ನವದೆಹಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ ಟಿ -20 ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಕ್ಯಾಪ್ಟನ್ ಕೆಎಲ್ ರಾಹುಲ್ ನೇತೃತ್ವದಲ್ಲಿ ಭಾರತ ತಂಡ ಅಭ್ಯಾಸದಲ್ಲಿ ನಿರತವಾಗಿದೆ. ತಂಡಕ್ಕೆ ಕೋಚ್ ರಾಹುಲ್ ದ್ರಾವಿಡ್ ತರಬೇತಿ ನೀಡ್ತಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳಿಗೆ ಈ ಸಲ ಮಣೆ ಹಾಕಿರುವ ಕಾರಣ, ನಾಳಿನ ಪಂದ್ಯಕ್ಕಾಗಿ ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬ ಕುತೂಹಲ ಮೂಡಿದೆ. ಐಪಿಎಲ್ನಲ್ಲಿ ಹಲ್ಚಲ್ ಎಬ್ಬಿಸಿದ ವೇಗದ ಬೌಲರ್ ಉಮ್ರಾನ್ ಮಲಿಕ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವುದು ಸ್ವಲ್ಪ ಕಷ್ಟ ಎನ್ನಲಾಗ್ತಿದೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿದ್ದು, ಉಮ್ರಾನ್ ಮಲಿಕ್ ಅವರ ಸರದಿ ಬರುವವರೆಗೂ ಕಾಯಬೇಕು ಎಂಬ ಮಾತು ಹೇಳಿದ್ದಾರೆ. ನೆಟ್ನಲ್ಲಿ ಉಮ್ರಾನ್ ಮಲಿಕ್ ಬೌಲಿಂಗ್ ಶೈಲಿಗೆ ಕೋಚ್ ದ್ರಾವಿಡ್ ಫಿದಾ ಆಗಿರುವ ಕೋಚ್, ಅವರ ಬೌಲಿಂಗ್ ಶೈಲಿ ಉತ್ತಮವಾಗಿದ್ದು, ಖಂಡಿತವಾಗಿ ಮೂರು ಮಾದರಿ ಕ್ರಿಕೆಟ್ನಲ್ಲಿ ಅಂತಹ ಬೌಲರ್ ಬೇಕು. ಆದರೆ, ತಂಡದಲ್ಲಿ ಕೆಲ ಹಿರಿಯ ಬೌಲರ್ಗಳಿರುವ ಕಾರಣ ಉಮ್ರಾನ್ ಮಲಿಕ್ ಸರದಿ ಬರುವವರೆಗೂ ಕಾಯಬೇಕು ಎಂದು ತಿಳಿಸಿದ್ದಾರೆ.
-
We have a challenge ahead of us against a strong South African side: #TeamIndia Head Coach Rahul Dravid 💪#INDvSA | @Paytm pic.twitter.com/AFaZ2XTuNn
— BCCI (@BCCI) June 7, 2022 " class="align-text-top noRightClick twitterSection" data="
">We have a challenge ahead of us against a strong South African side: #TeamIndia Head Coach Rahul Dravid 💪#INDvSA | @Paytm pic.twitter.com/AFaZ2XTuNn
— BCCI (@BCCI) June 7, 2022We have a challenge ahead of us against a strong South African side: #TeamIndia Head Coach Rahul Dravid 💪#INDvSA | @Paytm pic.twitter.com/AFaZ2XTuNn
— BCCI (@BCCI) June 7, 2022
ಇದನ್ನೂ ಓದಿ: 'ಸ್ಪೀಡ್ ಸೆ ಕುಚ್ ನಹೀ ಹೋತಾ'.. ಉಮ್ರಾನ್ ಮಲಿಕ್ ಬೌಲಿಂಗ್ ಬಗ್ಗೆ ಪಾಕ್ ವೇಗಿ ಹೀಗೆ ಹೇಳಿದ್ಯಾಕೆ?
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೋಸ್ಕರ ಅರ್ಷದೀಪ್ ಸಹ ಆಯ್ಕೆಯಾಗಿರುವ ಕಾರಣ, ಉತ್ತಮ ಯಾರ್ಕರ್ ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಇವರಿಗೆ ಚಾನ್ಸ್ ಸಿಗುವ ಸಾಧ್ಯತೆ ಇದೆ. ಉಳಿದಂತೆ ತಂಡದಲ್ಲಿ ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರಂತಹ ಬೌಲರ್ಗಳು ಇರುವ ಕಾರಣ,ತಂಡದಲ್ಲಿ ಉಮ್ರನ್ ಮಲಿಕ್ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗ್ತಿದೆ.
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿರುವ ಉಮ್ರಾನ್ ಮಲಿಕ್ 22 ವಿಕೆಟ್ ಪಡೆದು, ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಪ್ರತಿ ಗಂಟೆಗೆ 157 ಕಿ. ಮೀ ವೇಗದಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು. ಐಪಿಎಲ್ನಲ್ಲಿ ಶರವೇಗದ ಬೌಲಿಂಗ್ ಮಾಡುವ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ.
ಜೂನ್ 9ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಇದಾದ ಬಳಿಕ ಜೂನ್ 12ರಂದು ಕಟಕ್, ಜೂನ್ 14 ವಿಶಾಖಪಟ್ಟಣಂ, ಜೂನ್ 17 ರಾಜ್ಕೋಟ್ ಹಾಗೂ ಜೂನ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯ ನಡೆಯಲಿದೆ. ಎರಡು ತಿಂಗಳ ಕಾಲ ಸುದೀರ್ಘ ಐಪಿಎಲ್ನಲ್ಲಿ ಭಾಗಿಯಾಗಿರುವ ಕಾರಣ ಟೀಂ ಇಂಡಿಯಾ ಖಾಯಂ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಅನೇಕ ಹಿರಿಯರು ವಿಶ್ರಾಂತಿ ಪಡೆದುಕೊಂಡಿದ್ದಾರೆ. ಹೀಗಾಗಿ, ತಂಡವನ್ನ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.