ETV Bharat / sports

ರಿಷಬ್ ಪಂತ್ @ 24: ಹುಟ್ಟುಹುಬ್ಬದ ಸಂಭ್ರಮದಲ್ಲಿ ಡೆಲ್ಲಿ ಡ್ಯಾಶರ್​ - IPL MATCH 50

ಭಾರತ ಕ್ರಿಕೆಟ್​ ತಂಡದ ಯುವ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಕಂ ವಿಕೆಟ್ ಕೀಪರ್ ರಿಷಬ್ ಪಂತ್‌ಗಿಂದು 24 ನೇ ಹುಟ್ಟುಹಬ್ಬದ ಸಂಭ್ರಮ. 2018 ಆಗಸ್ಟ್‌ 18ರಂದು ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಈ ಎಡಗೈ ಆಟಗಾರ ಬಳಿಕ ಏಕದಿನ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡರು.

team-indias-batsman-rishabh-pant-turns-24
ರಿಷಬ್ ಪಂತ್
author img

By

Published : Oct 4, 2021, 8:14 AM IST

ಹೈದರಾಬಾದ್: ಭಾರತ ಕ್ರಿಕೆಟ್ ತಂಡ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್​ಮನ್ ರಿಷಬ್ ಪಂತ್ ಇಂದು 24ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಸದ್ಯ ಅವರು ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕರಾಗಿ ತಂಡ ಮುನ್ನಡೆಸುತ್ತಿದ್ದಾರೆ.

ಪಂತ್‌ ದಾಖಲೆಗಳಿವು..

1. ಟೀಂ ಇಂಡಿಯಾದ ವಿಕೆಟ್‌ಕೀಪರ್ ಸ್ಥಾನದಲ್ಲಿ ಭದ್ರವಾಗಿರುವ ಪಂತ್, ವೇಗವಾಗಿ 1 ಸಾವಿರ ಟೆಸ್ಟ್ ರನ್ ಪೂರೈಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
2. ಟೆಸ್ಟ್​ನಲ್ಲಿ ಸಿಕ್ಸ​ರ್​ನಿಂದಲೇ ತಮ್ಮ ಮೊದಲ ಪಂದ್ಯ ಆರಂಭಿಸಿದ್ದ ಮೊದಲ ಭಾರತೀಯ ಆಟಗಾರ ಕೂಡಾ ಹೌದು.
3. ಒಂದೇ ಟೆಸ್ಟ್ ಪಂದ್ಯದಲ್ಲಿ ಅತೀ ಹೆಚ್ಚು ಕ್ಯಾಚ್​ (11) ಪಡೆದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆ ಕೂಡಾ ಪಂತ್‌ ಹೆಸರಲ್ಲಿದೆ.

ಇನ್ನು, ಮುಂಬರುವ ಟಿ-20 ವಿಶ್ವಕಪ್​​​​​ ತಂಡಕ್ಕೂ ಆಯ್ಕೆಯಾಗಿರುವ ಪಂತ್, ಅಲ್ಲಿಯೂ ಉತ್ತಮ ಪ್ರದರ್ಶನ ನೀಡುವ ತವಕದಲ್ಲಿದ್ದಾರೆ.

ಇಂದು ಸಂಜೆ ನಡೆಯಲಿರುವ ಐಪಿಎಲ್ ಟೂರ್ನಿಯ 50ನೇ ಪಂದ್ಯದಲ್ಲಿ ಸಿಎಸ್​​​ಕೆ ವಿರುದ್ಧ ತಮ್ಮದೇ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಕಣಕ್ಕಿಳಿಯಲಿದೆ. ಈಗಾಗಲೇ ಎರಡೂ ತಂಡಗಳು ಪ್ಲೇ ಆಫ್​​ಗೆ ಎಂಟ್ರಿ ಪಡೆದಿದ್ದು, ಇದೊಂದು ಬಲಾಬಲ ಪ್ರದರ್ಶನದ ಪಂದ್ಯವಾಗಿರಲಿದೆ.

ಇದನ್ನೂ ಓದಿ: ಹೈದರಾಬಾದ್ ವಿರುದ್ಧ ಕೆಕೆಆರ್​ಗೆ 6 ವಿಕೆಟ್​ಗಳ ಪ್ರಯಾಸದ ಜಯ: ಪ್ಲೇ ಆಫ್​ಗೆ ಮತ್ತಷ್ಟು ಹತ್ತಿರವಾದ ಮಾರ್ಗನ್​ ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.