ಚೆಸ್ಟರ್-ಲೆ-ಸ್ಟ್ರೀಟ್: ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿ ವೇಳೆ ಬಯೋ ಬಬಲ್ ಉಲ್ಲಂಘನೆ ಮಾಡಿರುವ ಲಂಕಾದ ಮೂವರು ಪ್ಲೇಯರ್ಸ್ಗೆ ಇದೀಗ ಮತ್ತಷ್ಟು ಸಂಕಷ್ಟ ಉಂಟಾಗಿದ್ದು, ಭಾರತ ವಿರುದ್ಧದ ಸರಣಿಯಿಂದಲೂ ಅವರನ್ನು ಹೊರಗಿಡಲಾಗಿದೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ-20 ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಲಂಕಾದ ಉಪನಾಯಕ ಕುಶಾಲ್ ಮೆಂಡಿಸ್, ಆರಂಭಿಕ ಆಟಗಾರ ದನುಷ್ಕಾ ಗುಣ ತಿಲಕ್ ಹಾಗೂ ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಬಯೋಬಬಲ್ ಉಲ್ಲಂಘನೆ ಮಾಡಿ ಅಲ್ಲಿನ ಬಿದಿಗಳಲ್ಲಿ ಸುತ್ತಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗಿತ್ತು.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಅವರನ್ನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಕೈಬಿಡಲಾಗಿದ್ದು, ಲಂಕಾಗೆ ವಾಪಸ್ ಆಗುವಂತೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಜುಲೈ ತಿಂಗಳು ಭಾರತದ ವಿರುದ್ಧದ ಟಿ - 20 ಹಾಗೂ ಏಕದಿನ ಪಂದ್ಯಗಳಿಂದಲೂ ಕೈಬಿಡಲು ನಿರ್ಧಾರ ಮಾಡಿದೆ.
ಇದನ್ನೂ ಓದಿರಿ: ಬಯೋಬಬಲ್ ಉಲ್ಲಂಘನೆ: ಮೆಂಡಿಸ್ ಸೇರಿ ಲಂಕಾದ ಮೂವರು ಕ್ರಿಕೆಟರ್ಸ್ ಅಮಾನತು
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೋತಿರುವ ಲಂಕಾ ನಾಳೆ ಎರಡನೇ ಪಂದ್ಯವನ್ನಾಡಲಿದ್ದು, ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.