ಮೆಲ್ಬೋರ್ನ್: ಟಿ20 ವಿಶ್ವಕಪ್ 2022 ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡದ ಗೆಲುವು ಪ್ರತಿಯೊಬ್ಬ ದೇಶವಾಸಿಗಳ ಮುಖದಲ್ಲಿ ಸಂತೋಷದ ಅಲೆಯನ್ನು ತಂದಿತು. ಪಾಕಿಸ್ತಾನದ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ 31 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸೋಲುವ ಭೀತಿ ಎದುರಿಸಿತು.
-
A packed MCG chanting for Virat Kohli 🏟
— ICC (@ICC) October 23, 2022 " class="align-text-top noRightClick twitterSection" data="
Raw vision: Behind the scenes of India’s sensational win 📹
Goosebumps. #T20WorldCup | #INDvPAK pic.twitter.com/MNjmOLKO7r
">A packed MCG chanting for Virat Kohli 🏟
— ICC (@ICC) October 23, 2022
Raw vision: Behind the scenes of India’s sensational win 📹
Goosebumps. #T20WorldCup | #INDvPAK pic.twitter.com/MNjmOLKO7rA packed MCG chanting for Virat Kohli 🏟
— ICC (@ICC) October 23, 2022
Raw vision: Behind the scenes of India’s sensational win 📹
Goosebumps. #T20WorldCup | #INDvPAK pic.twitter.com/MNjmOLKO7r
ಇದಾದ ನಂತರ ವಿರಾಟ್ ಕೊಹ್ಲಿ ತಮ್ಮನ್ನು ಕಿಂಗ್ ಕೊಹ್ಲಿ ಅಥವಾ ಚೇಸ್ ಮಾಸ್ಟರ್ ಎಂದು ಏಕೆ ಕರೆಯುತ್ತಾರೆ ಎಂಬುದನ್ನು ಎದುರಾಳಿ ತಂಡಕ್ಕೆ ತೋರಿಸಿದರು. ತಂಡದ ಗೆಲುವಿನ ನಂತರ ನಾಯಕ ರೋಹಿತ್ ಶರ್ಮಾ ಮೈದಾನಕ್ಕೆ ಬಂದು ವಿರಾಟ್ ಕೊಹ್ಲಿಯನ್ನು ಭುಜದ ಮೇಲೆ ಎತ್ತಿ ತಿರುಗಿಸಲು ಪ್ರಾರಂಭಿಸಿದರು. ವಿರಾಟ್ ಕೊಹ್ಲಿ ಹಾಗೂ ತಂಡದ ಇತರ ಆಟಗಾರರ ಸಂತಸ ಉತ್ತುಂಗದಲ್ಲಿತ್ತು.
ಪಾಕಿಸ್ತಾನವನ್ನು ಸೋಲಿಸಿದ ನಂತರ ನಾಯಕ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ಇಂತಹ ಇನ್ನಿಂಗ್ಸ್ ಆಡುವುದು ಸುಲಭವಲ್ಲ. ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ 78 ಎಸೆತಗಳಲ್ಲಿ 113 ರನ್‌ಗಳ ಜೊತೆಯಾಟವು ಪಂದ್ಯದಲ್ಲಿ ಬದಲಾವಣೆ ತಂದಿತು. ಇದರಿಂದಾಗಿ ನಾವು ಪಂದ್ಯ ಗೆಲ್ಲಲು ಯಶಸ್ವಿಯಾಗಿದ್ದೇವೆ. ವಿರಾಟ್ ಕೊಹ್ಲಿಗೆ ಸೆಲ್ಯೂಟ್ ಎಂದು ರೋಹಿತ್ ಶರ್ಮಾ ಕೊಂಡಾಡಿದ್ದಾರೆ.
ಮಹತ್ವದ ಪಂದ್ಯ ಗೆಲ್ಲಿಸುವ ವಿರಾಟ್ ಕೊಹ್ಲಿ ಸಾಮರ್ಥ್ಯ ಎಂದಿಗೂ ಕ್ಷೀಣಿಸುವುದಿಲ್ಲ. ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ ಎಂದು ನನಗೆ ಎಂದೂ ಅನ್ನಿಸಿಲ್ಲ. ಆದರೆ, ಅವರ ಮೇಲೆ ಶಿಖರದಷ್ಟು ನಿರೀಕ್ಷೆ ಇರುತ್ತವೆ. ಹೀಗಾಗಿ ಉತ್ತಮ ಬ್ಯಾಟಿಂಗ್ ನಡೆಸುತ್ತ, 30 ಅಥವಾ 40 ಕಲೆಹಾಕಿದ್ದರೂ ಸಹ ಜನರು ಅದರ ಬಗ್ಗೆಯೇ ತೆಗಳಿ ಮಾತನಾಡುತ್ತಾರೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದರು.
