ETV Bharat / sports

UPW vs MI WPL 2023: ಜಯದ ನಾಗಾಲೋಟ ಮುಂದುವರಿಸಿದ ಮುಂಬೈ ಇಂಡಿಯನ್ಸ್ - ಮುಂಬೈ ಇಂಡಿಯನ್ಸ್

ವುಮೆನ್ಸ್​ ಪ್ರೀಮಿಯರ್​ ಲೀಗ್​ನ 10ನೇ ಪಂದ್ಯ - ಮುಂಬೈ ಇಂಡಿಯನ್ಸ್​ ಮತ್ತು ಯುಪಿ ವಾರಿಯರ್ಸ್ ಮುಖಾಮುಖಿ - ಜಯದ ನಾಗಾಲೋಟ ಮುಂದುವರೆಸಿದ ಮುಂಬೈ

UPW vs MI WPL 2023
ಟಾಸ್​ ಗೆದ್ದ ಯುಪಿ ವಾರಿಯರ್ಸ್​ ಬ್ಯಾಟಿಂಗ್​
author img

By

Published : Mar 12, 2023, 7:12 PM IST

Updated : Mar 12, 2023, 11:02 PM IST

ಮುಂಬೈ: ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಇಂದು ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಹರ್ಮನ್​ಪ್ರೀತ್​ ಕೌರ್ ಪಡೆ 8 ವಿಕೆಟ್​ಗಳಿಂದ ಭರ್ಜರಿ ಜಯ ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್​, 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್​ಗಳನ್ನು ಪೇರಿಸಿತ್ತು. ಈ ಮೊತ್ತ ಬೆನ್ನತ್ತಿದ ಮುಂಬೈ ತಂಡ ಅನಾಯಾಸವಾಗಿ ಗೆಲುವಿನ ದಡ ತಲುಪಿತು.

ಮುಂಬೈ ಪರ ಆರಂಭಿಕರಾದ ಹೇಲಿ ಮ್ಯಾಥ್ಯೂಸ್ 12 ರನ್ ಗಳಿಸಿ ಬೇಗ ಪೇವಿಲಿಯನ್ ಸೇರಿದರು. ಆದರೆ ಯಾಸ್ತಿಕಾ ಭಾಟಿಯಾ (42) ಮತ್ತು ನ್ಯಾಟ್ ಸಿವರ್-ಬ್ರಂಟ್ (35) ರನ್ ಪೇರಿಸಿ ಉತ್ತಮ ಜೊತೆಯಾಟವಾಡಿದರು. ನಾಯಕಿ ಹರ್ಮನ್​ಪ್ರೀತ್​ ಕೌರ್ 53 ರನ್ ಸಿಡಿಸಿ ಅಜೇಯರಾಗಿ ಉಳಿದು ಗೆಲುವು ತಂದಿಟ್ಟರು. ಆರಂಭದಿಂದಲೂ ಉತ್ತಮ ರನ್ ರೇಟ್ ಹೊಂದಿದ್ದ ಮುಂಬೈ ಇಂಡಿಯನ್ಸ್, ಯುಪಿ ಬೌಲರ್​ಗಳನ್ನು ದಂಡಿಸುತ್ತಲೇ ಬಂದಿದ್ದರು. ಕೊನೆಯದಾಗಿ 17.3 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 164 ರನ್ ಬಾರಿಸಿ ಮುಂಬೈ ಜಯಿಸಿತು.

ಯುಪಿ ನಾಯಕಿ ಅಲಿಸ್ಸಾ ಹೀಲಿ 58 ರನ್ ಮತ್ತು ತಹ್ಲಿಯಾ ಮೆಗ್ರಾತ್ 50 ರನ್​ ಬಾರಿಸಿದ್ದರಿಂದ ತಂಡದ ಮೊತ್ತ 150ರ ಗಡಿ ದಾಟಿತು. ಮುಂಬೈ ಪರ ಸೈಕಾ ಇಶಾಕ್ 3, ಅಮೆಲಿಯಾ ಕೆರ್ 2 ಮತ್ತು ಹೇಲಿ ಮ್ಯಾಥ್ಯೂಸ್ 1 ವಿಕೆಟ್ ಕಬಳಿಸಿದರು.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಆಡಿದ ನಾಲ್ಕು ಪಂದ್ಯದಲ್ಲಿ ಗೆಲುವು ಸಾಧಿಸಿ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಯುಪಿ ವಾರಿಯರ್ಸ್ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದೆ.

ಯುಪಿ ವಾರಿಯರ್ಜ್ ಆಡುವ ತಂಡ : ದೇವಿಕಾ ವೈದ್ಯ, ಅಲಿಸ್ಸಾ ಹೀಲಿ(ವಿಕೆಟ್​ ಕೀಪರ್​/ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್

ಮುಂಬೈ ಇಂಡಿಯನ್ಸ್ ಆಡುವ ತಂಡ: ಯಾಸ್ತಿಕಾ ಭಾಟಿಯಾ (ವಿಕೆಟ್​ ಕೀಪರ್​), ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಅಮಾನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

ಅಂಕ ಪಟ್ಟಿ: ಮುಂಬೈ ಇಂಡಿಯನ್ಸ್ ಆಡಿದ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಪಿಂಕ್​ ಮತ್ತು ಪರ್ಪಲ್​ ಕ್ಯಾಪ್​: ಸತತ 4 ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ಮಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್​ ಲ್ಯಾನಿಂಗ್ 206 ರನ್​ನಿಂದ ಪಿಂಕ್​ ಕ್ಯಾಪ್​ ಹೋಲ್ಡರ್​ ಆಗಿದ್ದಾರೆ. ಎರಡನೇ ಸ್ಥಾನದಲ್ಲಿ ಡೆಲ್ಲಿಯ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (179) ಇದ್ದಾರೆ. ಮೂರನೇ ಸ್ಥಾನಲ್ಲಿ ಮುಂಬೈ ಇಂಡಿಯನ್ಸ್​ನ ಆಲ್​ರೌಂಡರ್​​ ಹೇಲಿ ಮ್ಯಾಥ್ಯೂಸ್ (156) ಇದ್ದಾರೆ.

ಬೌಲಿಂಗ್​ನಲ್ಲಿ ಹೆಚ್ಚು ವಿಕೆಟ್​ ಪಡೆದ ಸ್ಫರ್ಧೆಯಲ್ಲಿ ಸೈಕಾ ಇಶಾಕ್ (9) ಮೊದಲ ಸ್ಥಾನದಲ್ಲಿದ್ದಾರೆ. ಮೂರು ಪಂದ್ಯಗಳಲ್ಲಿ 9 ವಿಕೆಟ್​ ಪಡೆದುಕೊಂಡಿದ್ದಾರೆ. ಯುಪಿ ವಾರಿಯರ್ಸ್​ನ ಸೋಫಿ ಎಕ್ಲೆಸ್ಟೋನ್ 7 ವಿಕೆಟ್​ ಪಡೆದು ಎರಡನೇ ಮತ್ತು ಹೇಲಿ ಮ್ಯಾಥ್ಯೂಸ್ 6 ವಿಕೆಟ್​ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಪಿಎಸ್​ನಲ್ಲಿ ದಾಖಲೆಯ ಪಂದ್ಯ, ಟಿ20 ಎರಡು ಇನ್ನಿಂಗ್ 500ಕ್ಕೂ ಹೆಚ್ಚು ರನ್​ ದಾಖಲೆ

Last Updated : Mar 12, 2023, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.