ಮುಂಬೈ : 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಬಯೋ ಬಬಲ್ನಲ್ಲಿ ಕೊರೊನಾ ಕಾಣಿಸಿಕೊಂಡ ಬೆನ್ನಲ್ಲೇ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಆದರೂ ಮೊದಲಾರ್ಧದಲ್ಲಿ ಐಪಿಎಲ್ ಅಭಿಮಾನಿಗಳಿಗೆ ಸಾಕಷ್ಟು ಉತ್ಸಾಹ, ಮನೋರಂಜನೆ ತಂದುಕೊಡುವಲ್ಲಿ ಮಾತ್ರ ವಿಫಲವಾಗಿಲ್ಲ.
ಸೋಮವಾರ ಆರ್ಸಿಬಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯಗಳು ರದ್ದಾಗುವ ವೇಳೆಗೆ ಸುಮಾರು 29 ಪಂದ್ಯಗಳು ಯಶಸ್ವಿಯಾಗಿ ನಡೆದಿವೆ. ಇಷ್ಟು ಪಂದ್ಯಗಳಲ್ಲಿ ಸಿಎಸ್ಕೆ ವಿರುದ್ಧ ಕೀರನ್ ಪೊಲಾರ್ಡ್ರ ವಿದ್ವಂಷಕ ಆಟ ಸೇರಿದಂತೆ ಐಪಿಎಲ್ನಲ್ಲಿ ಕಂಡು ಬಂದ ಟಾಪ್ 5 ಇನ್ನಿಂಗ್ಸ್ಗಳು ಇಲ್ಲಿವೆ.
ಕೀರನ್ ಪೊಲಾರ್ಡ್ vs ಸಿಎಸ್ಕೆ(34 ಎಸೆತಗಳಿಗೆ 87 ರನ್)
ಇದು ಐಪಿಎಲ್ನ ಅತ್ಯಂತ ಶ್ರೇಷ್ಠ ಇನ್ನಿಂಗ್ಸ್ ಎಂದರೆ ತಪ್ಪಾಗಲಾರದು. ಮುಂಬೈ ಇಂಡಿಯನ್ಸ್ ಸಿಎಸ್ಕೆ ನೀಡಿದ 219ರನ್ಗಳ ಬೃಹತ್ ಮೊತ್ತವನ್ನು ಚೇಸ್ ಮಾಡುತ್ತಿದ್ದ ಪಂದ್ಯದಲ್ಲಿ ಪೊಲಾರ್ಡ್ ಕೇವಲ 34 ಎಸೆತಗಳಲ್ಲಿ ಅಜೇಯ 87 ರನ್ ಚಚ್ಚುವ ಮೂಲಕ ಕೊನೆಯ ಎಸೆತದಲ್ಲಿ ಹಾಲಿ ಚಾಂಪಿಯನ್ಗೆ 4 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು. ಡೆಲ್ಲಿ ಚಿಕ್ಕ ಬೌಂಡರಿಯ ಲಾಭ ಪಡೆದ ಪೊಲಾರ್ಡ್ 6 ಬೌಂಡರಿ ಮತ್ತು 8 ಸಿಕ್ಸರ್ಗಳ ಸಹಿತ 255 ರನ್ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ ಅಚ್ಚರಿಯ ಜಯಕ್ಕೆ ಕಾರಣರಾದರು.
ಎಬಿ ಡಿ ವಿಲಿಯರ್ಸ್ vs ಕೆಕೆಆರ್ (34 ಎಸೆತಗಳಿಗೆ 74)
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ 95 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಇಳಿದ ಎಬಿಡಿ ಕೇವಲ 34 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 204 ರನ್ ಸಿಡಿಸಿ ಸ್ಪಿನ್ ಸ್ನೇಹಿ ಪಿಚ್ನಲ್ಲಿ 204 ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾದರು. ಈ ಪಂದ್ಯವನ್ನು ಆರ್ಸಿಬಿ 38 ರನ್ಗಳಿಂದ ಗೆಲುವು ಸಾಧಿಸಿತು.
