ಹೈದರಾಬಾದ್: ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ಕೊಲಂಬೋದ ಆರ್.ಪ್ರೇಮದಾಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಂಕಾ ಮೇಲೆ ಎಲ್ಲ ವಿಭಾಗಗಳಲ್ಲೂ ಸವಾರಿ ಮಾಡಿದ ಶಿಖರ್ ಧವನ್ ಪಡೆ, ಸುಲಭ ಗೆಲುವು ದಾಖಲಿಸಿತು. ಇದರ ಬಗ್ಗೆ ಮಾತನಾಡಿರುವ ರಮೀಝ್ ರಾಜಾ, ಭಾರತ-ಶ್ರೀಲಂಕಾ ತಂಡಗಳನ್ನು "University team vs School team" ಎಂದು ಹೋಲಿಸಿದ್ದಾರೆ.
ತವರು ನೆಲದಲ್ಲಿ ಶ್ರೀಲಂಕಾ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಟೀಂ ಇಂಡಿಯಾ ಸ್ಪಿನ್ನರ್‌ಗಳ ವಿರುದ್ಧ ಇಷ್ಟೊಂದು ಕಳಪೆ ಪ್ರದರ್ಶನ ನೀಡಿದ್ದು ನಿಜಕ್ಕೂ ಆಘಾತಕಾರಿ ಎಂದಿದ್ದಾರೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ. ವಿಶ್ವವಿದ್ಯಾಲಯ ಹಾಗೂ ಶಾಲಾ ಹಂತದ ತಂಡಗಳ ನಡುವಿನ ಭಿನ್ನಾಭಿಪ್ರಾಯ ಇಲ್ಲಿ ಕಂಡು ಬಂದಿದ್ದು, ಭಾರತದ ಪ್ರದರ್ಶನ ಶ್ಲಾಘನೀಯ ಎಂದರು.
ಮೊದಲು ಬ್ಯಾಟಿಂಗ್ ನಡೆಸಿದ್ದ ಲಂಕಾ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 262 ರನ್ಗಳಿಕೆ ಮಾಡಿತ್ತು. ಈ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಕೇವಲ 36.4 ಓವರ್ಗಳಲ್ಲಿ ಮೂರೇ ವಿಕೆಟ್ ಕಳೆದುಕೊಂಡು ಮ್ಯಾಚ್ ಗೆದ್ದಿತ್ತು. ತಂಡದ ಪರ ಪೃಥ್ವಿ ಶಾ (43ರನ್), ಶಿಖರ್ ಧವನ್ (86ರನ್ ಅಜೇಯ), ಇಶಾನ್ ಕಿಶನ್ (59), ಪಾಂಡೆ (26) ಹಾಗೂ ಸೂರ್ಯಕುಮಾರ್ ಯಾದವ್ (31ಅಜೇಯ) ರನ್ಗಳಿಕೆ ಮಾಡಿ ತಂಡದ ಗೆಲುವಿನ ರೂವಾರಿಗಳಾದರು.