ಮೆಲ್ಬೋರ್ನ್ : ಭಾರತ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿಗೆ ದೇಶ-ವಿದೇಶದ ಕ್ರಿಕೆಟಿಗರೆಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ, ಆಸೀಸ್ ಲೆಜೆಂಡರಿ ಸ್ಪಿನ್ನರ್ ಶೇನ್ವಾರ್ನ್ 'ಟೆಸ್ಟ್ ಕ್ರಿಕೆಟ್‌ನ ಉತ್ಸಾಹದಿಂದ ಬೆಂಬಲಿಸಿದ್ದಕ್ಕಾಗಿ' ವಿರಾಟ್ ಕೊಹ್ಲಿಗೆ ಧನ್ಯವಾದ ಅರ್ಪಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನ 1-2ರಲ್ಲಿ ಕಳೆದುಕೊಂಡ ನಂತರ ಶನಿವಾರ ತಮ್ಮ 7 ವರ್ಷಗಳ ಭಾರತದ ಯಶಸ್ವಿ ನಾಯಕತ್ವಕ್ಕೆ ಕೊಹ್ಲಿ ತೆರೆ ಎಳೆದಿದ್ದರು.
ಆದರೆ, ಭಾರತ ತಂಡ ಕೊಹ್ಲಿ ನಾಯಕತ್ವದಲ್ಲಿ 68 ಪಂದ್ಯಗಳನ್ನಾಡಿದ್ದು, 40ರಲ್ಲಿ ಜಯ ಸಾಧಿಸಿದೆ. ಕೊಹ್ಲಿ ಈ ದಾಖಲೆಯೊಂದಿಗೆ ಭಾರತದ ನಂಬರ್ 1 ಮತ್ತು ವಿಶ್ವದ 4ನೇ ನಾಯಕ ಎನಿಸಿಕೊಂಡಿದ್ದರು.
-
Congrats @imVkohli on what you and your team has achieved under your leadership and thankyou for supporting test cricket so passionately and insuring that it stays the number 1 form of the game ❤️ https://t.co/zlePdPQZG0
— Shane Warne (@ShaneWarne) January 16, 2022 " class="align-text-top noRightClick twitterSection" data="
">Congrats @imVkohli on what you and your team has achieved under your leadership and thankyou for supporting test cricket so passionately and insuring that it stays the number 1 form of the game ❤️ https://t.co/zlePdPQZG0
— Shane Warne (@ShaneWarne) January 16, 2022Congrats @imVkohli on what you and your team has achieved under your leadership and thankyou for supporting test cricket so passionately and insuring that it stays the number 1 form of the game ❤️ https://t.co/zlePdPQZG0
— Shane Warne (@ShaneWarne) January 16, 2022
"ನಿಮ್ಮ ನಾಯಕತ್ವದಲ್ಲಿ ನೀವು ಮತ್ತು ನಿಮ್ಮ ತಂಡ ಮಾಡಿರುವ ಸಾಧನೆಗೆ ಅಭಿನಂದನೆಗಳು ವಿರಾಟ್ ಕೊಹ್ಲಿ. ಟೆಸ್ಟ್ ಕ್ರಿಕೆಟ್‌ನ ಅತ್ಯುತ್ಸಾಹದಿಂದ ಬೆಂಬಲಿಸಿದ್ದಕ್ಕೆ ಮತ್ತು ಕ್ರಿಕೆಟ್ನಲ್ಲಿ ಅದು ನಂಬರ್ 1 ಆಗಿ ಉಳಿದುಕೊಳ್ಳುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು" ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಮುಂದಿನ ನಾಯಕನಿಗೆ 'ತಲೆನೋವನ್ನು' ಬಿಟ್ಟುಹೋಗಿದ್ದಕ್ಕೆ ಕೊಹ್ಲಿಗೆ ಧನ್ಯವಾದ : ಅಶ್ವಿನ್ ಭಾವನಾತ್ಮಕ ಟ್ವೀಟ್