ಹೈದರಾಬಾದ್(ಡೆಸ್ಕ್): ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದ ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ ಪ್ರತಿಷ್ಠಿತ ಲಾರಿಯಸ್ ವರ್ಲ್ಡ್ ಬ್ರೇಕ್ ಥ್ರೋ ಆಫ್ ದ ಇಯರ್ ಪ್ರಶಸ್ತಿಗೆ ವಿಶ್ವದ ಇತರೆ 5 ದಿಗ್ಗಜ ಕ್ರೀಡಾಪಟುಗಳೊಂದಿಗೆ ನಾಮನಿರ್ದೇಶನಗೊಂಡಿದ್ದಾರೆ.
1300ಕ್ಕೂ ಹೆಚ್ಚು ಕ್ರೀಡಾ ಪತ್ರಕರ್ತರು ಮತ್ತು ವಿಶ್ವದ ಪ್ರಸಾರಕರು ಈ ವರ್ಷದ ಲಾರಿಯಸ್ ವರ್ಲ್ಡ್ ಸ್ಪೋರ್ಟ್ಸ್ ಪ್ರಶಸ್ತಿಗಗಳ 7 ವಿಭಾಗಗಳಿಗೆ ನಾಮನಿರ್ದೇಶಿತರನ್ನು ಆಯ್ಕೆ ಮಾಡಿದ್ದಾರೆ. ಸಾರ್ವಕಾಲಿಕ 71 ಶ್ರೇಷ್ಠ ಕ್ರೀಡಾ ದಂತಕಥೆಗಳನ್ನು ಒಳಗೊಂಡಿರುವ ಕ್ರೀಡಾ ತೀರ್ಪುಗಾರರು ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಮತದಾನ ಮಾಡಿ ವಿಜೇತರನ್ನು ಏಪ್ರಿಲ್‌ನಲ್ಲಿ ಘೋಷಿಸಲಿದ್ದಾರೆ.
-
👏 Six incredible athletes who burst onto the scene in 2021, here are Nominees for the 2022 Laureus World Breakthrough of the Year Award:
— Laureus (@LaureusSport) February 2, 2022 " class="align-text-top noRightClick twitterSection" data="
🇮🇳 @Neeraj_chopra1
🎾 @DaniilMedwed
⚽️ @Pedri
🎾 @EmmaRaducanu
🇻🇪 @TeamRojas45
🏊♀️ #AriarneTitmus#Laureus22 pic.twitter.com/kfmU1qnAZg
">👏 Six incredible athletes who burst onto the scene in 2021, here are Nominees for the 2022 Laureus World Breakthrough of the Year Award:
— Laureus (@LaureusSport) February 2, 2022
🇮🇳 @Neeraj_chopra1
🎾 @DaniilMedwed
⚽️ @Pedri
🎾 @EmmaRaducanu
🇻🇪 @TeamRojas45
🏊♀️ #AriarneTitmus#Laureus22 pic.twitter.com/kfmU1qnAZg👏 Six incredible athletes who burst onto the scene in 2021, here are Nominees for the 2022 Laureus World Breakthrough of the Year Award:
— Laureus (@LaureusSport) February 2, 2022
🇮🇳 @Neeraj_chopra1
🎾 @DaniilMedwed
⚽️ @Pedri
🎾 @EmmaRaducanu
🇻🇪 @TeamRojas45
🏊♀️ #AriarneTitmus#Laureus22 pic.twitter.com/kfmU1qnAZg
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಲಾರಿಯಸ್ ವರ್ಲ್ಡ್ ಬ್ರೇಕ್ಥ್ರೋ ಆಫ್ ದ ಇಯರ್ ಪ್ರಶಸ್ತಿಗೆ ನೀರಜ್ ಜೊತೆಗೆ ಮೊದಲ ಗ್ರ್ಯಾಂಡ್ ಸ್ಲಾಮ್ ಗೆದ್ದಿರುವ ರಷ್ಯಾದ ಟೆನಿಸ್ ಆಟಗಾರ ಡ್ಯಾನಿಯಲ್ ಮೆಡ್ವೆಡೆವ್, ಸ್ಪೇನ್ ಫುಟ್ಬಾಲ್ ತಂಡದ ಪರ ಎಲ್ಲಾ ಪಂದ್ಯಗಳನ್ನು ಆಡಿದ ಮತ್ತು ಬಾರ್ಸಿಲೋನಾ ಪರ 53 ಪಂದ್ಯಗಳನ್ನಾಡಿರುವ ಆಟಗಾರ ಪೆಡ್ರಿ, 18 ವರ್ಷಕ್ಕೆ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಗೆದ್ದ ಇಂಗ್ಲೆಂಡ್ನ ಎಮ್ಮಾ ರಡುಕಾನು, ಟೋಕಿಯೋದಲ್ಲಿ ತ್ರಿಪಲ್ ಜಂಪನ್ನಲ್ಲಿ ವಿಶ್ವದಾಖಲೆ ಬ್ರೇಕ್ ಮಾಡಿದ ವೆನುಜವೆಲಾದ ಯುಲಿಮಾರ್ ರೋಜಸ್, 20ನೇ ವಯಸ್ಸಿಗೆ ಟೋಕಿಯೋದಲ್ಲಿ 200 ಮೀಟರ್ ಮತ್ತು 400 ಮೀಟರ್ ಈಜು ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಅರಿಯಾರ್ನೆ ಟಿಟ್ಮಸ್ ಸ್ಪರ್ಧೆಯಲ್ಲಿದ್ದಾರೆ.
ನೀರಜ್ ಚೋಪ್ರಾ ಟೋಕಿಯೋದಲ್ಲಿ ಜಾವಲಿನ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದರು. ಈ ಮೂಲಕ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ 2ನೇ ಭಾರತೀಯ ಎನಿಸಿಕೊಂಡಿದ್ದರು. 23 ವರ್ಷದ ನೀರಜ್ 87.58 ಮೀಟರ್ ಜಾವಲಿನ್ ಎಸೆದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. 2008ರಲ್ಲಿ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಅಭಿನವ್ ಬಿಂದ್ರಾ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದರು.
ಇದನ್ನೂ ಓದಿ:ಪಿಎಸ್ಎಲ್ ವಿಶ್ವದ 2ನೇ ಅತ್ಯುತ್ತಮ ಟಿ20 ಲೀಗ್, IPLಗಿಂತ ಹೆಚ್ಚು ಹಿಂದೆ ಉಳಿದಿಲ್ಲ: ಮೈಕಲ್ ವಾನ್