ETV Bharat / sports

ಆ್ಯಶಸ್ ಟೆಸ್ಟ್​​ ಸರಣಿಗೂ ಮುನ್ನ ಆಸೀಸ್​ಗೆ ಮತ್ತೊಂದು ಶಾಕ್​.. ಕ್ರಿಕೆಟ್​ನಿಂದ ದೂರ ಸರಿದ ಟಿಮ್ ಪೇನ್​​ - ವಿರಾಮ ಪಡೆದ ಟಿಮ್​ ಪೇನ್

​​ಮಾನಸಿಕ ಆರೋಗ್ಯಕ್ಕಾಗಿ ಟಿಮ್​ ಪೇನ್​​ ಅನಿರ್ದಿಷ್ಟ ವಿರಾಮ ಪಡೆದು ಕ್ರಿಕೆಟ್‌ನಿಂದ ದೂರ ಸರಿಯುತ್ತಿದ್ದಾರೆ ಎಂದು ಅವರ ಮ್ಯಾನೇಜರ್, ಜೇಮ್ಸ್ ಹೆಂಡರ್ಸನ್ ದೃಢಪಡಿಸಿದ್ದಾರೆ. ಆ್ಯಶಸ್ ಟೆಸ್ಟ್​ ಸರಣಿ ಆರಂಭಕ್ಕೆ ಕೇವಲ 12 ದಿನಗಳಿರುವಾಗಲೇ ಪೇನ್ ಈ ನಿರ್ಧಾರ ಮಾಡಿದ್ದಾರೆ.

Tim Paine is stepping away from all cricket
ಟಿಮ್ ಪೇನ್​​
author img

By

Published : Nov 26, 2021, 7:39 AM IST

Updated : Nov 26, 2021, 9:07 AM IST

ಮೆಲ್ಬೋರ್ನ್​: ಲೈಂಗಿಕವಾಗಿ ಕೆರಳಿಸುವ ಸಂದೇಶ ಕಳುಹಿಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದ ಟಿಮ್ ಪೇನ್ ಮತ್ತೊಂದು ಆಘಾತಕಾರಿ ಘೋಷಣೆ ಮಾಡಿದ್ದಾರೆ. ಅವರು ತಮ್ಮ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಅನಿರ್ದಿಷ್ಟ ವಿರಾಮ ತೆಗೆದುಕೊಂಡಿದ್ದಾರೆ.

ಆ್ಯಶಸ್ ಟೆಸ್ಟ್​ ಸರಣಿ ಆರಂಭಕ್ಕೆ ಕೇವಲ 12 ದಿನಗಳಿರುವಾಗಲೇ ಪೇನ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಈ ಬಗ್ಗೆ ಪೇನ್​​ ಅವರ ಮ್ಯಾನೇಜರ್, ಜೇಮ್ಸ್ ಹೆಂಡರ್ಸನ್, ಮಾನಸಿಕ ಆರೋಗ್ಯಕ್ಕಾಗಿ ಪೇನ್​​ ಅನಿರ್ದಿಷ್ಟ ವಿರಾಮ ಪಡೆದು ಕ್ರಿಕೆಟ್‌ನಿಂದ ದೂರ ಸರಿಯುತ್ತಿದ್ದಾರೆ ಎಂದು ದೃಢಪಡಿಸಿದ್ದಾರೆ. ಅವರ ಮತ್ತು ಪತ್ನಿ ಬೋನಿ ಯೋಗಕ್ಷೇಮದ ಬಗ್ಗೆ ನಾವು ತುಂಬಾ ಕಾಳಜಿ ವಹಿಸುತ್ತೇವೆ. ಈ ಸಮಯದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

  • Confirming that @tdpaine36 is stepping away from cricket for an indefinite mental health break. We are extremely concerned for his and Bonnie’s well-being and will be making no further comment at this time.

