ETV Bharat / sports

ಕೊರೊನಾ ಗೆದ್ದು ಮನೆಗೆ ಮರಳಿದ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ - ಕೋಲ್ಕತ್ತಾ ನೈಟ್ ರೈಡರ್ಸ್

ತಮಿಳುನಾಡಿನ ವರುಣ್ ವಕ್ರವರ್ತಿ ಬಯೋಬಬಲ್​ನಲ್ಲಿ ಕೋವಿಡ್​ 19 ಪಾಸಿಟಿವ್​ಗೆ ತುತ್ತಾದ ಮೊದಲ ಆಟಗಾರ. ಅವರು ಸ್ಕ್ಯಾನಿಂಗ್​ಗೆ ತೆರಳಿದ್ದ ವೇಳೆ ಸೋಂಕಿಗೆ ಒಳಪಟ್ಟಿದ್ದರು. ನಂತರ ಅವರ ಸಹ ಆಟಗಾರರಾದ ಸಂದೀಪ್ ವಾರಿಯರ್​, ಪ್ರಸಿಧ್ ಕೃಷ್ಣ ಮತ್ತು ಸೀಫರ್ಟ್​ ಕೂಡ ಸೋಂಕಿತರಾಗಿದ್ದರು.

ವರುಣ್ ಚಕ್ರವರ್ತಿ
ವರುಣ್ ಚಕ್ರವರ್ತಿ
author img

By

Published : May 10, 2021, 7:54 PM IST

ನವದೆಹಲಿ: ಮುಂದೂಡಿದ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮೊದಲ ಕೊರೊನಾ ಸೋಂಕಿತರಾಗಿದ್ದ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ಲೆಗ್​ ಸ್ಪಿನ್ನರ್​ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಕಡ್ಡಾಯ ಐಸೋಲೇಷನ್ ಮುಗಿಸಿ ತಮ್ಮ ತಮ್ಮ ಮನೆಗೆ ಹಿಂತಿರುಗಿದ್ದಾರೆ.

ತಮಿಳುನಾಡಿನ ವರುಣ್ ವಕ್ರವರ್ತಿ ಬಯೋಬಬಲ್​ನಲ್ಲಿ ಕೋವಿಡ್​ 19 ಪಾಸಿಟಿವ್​ಗೆ ತುತ್ತಾದ ಮೊದಲ ಆಟಗಾರ. ಅವರು ಸ್ಕ್ಯಾನಿಂಗ್​ಗೆ ತೆರಳಿದ್ದ ವೇಳೆ ಸೋಂಕಿಗೆ ಒಳಪಟ್ಟಿದ್ದರು. ನಂತರ ಅವರ ಸಹಾ ಆಟಗಾರರಾದ ಸಂದೀಪ್ ವಾರಿಯರ್​, ಪ್ರಸಿಧ್ ಕೃಷ್ಣ ಮತ್ತು ಸೀಫರ್ಟ್​ ಕೂಡ ಸೋಂಕಿತರಾಗಿದ್ದರು.

ಇನ್ನು ಸಂದೀಪ್​ ವಾರಿಯರ್​ ಜೊತೆ ಡೆಲ್ಲಿಯಲ್ಲಿ ಚರ್ಚೆ ನಡೆಸಿದ್ದ ಕ್ಯಾಪಿಟಲ್ಸ್ ತಂಡದ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ ಸೋಂಕಿಗೆ ತುತ್ತಾದ ತಕ್ಷಣ ಇಡೀ ಐಪಿಎಲ್​ ಅನ್ನೇ ಮುಂದೂಡಲಾಗಿತ್ತು.

ಹೌದು, ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಮನೆಗೆ ಹಿಂತಿರುಗಿದ್ದಾರೆ. ಅವರು 10 ದಿನಗಳ ಕಡ್ಡಾಯ ಐಸೋಲೇಷನ್ ಮುಗಿಸಿದ್ದಾರೆ. ಆದರೂ ಕೆಕೆಆರ್​ ಒಂದು ಫ್ರಾಂಚೈಸಿಯಾಗಿ ಅವರ ಆರೋಗ್ಯದ ಮೇಲೆ ನಿಗಾವಹಿಸಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಅವರಿಬ್ಬರು ತಮ್ಮ ತವರಾದ ಕೇರಳ ಮತ್ತು ತಮಿಳುನಾಡಿನಲ್ಲಿ ಆರ್​ಟಿ-ಪಿಸಿಆರ್​ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ 10 ದಿನಗಳಲ್ಲಿ ಅವರಿಬ್ಬರಲ್ಲಿ ಯಾವುದೇ ರೀತಿಯ ಪ್ರಮುಖ ಲಕ್ಷಣಗಳು ಕಾಣಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ:ಕೋವಿಡ್​ ಹೋರಾಟಕ್ಕೆ 30 ಕೋಟಿ ರೂ ದೇಣಿಗೆ ನೀಡಿದ ಎಸ್​ಆರ್​​ಹೆಚ್​ ಸಂಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.