುದ್ಧ ಸರಣಿ ಕೈಚೆಲ್ಲಿದ ಭಾರತ  ವೆಸ್ಟ್ ಇಂಡೀಸ್ ವಿರುದ್ಧದ ಸರಣಿ  ಸರಣಿ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲ  ಸರಣಿ ಸೋತ ಬಳಿಕ ಟೀಂ ಇಂಡಿಯಾ  ನಾಯಕ ಹಾರ್ದಿಕ್ ಪಾಂಡ್ಯ ನೀಡಿರುವ ಹೇಳಿಕೆ ಟೀಕೆ  ಹಾರ್ದಿಕ್​ ಪಾಂಡ್ಯಾ ಹೇಳಿದ್ದೇನು
ವೆಸ್ಟ್​ ಇಂಡೀಸ್​ ವಿರುದ್ಧ ಸರಣಿ ಕೈಚೆಲ್ಲಿದ ಭಾರತ
author img

By

Published : Aug 14, 2023, 11:52 AM IST

ಲಾಡರ್​ಹಿಲ್​, ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನ್ನು ಕಂಡಿತು. ಪಂದ್ಯ ಹಾಗೂ ಸರಣಿ ಸೋತ ಬಳಿಕ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ನೀಡಿರುವ ಹೇಳಿಕೆ ಟೀಕೆಗೆ ಗುರಿಯಾಗುತ್ತಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು T20 ಗಳನ್ನು ಸೋತ ನಂತರ ಮತ್ತು ಸರಣಿ ರೇಸ್‌ನಲ್ಲಿ ಹಿಂದೆ ಬಿದ್ದ ಭಾರತ ತಂಡ ಚೇತರಿಸಿಕೊಂಡಿತ್ತು. ಬಳಿಕ ಸತತ ಎರಡು ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿತ್ತು. ಆದ್ರೆ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ-20 ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಸೋಲನ್ನು ಕಂಡಿತು. ಈ ಸೋಲಿನಿಂದಾಗಿ ಭಾರತ ತಂಡ ಟಿ20 ಸರಣಿಯನ್ನು 2-3 ರಿಂದ ಕಳೆದುಕೊಂಡಿದೆ. ಟಿ20 ಸರಣಿ ಸೋಲಿನ ಬಳಿಕ ಟೀಂ ಇಂಡಿಯಾದ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಸಾದ್ ಅವರು, ಭಾರತೀಯ ತಂಡದ ಆಟಗಾರರಿಗೆ ತಮ್ಮ ಕೌಶಲ್ಯವನ್ನು ಸುಧಾರಿಸಲು ಸಲಹೆ ನೀಡಿದ್ದಾರೆ ಮತ್ತು ಕ್ಯಾಪ್ಟನ್ ಹಾರ್ದಿಕ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

  • They are responsible for the debacle and need to be accountable. Process and such words are misused now. MS meant it, guys now just use the word. There is no consistency in selection, random stuff happening too much https://t.co/jJhUgsd5KA

    — Venkatesh Prasad (@venkateshprasad) August 13, 2023 " class="align-text-top noRightClick twitterSection" data=" ">

ಭಾರತದ ಸೋಲಿನ ಕುರಿತು ಪ್ರತಿಕ್ರಿಯಿಸಿರುವ ವೆಂಕಟೇಶ್​ ಪ್ರಸಾದ್​, ಭಾರತವು ತಮ್ಮ ಕೌಶಲ್ಯಗಳನ್ನು ಸುಧಾರಿಸಬೇಕಾಗಿದೆ. ಅವರಿಗೆ ಹಸಿವು ಮತ್ತು ತೀವ್ರತೆಯ ಕೊರತೆಯಿದೆ. ಬೌಲರ್ಸ್​ ಬ್ಯಾಟ್ ಮಾಡಲು ಸಾಧ್ಯವಿಲ್ಲ. ಬ್ಯಾಟ್ಸ್‌ಮನ್ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಹೌದು ಅಂತಾ ಹೇಳುವ ಜನರನ್ನು ಹುಡುಕಬೇಡಿ, ಯಾರಾದರೂ ನಿಮ್ಮ ನೆಚ್ಚಿನ ಆಟಗಾರ ಎಂದು ಕುರುಡಾಗಬೇಡಿ. ಆದರೆ ಒಳ್ಳೆಯದನ್ನು ದೊಡ್ಡ ರೀತಿಯಲ್ಲಿ ನೋಡಿ ಎಂದು ಟ್ವೀಟ್​ ಮಾಡಿದ್ದಾರೆ.

