ETV Bharat / sports

ಕೊಹ್ಲಿ - ರೋಹಿತ್ ವಿವಾದ: ಬ್ರೇಕ್​ ತೆಗೆದುಕೊಳ್ಳುತ್ತಿರುವ ಸಮಯ ಸರಿಯಲ್ಲ: ಅಜರುದ್ದೀನ್ - ಬಿಸಿಸಿಐ

ಕಳೆದ ವಾರ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ಟಿ-20 ಮತ್ತು ಏಕದಿನ ಎರಡೂ ಮಾದರಿಗೂ ನಾಯಕರನ್ನಾಗಿ ನೇಮಿಸಿದ್ದರು. ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಅತ್ಯುತ್ತಮ ಗೆಲುವಿನ ಸರಾಸರಿ ಹೊಂದಿದ್ದರೂ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದನ್ನು ಕೆಲವು ಕ್ರಿಕೆಟ್ ತಜ್ಞರು ಪ್ರಶ್ನಿಸಿದ್ದರು.

Rohit Sharma vs Virat kohli
ರೋಹಿತ್ ಶರ್ಮಾ vs ವಿರಾಟ್ ಕೊಹ್ಲಿ
author img

By

Published : Dec 14, 2021, 5:26 PM IST

ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದಲ್ಲಿ ದೊಡ್ಡ ಹೈಡ್ರಾಮ ನಡೆಯುತ್ತಿದೆ. ಸೋಮವಾರ ಗಾಯದ ಕಾರಣ ರೋಹಿತ್​ ಟೆಸ್ಟ್​ ಸರಣಿಯಿಂದ ಹಿಂದೆ ಸರಿದರೆ, ಕೊಹ್ಲಿ ವೈಯಕ್ತಿಕ ಕಾರಣ ನೀಡಿ ತಮಗೆ ಏಕದಿನ ಸರಣಿಯಿಂದ ವಿಶ್ರಾಂತಿ ಬಿಸಿಸಿಐ ಕೇಳಿದ್ದಾರೆ.

ಈ ಇಬ್ಬರು ನಾಯಕರ ನಡೆಯನ್ನು ಮಾಜಿ ನಾಯಕ ಅಜರುದ್ದೀನ್ ಪ್ರಶ್ನಿಸಿದ್ದು, ಇದು ತಂಡದಲ್ಲಿ ಬಿರುಕು ಮೂಡಿದೆ ಎನ್ನುವ ಅನುಮಾನ ಮೂಡಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಾರ ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ಟಿ-20 ಮತ್ತು ಏಕದಿನ ಎರಡೂ ಮಾದರಿಗೂ ನಾಯಕರನ್ನಾಗಿ ನೇಮಿಸಿದ್ದರು. ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಅತ್ಯುತ್ತಮ ಗೆಲುವಿನ ಸರಾಸರಿ ಹೊಂದಿದ್ದರೂ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದನ್ನು ಕೆಲವು ಕ್ರಿಕೆಟ್ ತಜ್ಞರು ಪ್ರಶ್ನಿಸಿದ್ದರು.

ಭಾರತ ಕಂಡಂತಹ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರು ಮೊಹಮ್ಮದ್ ಅಜರುದ್ದೀನ್​, ರೋಹಿತ್ ಟೆಸ್ಟ್​ ಸರಣಿಯಿಂದ ಹೊರ ಬಿದ್ದಿರುವುದು ಮತ್ತು ಕೊಹ್ಲಿ ಏಕದಿನ ಸರಣಿಯಿಂದ ವಿಶ್ರಾಂತಿ ಬಯಸುತ್ತಿರುವುದು ಇಬ್ಬರ ನಡುವೆ ಅನವಶ್ಯಕ ವದಂತಿಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.

ವಿರಾಟ್​ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಲಭ್ಯ ಇರುವುದಿಲ್ಲ ಎಂದು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ರೋಹಿತ್ ಶರ್ಮಾ ಟೆಸ್ಟ್​ ಸರಣಿಯಿಂದ ಗಾಯದ ಕಾರಣ ನೀಡಿ ಹೊರ ಬಂದಿದ್ದಾರೆ.

ಕ್ರಿಕೆಟ್​ನಲ್ಲಿ ಬ್ರೇಕ್ ತೆಗೆದುಕೊಳ್ಳುವುದುರಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ, ಸಮಯ ಉತ್ತಮವಾಗಿರಬೇಕು. ಈ ಇಬ್ಬರು ಹಿರಿಯ ಕ್ರಿಕೆಟಿಗರು ನಿರ್ದಿಷ್ಟ ಮಾದರಿಯ ಕ್ರಿಕೆಟ್​ನಿಂದ ಹೊರಬರುತ್ತಿರುವುದು ಇಲ್ಲದ ವದಂತಿಗೆ ಕಾರಣವಾಗಿದೆ ಎಂದು ಅಜರುದ್ದೀನ್ ಟ್ವೀಟ್ ಮಾಡಿದ್ದಾರೆ.

  • Virat Kohli has informed that he's not available for the ODI series & Rohit Sharma is unavailable fr d upcoming test. There is no harm in takin a break but d timing has to be better. This just substantiates speculation abt d rift. Neither wil be giving up d other form of cricket.

    — Mohammed Azharuddin (@azharflicks) December 14, 2021 " class="align-text-top noRightClick twitterSection" data=" ">

ಮಾಧ್ಯಮದ ಪ್ರಕಾರ, ಕೊಹ್ಲಿ ಜನವರಿಯಲ್ಲಿ ತಮ್ಮ ಮಗಳು ವಮಿಕಾ ಅವರ ಮೊದಲ ವರ್ಷದ ಜನ್ಮದಿನವನ್ನ ಕುಟುಂಬದ ಜೊತೆಗೆ ಆಚರಿಸಿಕೊಳ್ಳಲು ಬಯಸಿ ಏಕದಿನ ಸರಣಿಗೆ ತಮ್ಮನ್ನು ಆಯ್ಕೆ ಮಾಡದಿರಲು ಆಯ್ಕೆ ಸಮಿತಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೊಹ್ಲಿ ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ವೇಳೆಯೂ ಪತ್ನಿ ಅನುಷ್ಕಾ ಶರ್ಮಾ ಮಗುವಿಗೆ ಜನ್ಮ ನೀಡಿಲಿದ್ದಾರೆ ಎಂಬ ಕಾರಣ ಕೊನೆಯ ಮೂರು ಟೆಸ್ಟ್​ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

ಇದನ್ನೂ ಓದಿ:ಒಬ್ಬರ ನಾಯಕತ್ವದಲ್ಲಿ ಮತ್ತೊಬ್ಬರಾಡಲು ಇಷ್ಟವಿಲ್ವೆ?: ರೋಹಿತ್​-ಕೊಹ್ಲಿ ನಿರ್ಧಾರ ಪ್ರಶ್ನಿಸಿದ ಫ್ಯಾನ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.