ನವದೆಹಲಿ: ಕಾಂಗರೂ ನಾಡಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ಗೋಸ್ಕರ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದ್ದು, 15 ಸದಸ್ಯರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಕ್ಟೋಬರ್ 16ರಿಂದ ಆರಂಭಗೊಳ್ಳಲಿರುವ ಈ ಟೂರ್ನಾಮೆಂಟ್ಗೋಸ್ಕರ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ ಮಾಡಲು ಮುಂದಾಗಿದೆ. ಕಳೆದ ಎರಡು ದಿನಗಳ ಹಿಂದೆ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ಮಂಡಳಿ ಹೊಸ ಜೆರ್ಸಿ ಅನಾವರಣಗೊಳಿಸಲು ಮುಂದಾಗಿದೆ. ಆಕಾಶ ನೀಲಿ ಬಣ್ಣದ ಜೆರ್ಸಿ ಹಾಕಿಕೊಂಡು ಟೀಂ ಇಂಡಿಯಾ ಈ ಸಲ ಕಣಕ್ಕಿಳಿಯಲಿದೆ.
-
The game is not really the same without you guys cheering us on!
— MPL Sports (@mpl_sport) September 13, 2022 " class="align-text-top noRightClick twitterSection" data="
Show your fandom along with @BCCI for the game by sharing your fan moments on https://t.co/jH9ozOU1e9#MPLSports #IndianCricketTeam #ShareYourFanStories #CricketFandom #loveforcricket #cricket pic.twitter.com/VObQ3idfUz
">The game is not really the same without you guys cheering us on!
— MPL Sports (@mpl_sport) September 13, 2022
Show your fandom along with @BCCI for the game by sharing your fan moments on https://t.co/jH9ozOU1e9#MPLSports #IndianCricketTeam #ShareYourFanStories #CricketFandom #loveforcricket #cricket pic.twitter.com/VObQ3idfUzThe game is not really the same without you guys cheering us on!
— MPL Sports (@mpl_sport) September 13, 2022
Show your fandom along with @BCCI for the game by sharing your fan moments on https://t.co/jH9ozOU1e9#MPLSports #IndianCricketTeam #ShareYourFanStories #CricketFandom #loveforcricket #cricket pic.twitter.com/VObQ3idfUz
ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಈಗಾಗಲೇ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮತ್ತು ಎಂಪಿಎಲ್ ಸ್ಪೋರ್ಟ್ಸ್ ಸಹ ಟ್ವಿಟರ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಬಿಡುಗಡೆಯಾಗಿರುವ ವಿಡಿಯೋದಲ್ಲಿ ನಾಯಕ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ.
ವಿಡಿಯೋದಲ್ಲಿ, ಭಾರತ ತಂಡದ ನಾಯಕ ರೋಹಿತ್ ಶರ್ಮಾ, ನೀವು ನಮ್ಮನ್ನು ಇಂದು ಕ್ರಿಕೆಟಿಗರನ್ನಾಗಿ ಮಾಡುತ್ತೀರಿ' ಎಂದು ಹೇಳಿದ್ದಾರೆ. ಅಂತೆಯೇ ಶ್ರೇಯಸ್ ಅಯ್ಯರ್ ಅವರು, ‘ನಿಮ್ಮ ಪ್ರೋತ್ಸಾಹದಿಂದಲೇ ನಮಗೆ ಶಕ್ತಿ ಬಂದಿದೆ’ ಎಂದಿದ್ದಾರೆ. ಅಲ್ಲದೇ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಟೀಮ್ ಇಂಡಿಯಾದ ಹೊಸ ಜೆರ್ಸಿಯ ಭಾಗವಾಗಿರಿ' ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಟ್ರ್ಯಾಕ್ ಸೂಟ್ ಧರಿಸಿದ್ದಾರೆ. ಇಬ್ಬರು ತಿಳಿ ನೀಲಿ ಬಣ್ಣದ ಜೆರ್ಸಿಯನ್ನು ಧರಿಸಿರುವುದು ಸ್ಪಷ್ಟವಾಗಿ ಕಾಣಸಿಗುತ್ತದೆ.
ಇದನ್ನೂ ಓದಿ: 'ಕನಸು ನನಸಾಗಿದೆ'.. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ದಿನೇಶ್ ಪ್ರತಿಕ್ರಿಯೆ
ಟಿ20 ವಿಶ್ವಕಪ್ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (WC), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ವೈ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಬಿ. ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಾಂಡ್-ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್
ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆರಂಭಗೊಳ್ಳಲಿದೆ. ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಎರಡು ಅರ್ಹತಾ ತಂಡಗಳು ಗ್ರೂಪ್ ಬಿಯಲ್ಲಿ ಇವೆ. ಅಕ್ಟೋಬರ್ 23ರಂದು ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಸೆಣಸಾಟ ನಡೆಸಲಿದೆ. ನವೆಂಬರ್ 13ರಂದು ಫೈನಲ್ ಪಂದ್ಯ ನಡೆಯಲಿದೆ.