ETV Bharat / sports

ಆಸೀಸ್​ ಸರಣಿಯಲ್ಲಿ ಟಿ20 ವಿಶ್ವಕಪ್​ ಕದತಟ್ಟಿದ ಮೂವರು ಆಟಗಾರರಿವರು - ಆಸೀಸ್​ ಸರಣಿ

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಮುಂದಿನ ವರ್ಷ ನಡೆಯುವ ವಿಶ್ವಕಪ್​ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

T20 World Cup 2024
T20 World Cup 2024
author img

By ETV Bharat Karnataka Team

Published : Dec 4, 2023, 5:25 PM IST

ಹೈದರಾಬಾದ್​: ಏಕದಿನ ವಿಶ್ವಕಪ್​ ಮುಗಿದ ಬೆನ್ನಲ್ಲೇ ಎಲ್ಲಾ ಕ್ರಿಕೆಟ್​ ಸಂಸ್ಥೆಗಳು ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​​ನತ್ತ ಗಮನ ಹರಿಸಿದೆ. ತಂಡಗಳಲ್ಲಿ ಪ್ರಯೋಗ ನಡೆಸುತ್ತಿರುವುದಲ್ಲದೇ ಹೊಸಬರಿಗೆ ಮಣೆಹಾಕಿ ವಿಶ್ವಕಪ್​ಗೆ ಹೊಸ ತಂಡದ ತಯಾರಿಯ ಕಾರ್ಯಗಳು ನಡೆಯುತ್ತಿದೆ. ವಿಶ್ವಕಪ್​ ಮುಗಿದ ಬೆನ್ನಲ್ಲೇ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯಲ್ಲಿ ಕೆಲ ಆಟಗಾರರು ಮಿಂಚಿದ್ದು, 2024ರ ಟಿ20 ವಿಶ್ವಕಪ್​ನ ಕದ ತಟ್ಟಿದ್ದಾರೆ. ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಯುಎಸ್​ಎನಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಲಿದೆ.

ರವಿ ಬಿಷ್ಣೋಯ್: ಯುವ ಬಲಗೈ ಸ್ಪಿನ್ನರ್ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ತನ್ನ ಪ್ರಭಾವಶಾಲಿ ಅಂತಾರಾಷ್ಟ್ರೀಯ ಓಟವನ್ನು ಮುಂದುವರೆಸಿದ್ದಾರೆ. ಅವರು ಐದು ಪಂದ್ಯಗಳಲ್ಲಿ 8.20ರ ಎಕಾನಮಿ ದರ ಕಾಯ್ದುಕೊಂಡ ಇವರು, ಒಟ್ಟು ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20ಯಲ್ಲಿ ಪವರ್‌ಪ್ಲೇಯಲ್ಲೇ ಬೌಲಿಂಗ್​ ಮಾಡಿ ವಿಕೆಟ್​ ಪಡೆದು ಮಿಂಚಿದ್ದಾರೆ. ರವಿ ಆಸೀಸ್​ ವಿರುದ್ಧದ ಐದು ಪಂದ್ಯ ಸಿರೀಸ್​ನಲ್ಲಿ ಸರಣೀ ಶ್ರೇಷ್ಠ ಪ್ರಶಸ್ತಿ ಗೆದ್ದರು.

ಅವರು ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್​ ಅಶ್ವಿನ್ ಅವರಂತಹ ಅನುಭವಿಗಳಿಗೆ ಸ್ಪರ್ಧೆ ನೀಡಲಿದ್ದಾರೆ. ರವಿ ಇದುವರೆಗೆ ಆಡಿದ 21 ಟಿ20 ಗಳಲ್ಲಿ 17.38ರ ಸರಾಸರಿಯಲ್ಲಿ 34 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ ಅವರು 7ಕ್ಕಿಂತ ಹೆಚ್ಚಿನ ಎಕಾನಮಿ ದರ ಹೊಂದಿದ್ದಾರೆ.

