ETV Bharat / sports

'IPLನಲ್ಲಿ ಸೇಲ್​​​ ಆಗಿದ್ರೆ ಕೇವಲ ಬೆಂಚ್​​ ಕಾಯುತ್ತಿದೆ'.. ಎಡವಿದ ಬಳಿಕ ಬುದ್ಧಿ ಬಂತು ಎಂದ ಪೂಜಾರ!

ಕೌಂಟಿ ಕ್ರಿಕೆಟ್​ನಲ್ಲಿ ಅಬ್ಬರಿಸಿ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದುಕೊಳ್ಳುವಲ್ಲಿ ಚೇತೇಶ್ವರ್ ಪೂಜಾರ ಯಶಸ್ವಿಯಾಗಿದ್ದು, ಇದೇ ವಿಚಾರವಾಗಿ ಅವರು ಮಾತನಾಡಿದ್ದಾರೆ.

Test cricketer Cheteshwar pujar talk about IPL

author img

By

Published : May 23, 2022, 8:32 PM IST

ಹೈದರಾಬಾದ್​: ಕಳೆದ ವರ್ಷದ ಐಪಿಎಲ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಯ್ಕೆಯಾಗಿದ್ದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಯಾವುದೇ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡಿರಲಿಲ್ಲ. ನೆಟ್ಸ್​​ನಲ್ಲಿ ಅಭ್ಯಾಸ ನಡೆಸಿ, ಕೇವಲ ಬೆಂಚ್​ ಕಾಯ್ದಿದ್ದರು.

ಈ ಸಲದ ಮೆಗಾ ಹರಾಜಿನಲ್ಲಿ ಈ ಪ್ಲೇಯರ್​ಗೆ ಯಾವುದೇ ತಂಡ ಖರೀದಿ ಮಾಡುವ ಮನಸು ಮಾಡಲಿಲ್ಲ. ಹೀಗಾಗಿ, ಅನ್​​ಸೋಲ್ಡ್​ ಆಗಿದ್ದರು. ಇದರ ಸದುಪಯೋಗ ಪಡೆದುಕೊಂಡ ಪ್ಲೇಯರ್​ ಕೌಂಟಿಯಲ್ಲಿ ಅಬ್ಬರಿಸಿ ಬೊಬ್ಬಿರಿದರು. ಫಲವಾಗಿ, ಸದ್ಯ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದ ಪೂಜಾರ ವಿರುದ್ಧ ಇನ್ನಿಲ್ಲದ ಟೀಕೆ ವ್ಯಕ್ತವಾಗಿತ್ತು. ಈ ಪ್ಲೇಯರ್ ನಿವೃತ್ತಿ ಘೋಷಣೆ ಮಾಡುವ ಸಮಯ ಬಂದಿದೆ ಎಂಬ ಮಾತು ಸಹ ಕೇಳಿ ಬಂದಿದ್ದವು.

ಇದೇ ಕಾರಣಕ್ಕಾಗಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಪೂಜಾರ್​ಗೆ ಕೈಬಿಟ್ಟು, ಶ್ರೇಯಸ್​ ಅಯ್ಯರ್​ಗೆ ಮಣೆ ಹಾಕಲಾಗಿತ್ತು. ಇದರ ಬೆನ್ನಲ್ಲೇ ನಡೆದ ಐಪಿಎಲ್​ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿ, ಪೂಜಾರ ಮತ್ತಷ್ಟು ನಿರಾಸೆ ಅನುಭವಿಸಿದ್ದರು.

ಇದನ್ನೂ ಓದಿ: IPL​​ ಪ್ಲೇ - ಆಫ್, ಫೈನಲ್​​ಗೆ ಹೊಸ ನಿಯಮ.. ಈ ರೀತಿಯಾದರೆ ಪಂದ್ಯ ಆಡದೇ ಆರ್​ಸಿಬಿ ಹೊರಕ್ಕೆ!

ಆದರೆ, ಈ ಎಲ್ಲ ಕಷ್ಟ ಮೆಟ್ಟಿನಿಂತ ಬ್ಯಾಟಿಂಗ್ ದಿಗ್ಗಜ ಚೇತೇಶ್ವರ್ ಕೌಂಟಿ ಕ್ರಿಕೆಟ್​​ನಲ್ಲಿ ರನ್ ಮಳೆ ಹರಿಸಿದರು. ಸಸೆಕ್ಸ್​ ತಂಡದ ಪರ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿ, ಫಾರ್ಮ್​ಗೆ ಮರಳಿದ್ದರು. ತಾವು ಆಡಿರುವ ನಾಲ್ಕು ಪಂದ್ಯಗಳಿಂದ ಎರಡು ಭರ್ಜರಿ ದ್ವಿಶತಕ ಸೇರಿದಂತೆ 720 ರನ್​​ಗಳಿಕೆ ಮಾಡಿ, ಎಲ್ಲರೂ ಹಿಂತಿರುಗಿ ನೋಡುವಂತೆ ಮಾಡಿದ್ದರು. ಇವರ ಬ್ಯಾಟಿಂಗ್ ಪ್ರದರ್ಶನಕ್ಕೆ ಫಿದಾ ಆದ ಬಿಸಿಸಿಐ ಆಯ್ಕೆ ಸಮಿತಿ ಇಂಗ್ಲೆಂಡ್​ ವಿರುದ್ಧದ ಕೊನೆ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಿದೆ.

ಈ ವಿಚಾರವಾಗಿ ಮಾತನಾಡಿರುವ ಪೂಜಾರ, 'ಐಪಿಎಲ್​​ನಲ್ಲಿ ಯಾವುದಾದರೂ ಫ್ರಾಂಚೈಸಿ ನನ್ನ ಖರೀದಿ ಮಾಡಿದ್ರೆ, ಕೇವಲ ಬೆಂಚ್​ನಲ್ಲಿ ಕೂರಿಸುತ್ತಿತ್ತು. ಆದರೆ, ಇಂಗ್ಲೆಂಡ್​​ನಲ್ಲಿ ನಡೆದ ಕೌಂಟಿ ಕ್ರಿಕೆಟ್​​ನಲ್ಲಿ ಆಡುವ ಮೂಲಕ ಭಾರತ ಟೆಸ್ಟ್​ ತಂಡಕ್ಕೆ ಕಮ್​​ಬ್ಯಾಕ್ ಮಾಡಿದ್ದೇನೆ ಎಂದರು. ಎಡವಿದ ಬಳಿಕ ನನಗೆ ಬುದ್ಧಿ ಬಂತು. ಕೇವಲ ನೆಟ್ಸ್​​ನಲ್ಲಿ ಅಭ್ಯಾಸ ಮಾಡುವುದಕ್ಕೂ, ಮೈದಾನದಲ್ಲಿ ಬ್ಯಾಟಿಂಗ್ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿರುತ್ತದೆ' ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.