ಭಾರತವು ಕೆಲವು ಸಮಯದಿಂದ ಅತ್ಯಂತ ಸಾಧಾರಣವಾದ ಸೀಮಿತ ಓವರ್‌ಗಳ ತಂಡವಾಗಿದೆ. ಅವರು ಕೆಲವು ತಿಂಗಳ ಹಿಂದೆ ಟಿ 20 ವಿಶ್ವಕಪ್‌ಗೆ ಅರ್ಹತೆ ಪಡೆದ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸೋತಿದ್ದಾರೆ. ನಾವು ಬಾಂಗ್ಲಾದೇಶ ವಿರುದ್ಧ ಸೋತಿದ್ದೇವೆ. ODI ಸರಣಿಯಲ್ಲೂ ಅವರು ಇಂತಹ ಹೇಳಿಕೆಗಳನ್ನು ನೀಡುವ ಬದಲು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ ಅಂತಾ ಟ್ವೀಟ್​ ಮಾಡಿದ್ದಾರೆ.

  • India needs to improve their skillset. Their is a hunger & intensity deficiency & often the captain looked clueless. Bowler’s can’t bat, batsmen can’t bowl.
    It’s important to not look for yes men and be blinded because someone is your favourite player but look at the larger good

ಅಷ್ಟೇ ಅಲ್ಲ ಭಾರತ ತಂಡದ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ವಿರುದ್ಧವೂ ಕಿಡಿಕಾರಿದ್ದಾರೆ. ಕಳಪೆ ನಾಯಕತ್ವದಿಂದಾಗಿ ನಾವು ಈ ಸರಣಿಯನ್ನು ಕಳೆದುಕೊಂಡಿದ್ದೇವೆ ಎಂದು ಕ್ರಿಕೆಟ್ ಅಭಿಮಾನಿಯೊಬ್ಬರು ಬರೆದರೆ, ಮತ್ತೊಬ್ಬ ಅಭಿಮಾನಿ ಹಾರ್ದಿಕ್ ಪಾಂಡ್ಯ ಎಂಎಸ್ ಧೋನಿಯಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಹಾರ್ದಿಕ್​ ಪಾಂಡ್ಯ ಹೇಳಿದ್ದೇನು?: ನಾನು ಬ್ಯಾಟಿಂಗ್‌ಗೆ ಬಂದಾಗ ಆ ಸಮಯದಲ್ಲಿದ್ದ ರನ್​ಗಳ ವೇಗವನ್ನು ಉಳಿಸಿಕೊಳ್ಳಲು ನಾವು ವಿಫಲರಾಗಿದ್ದೇವೆ. ಆ ಪರಿಸ್ಥಿತಿಯಲ್ಲಿ ರನ್ ಗಳಿಸಲು ನಮಗೆ ಸಾಧ್ಯವಾಗಲಿಲ್ಲ. ನಾವು ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದ್ದೇವೆ. ಈ ಸೋಲಿನ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ. ನಮ್ಮ ಆಟಗಾರರು ಹೇಗೆ ಆಡಿದರು ಎಂಬುದು ನನಗೆ ಗೊತ್ತು. ಕೆಲವೊಮ್ಮೆ ಸೋಲು ಒಳ್ಳೆಯದು ಎಂದು ಪಂದ್ಯದ ಬಳಿಕ ಹೇಳಿದ್ದರು.

ಯುವ ಪ್ರತಿಭೆಗಳಿಗೆ ಅನೇಕ ವಿಷಯಗಳನ್ನು ಕಲಿಯಲು ಅವಕಾಶವಿದೆ. ಯುವಕರು ತಮ್ಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು. ಅವರು ನಿರ್ಣಾಯಕ ಇನ್ನಿಂಗ್ಸ್ ಆಡುವುದನ್ನು ನೋಡಲು ಸಂತೋಷವಾಯಿತು. ಪಂದ್ಯ ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದಿನ ವರ್ಷ ಟಿ20 ವಿಶ್ವಕಪ್ ಇಲ್ಲಿ ನಡೆಯಲಿದೆ. ನಂತರ ಇನ್ನಷ್ಟು ಅಭಿಮಾನಿಗಳನ್ನು ಭೇಟಿ ಮಾಡುತ್ತೇವೆ ಎಂದು ಪಾಂಡ್ಯ ಹೇಳಿದ್ದಾರೆ.

ಓದಿ: ಸೂರ್ಯಕುಮಾರ್ ಆಟ ವ್ಯರ್ಥ, ಕಿಂಗ್​, ಪೂರನ್​ ಮಿಂಚು.. ಏಳು ವರ್ಷಗಳ ಬಳಿಕ ಭಾರತದ ವಿರುದ್ಧ ಟಿ20 ಸರಣಿ ಗೆದ್ದ ವೆಸ್ಟ್​ ಇಂಡೀಸ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.