ETV Bharat / sports

ಏಕೈಕ ಟೆಸ್ಟ್​ : ಶುಭಾ, ಜೆಮಿಮಾ, ಯಸ್ತಿಕಾ, ದೀಪ್ತಿ ಅರ್ಧಶತಕ; ಇಂಗ್ಲೆಂಡ್​ ವಿರುದ್ಧ ಭಾರತ 410/7 - ಏಕೈಕ ಟೆಸ್ಟ್​ ಪಂದ್ಯ

India vs England women test match: ಪ್ರವಾಸಿ ಇಂಗ್ಲೆಂಡ್​ ವಿರುದ್ಧ ಅದ್ಭುತ ಆಟ ಪ್ರದರ್ಶಿಸಿದ ಟೀಂ ಇಂಡಿಯಾ ವನಿತೆಯರು ಮುಂಬೈನಲ್ಲಿ ನಡೆಯುತ್ತಿರುವ ಟೆಸ್ಟ್​ ಪಂದ್ಯದಲ್ಲಿ ಬೃಹತ್​ ಮೊತ್ತದತ್ತ ಸಾಗಿದ್ದಾರೆ. ಭಾರತದ ಪರ ನಾಲ್ವರು ಬ್ಯಾಟರ್​ಗಳು ಅರ್ಧಶತಕ ದಾಖಲಿಸಿ ಮಿಂಚಿದರು.

Test match: India women dominate England on day one
ಟೆಸ್ಟ್​ ಪಂದ್ಯ: ಶುಭಾ, ಜೆಮಿಮಾ, ಯಸ್ತಿಕಾ, ದೀಪ್ತಿ ಅರ್ಧಶತಕ; ಇಂಗ್ಲೆಂಡ್​ ವಿರುದ್ಧ ಭಾರತ 410/7
author img

By ETV Bharat Karnataka Team

Published : Dec 14, 2023, 6:33 PM IST

ಮುಂಬೈ: ಇಲ್ಲಿನ ಡಾ. ಡಿ ವೈ ಪಾಟೀಲ್​ ಮೈದಾನದಲ್ಲಿ ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್​ ಪಂದ್ಯದ ಮೊದಲ ದಿನದಾಂತ್ಯಕ್ಕೆ ಭಾರತದ ವನಿತೆಯರು 7 ವಿಕೆಟ್​ ಕಳೆದುಕೊಂಡು 410 ರನ್​ ಗಳಿಸಿದ್ದಾರೆ. ಟಾಸ್​ ಗೆದ್ದ ಟೀಂ ಇಂಡಿಯಾ ನಾಯಕಿ ಹರ್ಮನ್​ ಪ್ರೀತ್​ ಕೌರ್​ ಮೊದಲು ಬ್ಯಾಟಿಂಗ್​ ಮಾಡುವ ನಿರ್ಣಯ ಕೈಗೊಂಡಿದ್ದರು.

ಭಾರತದ ಆರಂಭಿಕರು ಉತ್ತಮ ಆಟ ಪ್ರದರ್ಶಿಸಲು ವಿಫಲವಾದರೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಜವಾಬ್ದಾರಿಯುತ ಬ್ಯಾಟಿಂಗ್​ ತೋರಿದರು. ಭರವಸೆಯ ಆಟಗಾರ್ತಿ ಸ್ಮೃತಿ ಮಂಧಾನಾ 17 ರನ್​ ಗಳಿಸಿ ಔಟಾದರೆ, ಮತ್ತೋರ್ವ ಆರಂಭಿಕ ಬ್ಯಾಟರ್​ ಶಫಾಲಿ ವರ್ಮಾ 19 ರನ್​ಗೆ ಪೆವಿಲಿಯನ್​ ಸೇರಿಕೊಂಡರು. 47 ರನ್​ಗೆ ಟೀಂ ಇಂಡಿಯಾ ಎರಡು ವಿಕೆಟ್​ ಕಳೆದುಕೊಂಡಿತ್ತು.