ರಿಂಕು ಸಿಂಗ್​​​: ಕಳೆದ ಐಪಿಎಲ್​ನಲ್ಲಿ ಮಿಂಚಿದ ನಂತರ ಭಾರತ ತಂಡದಲ್ಲಿ ಸ್ಥಾನ ಪಡೆದ ರಿಂಕು ಸಿಂಗ್​ ಐರ್ಲೆಂಡ್​ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 4 ಪಂದ್ಯಗಳನ್ನು ಆಡಿದ ಅವರು 105 ರನ್​ ಕಲೆಹಾಕಿದ್ದಾರೆ. ಆಸೀಸ್​ ವಿರುದ್ಧ 2ನೇ ಪಂದ್ಯದಲ್ಲಿ 9 ಬಾಲ್​ನಲ್ಲಿ ಅಜೇಯ 31 ರನ್​ ಗಳಿಸಿದ್ದರು. ಅಲ್ಲದೇ ನಾಲ್ಕನೇ ಪಂದ್ಯದಲ್ಲಿ ಸಮಯೋಚಿತ 46 ರನ್​ನ ಇನ್ನಿಂಗ್ಸ್​ ಆಡಿದ್ದರು. ಇವರ ಆಟ ಕಂಡ ಮಾಜಿ ಆಟಗಾರರು ಟೀಮ್​ ಇಂಡಿಯಾಕ್ಕೆ ಫಿನಿಶರ್​ ಸಿಕ್ಕಿದ್ದಾನೆ ಎಂದು ಹೇಳುತ್ತಿದ್ದಾರೆ. ಭಾರತಕ್ಕೆ ಒಟ್ಟಾರೆ 10 ಪಂದ್ಯಗಳನ್ನು ರಿಂಕು ಸಿಂಗ್​​ ಆಡಿದ್ದು, ಅದರಲ್ಲಿ 6 ಇನ್ನಿಂಗ್ಸ್​ ಬ್ಯಾಟಿಂಗ್​ ಮಾಡಿರುವ ಅವರು 60ರ ಸರಾಸರಿಯಲ್ಲಿ 187.5 ಸ್ಟ್ರೈಕ್​ ರೇಟ್​ನಿಂದ 180 ರನ್​ ಕಲೆಹಾಕಿದ್ದಾರೆ.

ರುತುರಾಜ್ ಗಾಯಕ್ವಾಡ್: ಚುಟುಕು ಮಾದರಿಯ ಕ್ರಿಕೆಟ್​ನಲ್ಲಿ ರೋಹಿತ್​ ಶರ್ಮಾ ಸ್ಥಾನವನ್ನು ಆರಂಭಿಕರಾಗಿ ರುತುರಾಜ್ ಗಾಯಕ್ವಾಡ್ ಉತ್ತಮವಾಗಿ ನಿರ್ವಹಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶತಕ (123) ಮತ್ತು ಅರ್ಧಶತಕದ ಇನ್ನಿಂಗ್ಸ್​ ಆಡಿದ್ದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಾಗಲೆಲ್ಲಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಸೀಸ್​ ಸರಣಿಯ ಕೊನೆಯ ಪಂದ್ಯದಲ್ಲಿ 10 ರನ್​ ಗಳಿಸಿದ ಗಾಯಕ್ವಾಡ್ ಒಟ್ಟಾರೆ ಟಿ20 ಮಾದರಿಯಲ್ಲಿ 4000 ರನ್​ ಪೂರೈಸಿದ ಆಟಗಾರ ಆಗಿದ್ದಾರೆ.

ಭಾರತ ತಂಡದಲ್ಲಿ ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ವಿಶ್ವಕಪ್​ ವೇಳೆ ಹಳೆಬರಿಗೆ ಅವಕಾಶ ಸಿಕ್ಕರೆ, ಯಾರೆಲ್ಲಾ ತಂಡದಲ್ಲಿ ಉಳಿಯುತ್ತಾರೆ ಎಂಬುದು ಪ್ರಶ್ನೆಯಾಗಿದೆ.

ಇದನ್ನೂ ಓದಿ: ಭಾರತ ವಿರುದ್ಧದ ಸರಣಿಗೆ ಹರಿಣಗಳ ಪಡೆ ಪ್ರಕಟ: ಬವುಮಾಗೆ ವಿಶ್ರಾಂತಿ ಮಾರ್ಕ್ರಾಮ್ ನಾಯಕತ್ವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.