    — James Henderson (@jahenderson63) November 25, 2021 " class="align-text-top noRightClick twitterSection" data=" ">

ಈ ಬೇಸಿಗೆಯಲ್ಲಿನ ಆ್ಯಶಸ್ ಸರಣಿಯನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಟೆಸ್ಟ್ ಕ್ರಿಕೆಟ್‌ನಿಂದ ಪೇನ್​ ನಿವೃತ್ತಿ ಹೊಂದಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಯಾವಾಗ ಕ್ರಿಕೆಟ್​​ ಆಡಲು ಮರಳುತ್ತಾರೆ ಎಂಬುದರ ಕುರಿತು ಸದ್ಯ ಯಾವುದೇ ದೃಢ ನಿರ್ಧಾರ ತಿಳಿಸಿಲ್ಲ.

ಹೊಸ ವಿಕೆಟ್​ ಕೀಪರ್​:

ಪೇನ್​ ಅನುಪಸ್ಥಿತಿಯಲ್ಲಿ ಆ್ಯಶಸ್​ ಸರಣಿಗೆ ತಕ್ಷಣ ಹೊಸ ವಿಕೆಟ್​ ಕೀಪರ್​ ಆಯ್ಕೆ ಮಾಡುವ ಸವಾಲು ಕ್ರಿಕೆಟ್​ ಆಸ್ಟ್ರೇಲಿಯಾ ಎದುರಿಗಿದೆ. ಗಬ್ಬಾದಲ್ಲಿ ಆರಂಭವಾಘಲಿರುವ ಮೊದಲ ಪಂದ್ಯಕ್ಕೆ ಅಲೆಕ್ಸ್ ಕ್ಯಾರಿ ಮತ್ತು ಜೋಶ್ ಇಂಗ್ಲಿಸ್ ಪೇನ್ ಅವರ ಸ್ಥಾನ ತುಂಬಲು ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಮೊದಲೆರಡು ಆ್ಯಶಸ್ ಟೆಸ್ಟ್‌ಗಳಿಗಾಗಿ ಆಯ್ಕೆಯಾದ ಆಸ್ಟ್ರೇಲಿಯಾದ 15 ಆಟಗಾರರ ತಂಡದಲ್ಲಿ ಪೇನ್​ ಏಕೈಕ ವಿಕೆಟ್‌ ಕೀಪರ್ ಆಗಿದ್ದರು.

ನಾಯಕ ಯಾರು?

ಅಲ್ಲದೆ ಪೇನ್​ ಬಳಿ ಟೆಸ್ಟ್ ನಾಯಕನಾಗಿ ಇನ್ನೂ ಯಾರು ಎಂಬ ಬಗ್ಗೆ ಇನ್ನೂ ಘೋಷಣೆಯಾಗಿಲ್ಲ. ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಹೆಸರು ಮಂಚೂಣಿಯಲ್ಲಿದೆ. ಪೇನ್​ ಅವರನ್ನು 'ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್' ಎಂದು ಕರೆಯುವ ಮೂಲಕ ತಮ್ಮ ಸಹ ಆಟಗಾರನಿಗೆ ಸ್ಪಿನ್ನರ್​ ನಾಥನ್​ ಲಿಯೋನ್​ ಬೆಂಬಲ ವ್ಯಕ್ತಪಡಿಸಿದ್ದರು.

ಐತಿಹಾಸಿಕ ಆ್ಯಶಸ್​ ಟೆಸ್ಟ್​ ಸರಣಿಯ ಮೊದಲ ಪಂದ್ಯವು ಬ್ರಿಸ್ಬೇನ್​​ನ ಗಬ್ಬಾದಲ್ಲಿ ಡಿ. 8ರಿಂದ ಆರಂಭವಾಗಲಿದೆ.

ಇದನ್ನೂ ಓದಿ: ಶ್ರೇಯಸ್​ ಟೆಸ್ಟ್ ಆಟ ನೋಡುವ ಕನಸು ನನಸಾಗಿದೆ: ಅಯ್ಯರ್ ತಂದೆ 'ಸಂತೋಷ'

Last Updated : Nov 26, 2021, 9:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.