T20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಭಾರತ ತಂಡವು ಮೆಲ್ಬೋರ್ನ್ ಮೈದಾನದಲ್ಲಿ ಪಾಕ್ ವಿರುದ್ಧ ರಣರೋಚಕ ಗೆಲುವು ಸಾಧಿಸಿದೆ. ತಂಡವು ಸಂಕಷ್ಟದಲ್ಲಿದ್ದಾಗ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ 82 ರನ್ಗಳಿಸಿ ಗೆಲುವಿನ ರೂವಾರಿ ಎನಿಸಿದ್ದರು. ಮಾಜಿ ನಾಯಕನ ಬ್ಯಾಟಿಂಗ್ ಬಗ್ಗೆ ಪಂದ್ಯದ ಬಳಿಕ ನಾಯಕ ರೋಹಿತ್ ಎಂದಿನಂತೆ ಕೊಂಡಾಡಿದರು.
ಆಟಗಾರನೊಬ್ಬನ ಅತ್ಯುತ್ತಮ ಇನ್ನಿಂಗ್ಸ್: ಮೆಲ್ಬೋರ್ನ್‌ನಲ್ಲಿ ಮೂಡಿಬಂದ ವಿರಾಟ್ ಕೊಹ್ಲಿಯ 82 ರನ್ ಅವರದಷ್ಟೇ ಅಲ್ಲದೇ, ದೇಶದ T20 ಇತಿಹಾಸದಲ್ಲೇ ಅತ್ಯುತ್ತಮ ಇನ್ನಿಂಗ್ ಎಂದ ರೋಹಿತ್ ಶರ್ಮಾ, ನಾವು ಬಹಳ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಇಂತಹ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇದು ಭಾರತೀಯ ಆಟಗಾರನೊಬ್ಬನ ಅತ್ಯುತ್ತಮ ಇನ್ನಿಂಗ್ಸ್ಗಳಲ್ಲಿ ಒಂದು ಎಂದು ನಾನು ಭಾವಿಸುತ್ತೇನೆ ಅಂತಾ ಹೇಳಿದರು.
13 ನೇ ಓವರ್ ಮುಕ್ತಾಯದ ವೇಳೆಗೆ ನಾವು ಪಂದ್ಯದಲ್ಲಿ ತೀರಾ ಹಿನ್ನಡೆಯಲ್ಲಿದ್ದೆವು. ಅಗತ್ಯವಿರುವ ರನ್ರೇಟ್ ಏರುಮುಖವಾಗುತ್ತಲೇ ಇತ್ತು. ಅಂತಹ ಸಂದರ್ಭ ಮೆಟ್ಟಿನಿಂತು ಬೆನ್ನಟ್ಟಿದ ವಿರಾಟ್‌ರದ್ದು ಅತ್ಯಂತ ಅದ್ಭುತ ಪ್ರದರ್ಶನವಾಗಿದೆ. ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಕೂಡ ನಿಸ್ಸಂಶಯವಾಗಿ ಪ್ರಮುಖ ಪಾತ್ರ ನಿರ್ವಹಿಸಿದರು ಎಂದು ಆಲ್‌ರೌಂಡರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದು ಮಹತ್ವದ ಜೊತೆಯಾಟ: ಕೊಹ್ಲಿ-ಪಾಂಡ್ಯ ನಡುವಿನ 113 ರನ್ ಜೊತೆಯಾಟ ಮಹತ್ತರವಾಗಿತ್ತು. ಹ್ಯಾರಿಸ್ ರೌಫ್ ಓವರ್‌ನಲ್ಲಿ ವಿರಾಟ್ ಸಿಡಿಸಿದ ಸತತ ಎರಡು ಸಿಕ್ಸರ್‌ಗಳು ಮ್ಯಾಚ್ ಟರ್ನಿಂಗ್ ಪಾಯಿಂಟ್ ಎಂದು ಭಾವಿಸುವುದಿಲ್ಲ. ಆದರೆ ಆ ಬಳಿಕ ಪಂದ್ಯವು ಸ್ವಲ್ಪಮಟ್ಟಿಗೆ ನಮ್ಮತ್ತ ವಾಲಿತು. ಇನ್ನೂ ಒಂದು ಓವರ್ ಸ್ಪಿನ್ ಬೌಲಿಂಗ್ ಇದೆ ಎಂಬ ಯೋಚನೆ ನಮಗಿತ್ತು. ಆದ್ದರಿಂದ ಕೊನೆಯ ಓವರ್‌ನಲ್ಲಿ ನಾವು ಸುಮಾರು 15 ರಿಂದ 18 ರನ್ ಉಳಿಸಿಕೊಳ್ಳಬಹುದೇ ಎಂದು ಡ್ರೆಸ್ಸಿಂಗ್ ರೂಮ್‌ನೊಳಗೆ ನಾವು ಯೋಚಿಸುತ್ತಿದ್ದೆವು.
