ಓವಲ್(ಇಂಗ್ಲೆಂಡ್): ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಓವಲ್ ಮೈದಾನದಲ್ಲಿ ಇತಿಹಾಸ ನಿರ್ಮಿಸಿದೆ. ಜೊತೆಗೆ 1971ರ ಬಳಿಕ ಈ ಮೈದಾನದಲ್ಲಿ ಭಾರತಕ್ಕೆ ಸಿಕ್ಕಿರುವ ಎರಡನೇ ಜಯಭೇರಿ ಇದಾಗಿದೆ. ಈ ಪಂದ್ಯದಲ್ಲಿ ಕೊಹ್ಲಿ ಪಡೆ 157ರನ್ಗಳ ಗೆಲುವು ಸಾಧಿಸಿದೆ.
![England vs India](https://etvbharatimages.akamaized.net/etvbharat/prod-images/e-mw-inwqaiv60b_0609newsroom_1630939177_175.jpg)
ಓವಲ್‌ನಲ್ಲಿ 13 ಟೆಸ್ಟ್ ಪಂದ್ಯ, ಸಿಕ್ಕಿದ್ದು ಒಂದೇ ಜಯ!
ಭಾರತ-ಇಂಗ್ಲೆಂಡ್ ಇಲ್ಲಿಯವರೆಗೆ 13 ಟೆಸ್ಟ್ಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಆತಿಥೇಯ ತಂಡ 5ರಲ್ಲಿ ಜಯ ಸಾಧಿಸಿದ್ದರೆ, ಭಾರತ ತಂಡ ಕೇವಲ ಒಂದರಲ್ಲಿ ಜಯ ಸಾಧಿಸಿದೆ. 7 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಆದರೆ ಇದೀಗ ನಡೆದ ಪಂದ್ಯದಲ್ಲಿ ಗೆದ್ದು ಮಹತ್ವದ ಸಾಧನೆ ಮಾಡಿದೆ.
![England vs India](https://etvbharatimages.akamaized.net/etvbharat/prod-images/e-ms_unwuaqb9lf_0609newsroom_1630939177_919.jpg)
1971ರಲ್ಲಿ ಭಾರತಕ್ಕೆ ಜಯ, ಅಲ್ಲಿಂದ ಬರೀ ಸೋಲು!
ಭಾರತ ತಂಡ 1971ರ ಪ್ರವಾಸದಲ್ಲಿ ಕೊನೆಯ ಬಾರಿ ಆಂಗ್ಲರಿಗೆ ಸೋಲುಣಿಸಿತ್ತು. ಅಜಿತ್ ವಾಡೇಕರ್ ನಾಯಕತ್ವದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ 4 ವಿಕೆಟ್ಗಳಿಂದ ಮಣಿಸಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 355 ಮತ್ತು 2ನೇ ಇನ್ನಿಂಗ್ಸ್ನಲ್ಲಿ 101 ರನ್ಗಳಿಸಿತ್ತು. ಭಾರತ ಮೊದಲ ಇನ್ನಿಂಗ್ಸ್ನಲ್ಲಿ 284 ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿದ್ದ 173 ರನ್ಗಳ ಟಾರ್ಗೆಟ್ ಅನ್ನು ಯಶಸ್ವಿಯಾಗಿ ಬೆನ್ನತ್ತಿ ಜಯ ಸಾಧಿಸಿತ್ತು.
![England vs India](https://etvbharatimages.akamaized.net/etvbharat/prod-images/e-m8vldxiaquo1p_0609newsroom_1630939177_970.jpg)
ನಂತರ 1982, 1990, 2002, 2007ರಲ್ಲಿ ನಡೆದ ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು. ಆದರೆ, 2011ರ ಪ್ರವಾಸದಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 8 ರನ್, 2014ರಲ್ಲಿ ಇನ್ನಿಂಗ್ಸ್ ಮತ್ತು 244 ರನ್ ಹಾಗೂ 2018ರಲ್ಲಿ 118 ರನ್ಗಳ ಸೋಲು ಕಂಡಿತು. ಕಳೆದ ಮೂರು ಪ್ರವಾಸದಲ್ಲಿ ಹೀನಾಯ ಸೋಲು ಕಂಡಿರುವ ಭಾರತ ತಂಡದ ವಿರುದ್ಧ ಈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ಭಾರತ ಕಳೆದ 2-3 ವರ್ಷಗಳಿಂದ ವಿದೇಶಗಳಲ್ಲಿ ಅಚ್ಚರಿಯ ಜಯ ಸಾಧಿಸಿದ ದಾಖಲೆ ಹೊಂದಿದೆ. 32 ವರ್ಷಗಳಿಂದ ಗಬ್ಬಾದಲ್ಲಿ ಸೋಲೇ ಕಾಣದಿದ್ದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದಲ್ಲದೇ ಸರಣಿ ಗೆದ್ದು ತೋರಿಸಿತು.
![England vs India](https://etvbharatimages.akamaized.net/etvbharat/prod-images/e-hwdpqwqaizajj_0609newsroom_1630939177_792.jpg)
ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದ್ದ ಭಾರತಕ್ಕೆ ಗೆಲುವು
ಓವಲ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 191 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 290 ರನ್ಗಳಿಕೆ ಮಾಡಿ 99 ರನ್ಗಳ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾ ಅದ್ಭುತವಾಗಿ ಕಮ್ಬ್ಯಾಕ್ ಮಾಡಿತ್ತು.
ಆರಂಭಿಕ ಆಟಗಾರ ರೋಹಿತ್ ಶರ್ಮಾ 127ರನ್, ಠಾಕೂರ್ 60 ಹಾಗೂ ರಿಷಭ್ ಪಂತ್ 50 ರನ್ಗಳಿಕೆ ಮಾಡಿ ತಂಡ 466 ರನ್ಗಳಿಕೆ ಮಾಡುವಂತೆ ಮಾಡಿತ್ತು. ಜೊತೆಗೆ 368 ರನ್ಗಳ ಗುರಿ ನೀಡಿತ್ತು. ಆದರೆ ಇದನ್ನು ಬೆನ್ನತ್ತಿದ್ದ ಇಂಗ್ಲೆಂಡ್ ಕೇವಲ 210 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲು ಕಂಡಿದೆ.
![England vs India](https://etvbharatimages.akamaized.net/etvbharat/prod-images/12984874_thumbnail_3x2_wdfdfdfdf_0609newsroom_1630939177_199.jpg)
ಇದನ್ನೂ ಓದಿ: RCBಗೆ ಆನೆ ಬಲ.. ದುಬೈನಲ್ಲಿ ತಂಡ ಸೇರಿಕೊಂಡ ಎಬಿ ಡಿವಿಲಿಯರ್ಸ್..
ಇದರ ಬೆನ್ನಲ್ಲೇ ಬೌಲಿಂಗ್ನಲ್ಲಿ ಮಿಂಚಿದ ಟೀಂ ಇಂಡಿಯಾ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸದ್ಯ ಟೀಂ ಇಂಡಿಯಾ ಸರಣಿಯಲ್ಲಿ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.