ದೇವದತ್ ಪಡಿಕ್ಕಲ್ vs ರಾಜಸ್ಥಾನ್ ರಾಯಲ್ಸ್(52 ಎಸೆತಗಳಲ್ಲಿ 101)
ಈ ವಿಶೇಷ ಲಿಸ್ಟ್ನಲ್ಲಿರುವ ಮತ್ತೊಬ್ಬ ಆರ್ಸಿಬಿ ಬ್ಯಾಟ್ಸ್ಮನ್ ಆಗಿ ದೇವದತ್ ಪಡಿಕ್ಕಲ್ ಕಾಣಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ 400_ ರನ್ ಬಾರಿಸಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದ ಪಡಿಕ್ಕಲ್ ಈ ಆವೃತ್ತಿಯಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ್ದರು. ರಾಯಲ್ಸ್ ನೀಡಿದ್ದ 178 ರನ್ಗಳ ಗುರಿಯನ್ನು ಬೆನ್ನತ್ತುವ ವೇಳೆ ಪಡಿಕ್ಕಲ್ 47 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್ಗಳ ಸಹಿತ ಅಜೇಯ 101 ರನ್ಗಳಿಸಿದ್ದರು. ಅಲ್ಲದೇ ಕೊಹ್ಲಿ ಜೊತೆ ಸೇರಿ 181 ರನ್ಗಳ ದಾಖಲೆಯ ಜೊತೆಯಾಟದ ಜೊತೆಗೆ ಆರ್ಸಿಬಿಗೆ 101 ರನ್ಗಳ ಜಯ ತಂದುಕೊಟ್ಟಿದ್ದರು.
ಸಂಜು ಸಾಮ್ಸನ್ vs ಪಂಜಾಬ್ ಕಿಂಗ್ಸ್(63 ಎಸೆತಗಳಲ್ಲಿ 119 ರನ್)
2021ರ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನೂತನ ಕೋಚ್ ಆಗಿ ನೇಮಕಗೊಂಡಿದ್ದ ಸಂಜು ಸಾಮ್ಸನ್ ತಮ್ಮ ನಾಯಕತ್ವದ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದರು. ಅವರು ಪಂಜಾಬ್ ನೀಡಿದ್ದ 222 ರನ್ಗಳ ಗುರಿಯನ್ನು ಬೆನ್ನಟ್ಟುವ ವೇಳೆ 63 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್ಗಳ ಸಹಿತ 119 ರನ್ಗಳಿಸಿದರು. ಆದರೆ, ಕೊನೆಯ ಓವರ್ನಲ್ಲಿ 13 ರನ್ಗಳ ಬದಲಾಗಿ 8 ರನ್ ಸಿಡಿಸಲಷ್ಟೇ ಶಕ್ತರಾದರು. ಈ ಪಂದ್ಯವನ್ನು ರಾಜಸ್ಥಾನ್ 4 ರನ್ಗಳಿಂದ ಸೋಲು ಕಂಡಿತು.
ಜೋಸ್ ಬಟ್ಲರ್ vs ಹೈದರಾಬಾದ್(64 ಎಸೆತಗಳಲ್ಲಿ 124 ರನ್)
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಅಬ್ಬರಿಸಿದ್ದ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಅಲ್ಲದೇ ಒಟ್ಟಾರೆ 64 ಎಸೆತಗಳಲ್ಲಿ 124 ರನ್ ಚಚ್ಚಿದ್ದರು. ಇವರ ಇನ್ನಿಂಗ್ಸ್ನಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ ಒಳಗೊಂಡಿದ್ದವು. ಅಲ್ಲದೇ ರಾಜಸ್ಥಾನ ರಾಯಲ್ಸ್ ಪರ ಅತಿ ಹೆಚ್ಚು ವೈಯಕ್ತಿಕ ರನ್ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. ಈ ಪಂದ್ಯವನ್ನು ರಾಯಲ್ಸ್ 55 ರನ್ಗಳಿಂದ ಗೆಲುವು ಸಾಧಿಸಿತ್ತು.
ಇವು ಟಾಪ್ ಇನ್ನಿಂಗ್ಸ್ಗಳಾಗಿದ್ದರೆ, ಪ್ರೇಕ್ಷಕರ ಮನಗೆದ್ದ ಅದ್ಭುತ ಇನ್ನಿಂಗ್ಸ್ಗಳಲ್ಲಿ ಮಯಾಂಕ್ ಅಗರ್ವಾಲ್ ಅವರ ಅಜೇಯ 99(58), ಫಾಫ್ ಡು ಪ್ಲೆಸಿಸ್ 95(60), ಶಿಖರ್ ಧವನ್ 92(49), ಕನ್ನಡಿಗ ಕೆಎಲ್ ರಾಹುಲ್ ಅಜೇಯ 91 , ಪೃಥ್ವಿ ಶಾ 82 ಕೂಡ ಈ ಐಪಿಎಲ್ನಲ್ಲಿ ಅತ್ಯಂತ ಶ್ರೇಷ್ಠ ಇನ್ನಿಂಗ್ಸ್ಗಳಾಗಿವೆ.
ಇದನ್ನು ಓದಿ:ಐಪಿಎಲ್ ಪೂರ್ಣವಾಗದಿದ್ದರೂ ಆಟಗಾರರಿಗೆ ಸಿಗುತ್ತೆ ಸಂಪೂರ್ಣ ವೇತನ.. ಹೇಗೆ? ಇಲ್ಲಿದೆ ನೋಡಿ ಮಾಹಿತಿ