ETV Bharat / sports

'ನಿಜವಾಗಿಯೂ ನೀವು ದೇವರ ಮಗು': ಪತಿ ವಿರಾಟ್ ಕೊಹ್ಲಿಯನ್ನು ಮನಸಾರೆ ಹೊಗಳಿದ ಅನುಷ್ಕಾ ಶರ್ಮಾ - ಅನುಷ್ಕಾ ಶರ್ಮಾ ವಿಶೇಷ ಪೋಸ್ಟ್​

Anushka Sharma showers praises on Virat Kohli: 50ನೇ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದರು. ಪತಿಯ ಸಾಧನೆಯನ್ನು ವಿಶೇಷ ಪೋಸ್ಟ್​ ಹಂಚಿಕೊಂಡು ಅನುಷ್ಕಾ ಶರ್ಮಾ ಕೊಂಡಾಡಿದ್ದಾರೆ.

Anushka Sharma
ಅನುಷ್ಕಾ ಶರ್ಮಾ
author img

By ETV Bharat Karnataka Team

Published : Nov 16, 2023, 9:12 AM IST

Updated : Nov 16, 2023, 9:37 AM IST

ಹೈದರಾಬಾದ್: ನಿನ್ನೆ ನಡೆದ ಭಾರತ-ನ್ಯೂಜಿಲೆಂಡ್ ನಡುವಣ ಏಕದಿನ ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನ​ 50ನೇ ಶತಕ ಸಿಡಿಸಿ ಸಂಭ್ರಮಿಸಿದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐತಿಹಾಸಿಕ ಪಂದ್ಯಕ್ಕೆ ಪತ್ನಿ ಅನುಷ್ಕಾ ಶರ್ಮಾ ಕೂಡಾ ಸಾಕ್ಷಿಯಾಗಿದ್ದರು. ತಮ್ಮ ಪತಿಯ ಅಸಾಮಾನ್ಯ ಸಾಧನೆಯನ್ನು ವಿಶೇಷ ಉತ್ಸಾಹ ಮತ್ತು ಅಪಾರ ಸಂತೋಷದಿಂದ ಅವರು ಕಣ್ತುಂಬಿಕೊಂಡರು. ಜೊತೆಗೆ, ಸ್ಟೇಡಿಯಂನಲ್ಲಿಯೇ ವಿರಾಟ್‌ಗೆ ಫ್ಲೈಯಿಂಗ್ ಕಿಸ್ ನೀಡಿದ್ದು, ಇದೀಗ ಇನ್ಸ್​ಸ್ಟಾಗ್ರಾಮ್​ನಲ್ಲಿ ವಿಶೇಷ ಪೋಸ್ಟ್​ವೊಂದನ್ನು ಬರೆದಿದ್ದಾರೆ.

Anushka Sharma
ಅನುಷ್ಕಾ ಶರ್ಮಾ ಪೋಸ್ಟ್​

ಅನುಷ್ಕಾ ಶರ್ಮಾ ಇನ್ಸ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಪತಿಯನ್ನು, 'ದೇವರ ಮಗು' ಎಂದು ಕರೆದಿದ್ದಾರೆ. "ದೇವರು ಅತ್ಯುತ್ತಮ ಸ್ಕ್ರಿಪ್ಟ್ ರೈಟರ್! ನನಗೆ ನಿಮ್ಮ ಆಶೀರ್ವಾದ ಲಭಿಸಿರುವ ಜೊತೆಗೆ ವಿರಾಟ್​ ಪ್ರೀತಿ ಕೂಡ ದೊರೆತಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ವಿರಾಟ್​ ಮತ್ತಷ್ಟು ಯಶಸ್ಸು ಗಳಿಸಿ, ಬೆಳವಣಿಗೆ ಹೊಂದಲಿ. ನಿಮ್ಮೊಂದಿಗೆ ಮತ್ತು ಆಟದೊಂದಿಗೆ ಯಾವಾಗಲೂ ಪ್ರಾಮಾಣಿಕವಾಗಿರಿ. ನೀವು ನಿಜವಾಗಿಯೂ ದೇವರ ಮಗು" ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Sachin Tendulkar: ನಿಮ್ಮ ಆಟ ಹೃದಯ ಮುಟ್ಟಿದೆ ; "ವಿರಾಟ" ಶತಕಕ್ಕೆ ತಲೆಬಾಗಿದ ಕ್ರಿಕೆಟ್​ ದೇವರು

ಸಚಿನ್ ದಾಖಲೆ ಮುರಿದ ವಿರಾಟ್: ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ​ 50ನೇ ಶತಕ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದಿದ್ದಾರೆ. ಈ ಪಂದ್ಯದ ವೇಳೆ ಸಚಿನ್ ಕೂಡ ಕ್ರೀಡಾಂಗಣದಲ್ಲಿ ಹಾಜರಿದ್ದರು. ವಿರಾಟ್ ಸಾಧನೆಯನ್ನು ಎದ್ದು ನಿಂತು ಗೌರವಯುತವಾಗಿ ಅಭಿನಂದಿಸಿ, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • The first time I met you in the Indian dressing room, you were pranked by other teammates into touching my feet. I couldn’t stop laughing that day. But soon, you touched my heart with your passion and skill. I am so happy that that young boy has grown into a ‘Virat’ player.

    I… pic.twitter.com/KcdoPwgzkX

    — Sachin Tendulkar (@sachin_rt) November 15, 2023 " class="align-text-top noRightClick twitterSection" data=" ">

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​ : ನ್ಯೂಜಿಲೆಂಡ್​ ಮಣಿಸಿ ಫೈನಲ್​ಗೇರಿದ ಭಾರತ ; ಸಪ್ತ ವಿಕೆಟ್​ ಪಡೆದು ಮಿಂಚಿದ ಶಮಿ

ಇನ್ನು, ಅನುಷ್ಕಾ 2008ರಲ್ಲಿ ಶಾರುಖ್ ಖಾನ್ ಜೊತೆಗೆ 'ರಬ್ ನೇ ಬನಾ ದಿ ಜೋಡಿ' ಚಿತ್ರದಲ್ಲಿ ಅಭಿನಯಿಸುವ ಮೂಲಕ ನಟನಾ ವೃತ್ತಿ ಪ್ರಾರಂಭಿಸಿದ್ದರು. ನಟಿಯ ಮುಂಬರುವ ಸಿನಿಮಾ 'ಚಕ್ಡಾ ಎಕ್ಸ್‌ಪ್ರೆಸ್'. ಭಾರತೀಯ ಮಹಿಳಾ ಕ್ರಿಕೆಟ್​ ಆಟಗಾರ್ತಿ​ ಜೂಲನ್ ಗೋಸ್ವಾಮಿ ಅವರ ಜೀವನವನ್ನು ತೆರೆ ಮೇಲೆ ತರುವ ಪ್ರಯತ್ನ ನಡೆಯುತ್ತಿದೆ. ಚಿತ್ರವನ್ನು ಪ್ರೊಸಿತ್ ರಾಯ್ ನಿರ್ದೇಶಿಸಿದ್ದಾರೆ. ಕರ್ಣೇಶ್ ಶರ್ಮಾ ನಿರ್ಮಿಸಿದ್ದಾರೆ.

ಇದನ್ನೂ ಓದಿ: Virat Kohli : ಏಕದಿನ ಶತಕಗಳ ಅರ್ಧಶತಕ ದಾಖಲಿಸಿದ ವಿರಾಟ್​ : ಸಚಿನ್​ ದಾಖಲೆ ಉಡೀಸ್​

Last Updated : Nov 16, 2023, 9:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.