ಮುಂಬೈ: 2020ರ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಶೆಲ್ಡಾನ್ ಕಾಟ್ರೆಲ್ ಅವರ ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿದ್ದು ರಾಹುಲ್ ತೆವಾಟಿಯಾ ಅವರರಲ್ಲಿ ಆತ್ಮ ವಿಶ್ವಾಸವನ್ನು ತುಂಬಿದ್ದು, ಅವರನ್ನು ಈ ಹಂತದವರೆಗೆ ತಂದು ನಿಲ್ಲಿಸಿದೆ ಎಂದು ಲೆಜೆಂಡರಿ ಕ್ರಿಕೆಟಿಗ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಅದ್ಭುತ ಫಾರ್ಮ್ನಲ್ಲಿರುವ ತೆವಾಟಿಯಾ ಗುಜರಾತ್ ಟೈಟನ್ಸ್ಗೆ ಕೆಲವು ಕೊನೆಯ ಓವರ್ ಪಂದ್ಯಗಳನ್ನು ತಮ್ಮ ದೊಡ್ಡ ಹೊಡೆತಗಳ ಮೂಲಕ ತಂದುಕೊಟ್ಟಿದ್ದಾರೆ. ಅವರ ಈ ಆಟ ಮುಂಬರುವ ಟಿ-20 ವಿಶ್ವಕಪ್ಗೆ ಅವರನ್ನು ಭಾರತ ತಂಡಕ್ಕೆ ಪರಿಗಣಿಸುವ ಸಾಧ್ಯತೆ ಹೆಚ್ಚಿಸಿದೆ.
ಶಾರ್ಜಾದಲ್ಲಿ ಶೆಲ್ಡಾನ್ ಕಾಟ್ರೆಲ್ ವಿರುದ್ಧ ಆಡಿದ ವಿದ್ವಂಸಕ ಬ್ಯಾಟಿಂಗ್ ಅವರಿಗೆ(ತೆವಾಟಿಯಾ) ಅಸಾಧ್ಯವಾದದ್ದನ್ನು ಮಾಡುವುದಕ್ಕೆ ನಂಬಿಕೆ ಮತ್ತು ಇಂದು ಇಲ್ಲಿಯವರೆಗೆ ಬರುವುದಕ್ಕೆ ಆತ್ಮವಿಶ್ವಾಸವನ್ನು ತುಂಬಿದೆ. ನಾವು ಅದನ್ನು ಆರ್ಸಿಬಿ ವಿರುದ್ಧ ಅವರು ಮಾಡಿದ್ದನ್ನು ನೋಡಿದ್ದೇವೆ. ಡೆತ್ ಓವರ್ಗಳಲ್ಲಿ ಬ್ಯಾಟ್ ಮಾಡುವಾಗ ಪ್ಯಾಡ್ಗಳನ್ನು ಮುಟ್ಟುವುದಿಲ್ಲ ಅಥವಾ ನಡುಗಿಸುವುದಿಲ್ಲ.
ಏಕೆಂದರೆ ಇದು ಬ್ಯಾಟರ್ಗಳಲ್ಲಿರುವ ಆತಂಕ ತೋರ್ಪಡಿಸುತ್ತದೆ. ಅವರು ಕೇವಲ ಚೆಂಡು ಬರುವವರೆಗೆ ಕಾಯುತ್ತಾರೆ ಮತ್ತು ಶಾಟ್ ಮಾಡುತ್ತಾರೆ. ಕ್ರಿಕೆಟ್ ಬುಕ್ನಲ್ಲಿರುವ ಎಲ್ಲಾ ಶಾಟ್ಗಳನ್ನು ಅವರು ಹೊಂದಿದ್ದಾರೆ, ಅತಿ ಮುಖ್ಯವಾದ ಅಂಶ ಎಂದರೆ ಅವರು ಒತ್ತಡದ ಸಂದರ್ಭದಲ್ಲೂ ಶಾಂತ ರೀತಿಯಲ್ಲಿ ಇರುತ್ತಾರೆ ಎಂದು ಗವಾಸ್ಕರ್ ತಿಳಿಸಿದ್ದಾರೆ.
ತೆವಾಟಿಯಾಗೆ ಐಸ್ಮ್ಯಾನ್ ಎಂಬ ಅಡ್ಡ ಹೆಸರು: 28 ವರ್ಷದ ಕ್ರಿಕೆಟಿಗನಿಗೆ ಐಸ್ಮ್ಯಾನ್ ಎಂದು ಅಡ್ಡ ಹೆಸರಿಟ್ಟಿರುವುದಾಗಿ ಇದೇ ಸಂದರ್ಭದಲ್ಲಿ ಗವಾಸ್ಕರ್ ತಿಳಿಸಿದ್ದಾರೆ. ತೆವಾಟಿಯಾ ಅವರು ಒತ್ತಡದ ಕ್ಷಣಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಉಳಿಯುವ ಸಾಮರ್ಥ್ಯ ಹೊಂದಿದ್ದಾರೆ. ಅಕ್ಕಾಗಿ ನಾನು ಅವರನ್ನು ಐಸ್ಮ್ಯಾನ್ ಎಂದು ಕರೆಯುತ್ತೇನೆ. ಕ್ರೀಸ್ನಲ್ಲಿ ನಿಲ್ಲುತ್ತಾರೆ, ಯಾವುದೇ ಆತಂಕ ಅಥವಾ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಯೋಜನೆ ರೂಪಿಸಿಕೊಂಡು , ಎಸೆತಗಳಿಗೆ ನಿರೀಕ್ಷಿಸುತ್ತಾರೆ ಮತ್ತು ಯಾವುದನ್ನು ಹೊಡೆಯಬೇಕೆಂಬುದು ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಗವಾಸ್ಕರ್ ತಿಳಿಸಿದ್ದಾರೆ.
ಇದನ್ನೂ ಓದಿ:ಆಗ ಸ್ವೀಪರ್, ಆಟೋ ಡ್ರೈವರ್.. 9ನೇ ತರಗತಿ ಫೇಲ್ ಆಗಿದ್ದವ ಈಗ ಕೆಕೆಆರ್ ಸ್ಟಾರ್ ಪ್ಲೇಯರ್..