ಈ ವೇಳೆ ಕ್ರೀಸ್​ನಲ್ಲಿ ಒಂದಾದ ಶುಭಾ ಸತೀಶ್​ ಹಾಗೂ ಜೆಮಿಮಾ ರೋಡ್ರಿಗಸ್​ ಮೂರನೇ ವಿಕೆಟ್​ಗೆ 115 ರನ್​ ಜೊತೆಯಾಟ ಆಡಿದರು. ಶುಭಾ 69 ರನ್​ಗೆ ಎಕ್ಲೆಸ್ಟೋನ್ ಬೌಲಿಂಗ್​ನಲ್ಲಿ ನ್ಯಾಟ್ ಸ್ಕಿವರ್-ಬ್ರಂಟ್​ಗೆ ಕ್ಯಾಚಿತ್ತು ಹೊರನಡೆದರು. ಈ ಮೂಲಕ ಉತ್ತಮ ಜೊತೆಯಾಟ ಅಂತ್ಯಗೊಂಡಿತು. ಬಳಿಕ 68 ರನ್​ ಗಳಿಸಿದ್ದ ಜೆಮಿಮಾ ಲಾರೆನ್​ ಬೆಲ್​​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು.

ನಾಯಕಿ ಹರ್ಮನ್​ ಪ್ರೀತ್​ ಕೌರ್ ಹಾಗೂ ವಿಕೆಟ್​ ಕೀಪರ್​ ಬ್ಯಾಟರ್​ ಯಸ್ತಿಕಾ ಭಾಟಿಯಾ ಕೂಡ ಉತ್ತಮ ಇನ್ನಿಂಗ್​ ಕಟ್ಟಿದರು. ಕೌರ್ (49) ರನೌಟ್​ ಆಗುವ ಮೂಲಕ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು. ಇನ್ನೊಂದೆಡೆ, ಯಸ್ತಿಕಾ ಕೆಲ ಆಕರ್ಷಕ ಹೊಡೆತಗಳ ಮೂಲಕ ಅರ್ಧಶತಕ (66) ದಾಖಲಿಸಿದರು. ಬೆಲ್​ ಬೌಲಿಂಗ್​ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಯಸ್ತಿಕಾ ಕ್ಯಾಚ್​ ನೀಡಿ ಔಟಾದರು.

ಬಳಿಕ ದೀಪ್ತಿ ವರ್ಮಾ ಹಾಗೂ ಸ್ನೇಹ ರಾಣಾ ಭಾರತದ ಇನ್ನಿಂಗ್ಸ್​ಗೆ ಬಲ ತುಂಬಿದರು. ಇವರಿಬ್ಬರೂ 7ನೇ ವಿಕೆಟ್​ಗೆ 92 ರನ್​ಗಳನ್ನು​ ಸೇರಿಸಿದರು. ರಾಣಾ 30 ರನ್​ ಗಳಿಸಿ ದಿನದಾಟದ ಅಂತ್ಯಕ್ಕೂ ಸ್ವಲ್ಪ ಸಮಯದ ಮುನ್ನ ಔಟಾಗಿದ್ದು, ದೀಪ್ತಿ 95 ಎಸೆತಗಳಲ್ಲಿ 66 ರನ್​ ಬಾರಿಸಿ ಅಜೇಯರಾಗುಳಿದ್ದಾರೆ. ಇನ್ನೊಂದೆಡೆ ಪೂಜಾ ವಸ್ತ್ರೇಕರ್​ 4 ರನ್​ಗಳೊಂದಿಗೆ ಎರಡನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್​ ವನಿತೆಯರ ಪರ ಲಾರೆನ್​ ಬೆಲ್​ 2, ನ್ಯಾಟ್ ಸ್ಕಿವರ್-ಬ್ರಂಟ್, ಕೇಟ್​ ಕ್ರಾಸ್​, ಚಾರ್ಲೊಟ್ಟೆ ಡೀನ್​ ಹಾಗೂ ಸೋಫಿ ಎಕ್ಲೆಸ್ಟೋನ್ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ: ಸರಣಿ ಸಮಬಲಕ್ಕೆ ಸೂರ್ಯ ಚಿಂತನೆ: ಬೌಲಿಂಗ್​​ ಸುಧಾರಣೆಯೇ ಗೆಲುವಿನ ತಂತ್ರ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.