ETV Bharat / sports

ಕ್ವಾರಂಟೈನ್​ನಲ್ಲಿ ಮಯಾಂಕ್​ ​; ಅಭ್ಯಾಸ ಆರಂಭಿಸಿದ ನೆಗೆಟಿವ್​ ರಿಪೋರ್ಟ್ ಪಡೆದ ಭಾರತೀಯ ಆಟಗಾರರು

author img

By

Published : Feb 3, 2022, 8:06 PM IST

ಭಾರತ ತಂಡ ವೆಸ್ಟ್​ ಇಂಡೀಸ್ ವಿರುದ್ಧ ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದ್ದು, ಮೊದಲ ಪಂದ್ಯ ಫೆಬ್ರವರಿ 6ರಂದು ಆರಂಭವಾಗಲಿದೆ.

Team India starts training as Agarwal in mandatory three-day quarantine
ಭಾರತೀಯ ಆಟಗಾರರಿಂದ ತರಬೇತಿ

ಅಹ್ಮದಾಬಾದ್​: ಶಿಖರ್​ ಧವನ್​, ಶ್ರೇಯಸ್​ ಅಯ್ಯರ್​ ಮತ್ತು ರುತುರಾಜ್​ ಗಾಯಕ್ವಾಡ್​ ಅವರನ್ನು ಹೊರೆತುಪಡಿಸಿ ಆರ್​ಟಿ-ಪಿಸಿಆರ್ ಟೆಸ್ಟ್​ನಲ್ಲಿ ನೆಗೆಟಿವ್​ ಬಂದ ಭಾರತ ತಂಡದ ಆಟಗಾರರು ಗುರುವಾರ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತರಬೇತಿ ಆರಂಭಿಸಿದ್ದಾರೆ.

ಇನ್ನೂ ಪ್ರಮುಖ ಆಟಗಾರರಿಗೆ ಕೋವಿಡ್​ ದೃಢಪಟ್ಟ ಬೆನ್ನಲ್ಲೇ ಭಾರತ ತಂಡಕ್ಕೆ ಸೇರ್ಪಡೆಯಾಗಿರುವ ಕನ್ನಡಿಗ ಮಯಾಂಕ್​ ಅಗರ್ವಾಲ್​ ಮೂರು ದಿನಗಳ ಕ್ವಾರಂಟೈನ್​ಗೆ ಒಳಗಾಗಿದ್ದು, ಮೊದಲ ಏಕದಿನ ಪಂದ್ಯದ ವೇಳೆ ಆಯ್ಕೆಗೆ ಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಭಾರತ ತಂಡ ವೆಸ್ಟ್​ ಇಂಡೀಸ್ ವಿರುದ್ಧ ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದ್ದು, ಮೊದಲ ಪಂದ್ಯ ಫೆಬ್ರವರಿ 6ರಂದು ಆರಂಭವಾಗಲಿದೆ.

ಇಂದು ಮೈದಾನಕ್ಕಿಳಿದಿದ್ದ ಭಾರತೀಯ ಆಟಗಾರರ ತರಬೇತುದಾರರ ಸಮ್ಮುಖದಲ್ಲಿ ಸಾಮಾನ್ಯ ತರಬೇತಿ ಸೆಷನ್ ನಡೆಸಿದ್ದಾರೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಇನ್ನು ಮಯಾಂಕ್​ ಅಲ್ಲದೆ ಟಿ20 ತಂಡದಲ್ಲಿರು ಇಶಾನ್​ ಕಿಶನ್​ರನ್ನು ಕೂಡ ಏಕದಿನ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ ಎನ್ನಲಾಗಿದ್ದು, ಆರಂಭಿಕನ ಸ್ಥಾನಕ್ಕಾಗಿ ಮ್ಯಾನೇಜ್​ಮೆಂಟ್​ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಧವನ್​, ರುತುರಾಜ್​ ಮತ್ತು ಶ್ರೇಯಸ್​ ಅಯ್ಯರ್ ಅಲ್ಲದೆ, ಮೀಸಲು ಆಟಗಾರನಾಗಿದ್ದ ನವದೀಪ್ ಸೈನಿ ಹಾಗೂ ಫಿಲ್ಡಿಂಗ್ ಕೋಚ್​ ಟಿ ದಿಲೀಪ್​, ಭದ್ರತಾ ಅಧಿಕಾರಿಗಳಾದ ಬಿ. ಲೋಕೇಶ್​ ಮತ್ತು ರಾಜೀವ್​ ಕುಮಾರ್​ ಅವರಿಗೆ ಸೋಂಕು​ ದೃಢಪಟ್ಟಿತ್ತು.

ಇದನ್ನೂ ಓದಿ:ನನಗೆ ಕೆರಿಯರ್ ಮುಖ್ಯ: ಐಪಿಎಲ್​ನಿಂದ ದೂರ ಉಳಿಯುತ್ತೇನೆಂದ ಜೇಮಿಸನ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.