ಆ ಕೊನೆಯ ಓವರ್ ಬೌಲ್ ಮಾಡುವವರು ಖಂಡಿತಾ ಒತ್ತಡಕ್ಕೆ ಒಳಗಾಗುತ್ತಾರೆ. ನವಾಜ್ ಏಷ್ಯಾಕಪ್‌ನಲ್ಲಿ ಕೂಡ ನಮ್ಮ ವಿರುದ್ಧ ಕೊನೆಯ ಓವರ್ ಬೌಲ್ ಮಾಡಿದ್ದರು. ಆಗ ಹಾರ್ದಿಕ್ ಕೆಲ ಭರ್ಜರಿ ಹೊಡೆತ ಬಾರಿಸಿದ್ದರು. ಸ್ಪಿನ್ನರ್ ಆಗಿ ಕೊನೆಯ ಓವರ್ ಬೌಲ್ ಮಾಡಬೇಕಾದಾಗ ಮತ್ತು ಕೇವಲ 15 ಅಥವಾ 18 ರನ್ ನಿಯಂತ್ರಿಸುವುದು ಸುಲಭವಲ್ಲ ಎಂದರು.
ಚೇಸ್ ಸುಲಭದ್ದಾಗಿರಲಿಲ್ಲ: ಈ ರನ್ ಚೇಸ್ ನಮಗೆ ಸುಲಭವಲ್ಲ ಎಂದು ನಮಗೆ ತಿಳಿದಿತ್ತು. ಇಬ್ಬರೂ (ಕೊಹ್ಲಿ-ಪಾಂಡ್ಯ) ಅದ್ಭುತ ಪ್ರದರ್ಶನ ನೀಡಿದರು. ಇಬ್ಬರೂ ಅನುಭವಿಗಳು. ಶಾಂತವಾಗಿ ಆಡುವುದು ಮತ್ತು ಕೊನೆಯವರೆಗೂ ಆಟವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿತ್ತು. ಇದು ನಮ್ಮ ಆತ್ಮವಿಶ್ವಾಸಕ್ಕೆ ಒಳ್ಳೆಯದು. ನಾವು ಪಂದ್ಯ ಗೆಲ್ಲುವ ಸ್ಥಿತಿಯಲ್ಲಿರಲಿಲ್ಲ. ನಾವು ಈ ಪಂದ್ಯವನ್ನು ಗೆದ್ದ ರೀತಿ ನಿಜಕ್ಕೂ ಅದ್ಭುತವಾಗಿದೆ ಎಂದು ರೋಹಿತ್ ಶರ್ಮಾ ಹೇಳಿದರು.
ವಿರಾಟ್ ಕೊಹ್ಲಿ ದೇಶಕ್ಕಾಗಿ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಮಾಡಿದ ರೀತಿಗೆ ಸೆಲ್ಯೂಟ್. ಭಾರತ ತಂಡದ ಪರ ಆಡಿದ ಅವರ ಅತ್ಯುತ್ತಮ ಇನ್ನಿಂಗ್ಸ್ ಇದಾಗಿದೆ. ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಇದು ನೋಡಲು ಅದ್ಭುತವಾಗಿದೆ. ನಾವು ಎಲ್ಲೇ ಹೋದರೂ ಅವರ ಬೆಂಬಲ ಬಹಳ ಮುಖ್ಯ ಎಂದು ವಿರಾಟ್ ಆಟವನ್ನು ರೋಹಿತ್ ಶರ್ಮಾ ಕೊಂಡಾಡಿದರು.
ನಿನ್ನೆ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 4 ವಿಕೆಟ್‌ಗಳಿಂದ ಜಯಗಳಿಸಿದ್ದು, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ತೋರಿದ್ದು, ಎಲ್ಲೆಡೆಯಿಂದ ವಿರಾಟ್ ಕೊಹ್ಲಿ ಶ್ಲಾಘನೆಯ ಸುರಿಮಳೆ ಹರಿದುಬರುತ್ತಿದೆ.
ಓದಿ: ಪಾಕ್ ವಿರುದ್ಧ ‘ವಿರಾಟ’ ಪ್ರದರ್ಶನ, ದೀಪಾವಳಿ ಆರಂಭ.. ಮೋದಿ, ಶಾ ಸೇರಿ ಬಿಜೆಪಿಯಿಂದ ಕೊಹ್ಲಿಗೆ ಶ್ಲಾಘನೆಯ ಸುರಿಮಳೆ