ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ನ ಮೌಂಟ್ ಮೌಂಗನುಯಿಯಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಬಾಂಗ್ಲಾದೇಶ ತಂಡ ಭರ್ಜರಿ ಗೆಲುವು ಸಾಧಿಸಿತ್ತು. 8 ವಿಕೆಟ್‌ಗಳಿಂದ ಗೆದ್ದರೂ ಕೂಡ ಬಾಂಗ್ಲಾ ತಂಡ ಒಂದೇ ಒಂದು ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗಿತ್ತು. ಇದೀಗ ಟ್ರೋಲ್ಗೆ ಕಾರಣವಾದ ಆ ಕಾಮಿಡಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಅದೇನಪ್ಪ ಅಂದ್ರೆ, ಸರಣಿಯ ಎರಡನೇ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ನ್ಯೂಜಿಲ್ಯಾಂಡ್ನ ಆರಂಭಿಕ ಆಟಗಾರ ವಿಲ್ ಯಂಗ್ ಒಂದೇ ಬಾಲ್ಗೆ ಏಳು ರನ್ಗಳನ್ನು ಗಳಿಸಿದ್ದರು. ಆದರೆ ಇದರ ದೃಶ್ಯ ಮಾತ್ರ ಹಾಸ್ಯಮಯವಾಗಿತ್ತು.
-
Meanwhile, across the Tasman Sea... ⛴️
— Cricket on BT Sport (@btsportcricket) January 9, 2022 " class="align-text-top noRightClick twitterSection" data="
Chaos in the field for Bangladesh as Will Young scores a seven (yes, you read that correctly!) 😅#NZvBAN | BT Sport 3 HD pic.twitter.com/fvrD1xmNDd
">Meanwhile, across the Tasman Sea... ⛴️
— Cricket on BT Sport (@btsportcricket) January 9, 2022
Chaos in the field for Bangladesh as Will Young scores a seven (yes, you read that correctly!) 😅#NZvBAN | BT Sport 3 HD pic.twitter.com/fvrD1xmNDdMeanwhile, across the Tasman Sea... ⛴️
— Cricket on BT Sport (@btsportcricket) January 9, 2022
Chaos in the field for Bangladesh as Will Young scores a seven (yes, you read that correctly!) 😅#NZvBAN | BT Sport 3 HD pic.twitter.com/fvrD1xmNDd
ಬಾಂಗ್ಲಾ ತಂಡದ ಎಬಾಡೋಟ್ ಹುಸೇನ್ ಎಸೆದ 26ನೇ ಓವರ್ನ ಕೊನೆಯ ಬಾಲ್ ಬೌಂಡರಿ ತಲುಪುವುದನ್ನು ಕೂದಲೆಳೆ ಅಂತರಲ್ಲಿ ಫೀಲ್ಡರ್ ತಡೆದಿದ್ದನು. ಆದರೆ ಅಷ್ಟರಲ್ಲೇ ವಿಲ್ ಯಂಗ್ ಮತ್ತು ಟಾಮ್ ಲ್ಯಾಥಮ್ ಮೂರು ರನ್ಗಳನ್ನು ಓಡಿದ್ದರು. ಬೌಂಡರಿ ತಪ್ಪಿಸಿದ ಬಾಲ್ ಅನ್ನು ಫೀಲ್ಡರ್ ಪಿಚ್ಗೆ ಎಸೆದಿದ್ದಾನೆ. ಆದರೆ ಅದನ್ನು ಹಿಡಿಯುವಲ್ಲಿ ಅಲ್ಲಿದ್ದವರು ವಿಫಲರಾದರು. ಅಷ್ಟೇ ಅಲ್ಲದೇ ಆ ಬಾಲ್ ಸೀದಾ ಬೌಂಡರಿ ತಲುಪಿ ಹೆಚ್ಚುವರಿ ನಾಲ್ಕು ರನ್ ಒದಗಿಸಿಕೊಟ್ಟಿತ್ತು. ಇದರ ವಿಡಿಯೋ ಈಗ ವೈರಲ್ ಆಗಿದೆ.
ಇದನ್ನೂ ಓದಿ: ತವರಿನಲ್ಲೇ ನ್ಯೂಜಿಲ್ಯಾಂಡ್ಗೆ ಮರ್ಮಾಘಾತ: ಕಿವೀಸ್ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಗೆದ್ದ ಬಾಂಗ್ಲಾದೇಶ!
ಬಾಂಗ್ಲಾ-ಕಿವೀಸ್ ಟೆಸ್ಟ್ ಸರಣಿಯಲ್ಲಿ ಜಯ ಗಳಿಸುವ ಮೂಲಕ ಬಾಂಗ್ಲಾದೇಶ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಕಳೆದ 5 ವರ್ಷಗಳಿಂದ ತವರಿನಲ್ಲಿ ಸೋಲಿಲ್ಲದ ಸರದಾರನಾಗಿ ಮೆರದಾಡುತ್ತಿದ್ದ ನ್ಯೂಜಿಲ್ಯಾಂಡ್ ತಂಡಕ್ಕೆ ಬಾಂಗ್ಲಾದೇಶ ತಂಡ ಆಘಾತಕಾರಿ ಸೋಲುಣಿಸಿದೆ.