ETV Bharat / sports

ಬಿಗ್​ಬ್ಯಾಷ್​ ಲೀಗ್​ನಲ್ಲಿ ಆಡಲಿದ್ದಾರೆ ಭಾರತಕ್ಕೆ ಅಂಡರ್​ 19 ವಿಶ್ವಕಪ್​ ಗೆದ್ದುಕೊಟ್ಟಿದ್ದ ನಾಯಕ!

author img

By

Published : Nov 4, 2021, 3:05 PM IST

ಈಗಾಗಲೇ ಭಾರತ ಮಹಿಳಾ ತಂಡದ ಸ್ಟಾರ್​ಗಳಾದ ಹರ್ಮನ್​ ಪ್ರೀತ್ ಕೌರ್, ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜಮೀಮಾ ರೋಡ್ರಿಗಸ್​ ಸೇರಿದಂತೆ 8 ಮಂದಿ WBBL ಲೀಗ್​ನಲ್ಲಿ ಆಡುತ್ತಿದ್ದಾರೆ. ಆದರೆ ವಿದೇಶಿ ಟಿ20 ಲೀಗ್​ಗಳಲ್ಲಿ ಆಡುವುದಕ್ಕೆ ಪುರುಷರಿಗೆ ಅವಕಾಶವಿಲ್ಲ,ಆದರೆ ಚಾಂದ್​ ನಿವೃತ್ತಿ ಘೋಷಿಸಿರುವುದರಿಂದ ಬಿಬಿಎಲ್​ನಲ್ಲಿ ಹೊಸ ಇನ್ನಿಂಗ್ಸ್​ ಆರಂಭಿಸುತ್ತಿದ್ದಾರೆ. ಅವರು ಆ್ಯರೋನ್ ಫಿಂಚ್ ನಾಯಕರಾಗಿರುವ ಮೆಲ್ಬೋರ್ನ್ ರೆನಿಗೇಡ್ಸ್ ತಂಡವನ್ನು ತಂಡದ ಪರ 2021ರ ಆವೃತ್ತಿಯಲ್ಲಿ ಆಡಲಿದ್ದಾರೆ.

Unmukt Chand
ಉನ್ಮುಕ್ತ್ ಚಾಂದ್

ಮೆಲ್ಬೋರ್ನ್​: ಇತ್ತೀಚೆಗೆ ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ 2012ರ ಅಂಡರ್​ 19 ವಿಶ್ವಕಪ್​ ವಿಜೇತ ತಂಡದ ನಾಯಕ ಉನ್ಮುಕ್ತ್​ ಚಾಂದ್​ ಆಸ್ಟ್ರೇಲಿಯಾದ ಟಿ20 ಲೀಗ್​ ಆದ ಬಿಗ್​ಬ್ಯಾಷ್​​ ಲೀಗ್​ನಲ್ಲಿ ಮೆಲ್ಬೋರ್ನ್​ ರೆನೆಗೇಡ್ಸ್​ ಪರ ಆಡಲಿದ್ದಾರೆ. ಈ ಮೂಲಕ ಐಪಿಎಲ್​ ನಂತರದ ಶ್ರೇಷ್ಠ ಲೀಗ್​ ಆಗಿರುವ ಬಿಬಿಎಲ್​ನಲ್ಲಿ ಆಡಲಿರುವ ಭಾರತದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.

ದೇಶಿ ಕ್ರಿಕೆಟ್​ ಹಾಗೂ ಐಪಿಎಲ್​ನಲ್ಲಿ ಸೂಕ್ತ ಅವಕಾಶ ಸಿಗದ ಕಾರಣ 28 ವರ್ಷದ ಉನ್ಮುಕ್ತ್ ಚಾಂದ್​ ಅಮೆರಿಕಾ ತಂಡವನ್ನು ಪ್ರತಿನಿಧಿಸುವ ಉದ್ದೇಶದಿಂದ ಇದೇ ವರ್ಷ ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಭಾರತಕ್ಕೆ ಕಿರಿಯರ ವಿಶ್ವಕಪ್​ ಗೆದ್ದುಕೊಟ್ಟಿದ್ದ ವಿರಾಟ್​ ಕೊಹ್ಲಿ, ಪೃಥ್ವಿ ಶಾ ಅವರಂತೆ ಚಾಂದ್​ ಭಾರತೀಯ ಕ್ರಿಕೆಟ್​ನಲ್ಲಿ ಹೆಸರುವಾಸಿಯಾಗಲು ವಿಫಲರಾದರು. ನಂತರ ಐಪಿಎಲ್​, ದೇಶಿ ಕ್ರಿಕೆಟ್​ನಲ್ಲಿ ಅವಕಾಶ ವಂಚಿತನಾದ ದೆಹಲಿ ಬ್ಯಾಟರ್​ ಕೊನೆಗೆ ಉಳಿದಿರುವ ಕೆಲವು ವರ್ಷಗಳಲ್ಲಿ ಕ್ರಿಕೆಟ್​ನಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಅಮೆರಿಕಾಗೆ ವಲಸೆ ಹೋಗಿದ್ದಾರೆ.

ಇನ್ನು ತಮಗೆ ಬಿಬಿಎಲ್​ನಲ್ಲಿ ಆಡುವುದಕ್ಕೆ ಅವಕಾಶ ಸಿಕ್ಕಿರುವುದರ ಬಗ್ಗೆ ಪ್ರತಿಕ್ರಿಯಿಸಿರುದ ಚಾಂದ್​ " ಮೆಲ್ಬೋರ್ನ್ ರೆನಿಗೇಡ್ಸ್ ಕುಟುಂಬದ ಭಾಗವಾಗಿರಲು ಹೆಮ್ಮೆಯಾಗುತ್ತಿದೆ. ಬಿಗ್ ಬ್ಯಾಷ್ ಲೀಗ್ ಟೂರ್ನಮೆಂಟ್​​ಅನ್ನು ನಾನು ಯಾವಾಗಲೂ ನೋಡುತ್ತಿದ್ದೆ. ಇದೀ ಈ ಪ್ರತಿಷ್ಠಿತ ಲೀಗ್​ನಲ್ಲಿ ಆಡುವುದಕ್ಕೆ ಒಂದು ಅವಕಾಶ ಸಿಕ್ಕಿದೆ. ಮೆಲ್ಬೋರ್ನ್​ಗೆ ಬಂದು ಟೂರ್ನಿಯಲ್ಲಿ ಪಾಲ್ಗೊಳ್ಳಲು ತುದಿಗಾಲಿನಲ್ಲಿ ಇದ್ದೇನೆ. ಮೆಲ್ಬೋರ್ನ್​ಗೆ ನಾನು ಭೇಟಿ ಕೊಟ್ಟಿಲ್ಲ. ಇಲ್ಲಿ ಬಹಳಷ್ಟು ಭಾರತೀಯರಿದ್ದಾರೆ ಎಂದು ತಿಳಿದಿದ್ದೇನೆ, ನಮ್ಮ ಪಂದ್ಯಗಳಿಗೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆಂದು ಭಾವಿಸಿದ್ಧೇನೆ " ಎಂದು ಹೇಳಿದ್ದಾರೆ.

ಇದನ್ನು ಓದಿ:ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ; ನಾರಾಯಣಗೌಡ ಅಭಿನಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.