ETV Bharat / sports

ವಿಜಯ ಹಜಾರೆ ಟ್ರೋಫಿ :115 ರನ್​ ಚೇಸ್​ ಮಾಡಲಾಗದೇ ಹೀನಾಯ ಸೋಲುಂಡ ತಮಿಳುನಾಡು! - ಬರೋಡಾ ವಿರುದ್ಧ ಸೋತ ತಮಿಳುನಾಡು

ವಿಜಯ್​ ಹಜಾರೆ ಟ್ರೋಫಿಯ ಕೊನೆಯ ಲೀಗ್​ ಪಂದ್ಯದಲ್ಲಿ ತಮಿಳುನಾಡು ತಂಡ ಕೇವಲ 73ರನ್​​ಗಳಿಗೆ ಆಲೌಟ್​ ಆಗುವ ಮೂಲಕ ಹೀನಾಯ ಸೋಲು ಕಂಡಿದೆ.

Tamil Nadu team
Tamil Nadu team
author img

By

Published : Dec 14, 2021, 10:39 PM IST

ತಿರುವನಂತಪುರಂ: ವಿಜಯ ಹಜಾರೆ ಟ್ರೋಫಿ 2021-22ರ ಆವೃತ್ತಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ತಮಿಳುನಾಡು ತಂಡ ಬರೋಡ ವಿರುದ್ಧ ಕೇವಲ 115 ರನ್​ಗಳನ್ನು ಚೇಸ್​ ಮಾಡಲಾಗದೇ 73 ರನ್​ಗಳಿಗೆ ಆಲೌಟ್ ಆಗಿದ್ದು, 41 ರನ್​ಗಳ ಹೀನಾಯ ಸೋಲು ಕಂಡಿದೆ.

ಇತ್ತೀಚೆಗಷ್ಟೇ ಕರ್ನಾಟಕ ತಂಡವನ್ನು ಮಣಿಸಿ ಸೈಯದ್​ ಮುಷ್ತಾಕ್ ಅಲಿ ಟಿ-20 ಪ್ರಶಸ್ತಿ ಗೆದ್ದಿದ್ದ ತಮಿಳುನಾಡು ತಂಡ, ವಿಜಯ ಹಜಾರೆ ಟ್ರೋಫಿಯಲ್ಲಿ ಮೊದಲ ಮೂರು ಪಂದ್ಯಗಳನ್ನು ಗೆದ್ದು ಈಗಾಗಲೇ ಕ್ವಾರ್ಟರ್​​ ಫೈನಲ್​ಗೆ ಲಗ್ಗೆ ಹಾಕಿದೆ. ಆದರೆ, ಕಳೆದ ಪಂದ್ಯದಲ್ಲಿ ಪುದುಚೇರಿ ವಿರುದ್ಧ 1 ರನ್​ ಸೋಲು ಕಂಡಿದ್ದ ತಮಿಳುನಾಡು ಇಂದು ಬರೋಡ ವಿರುದ್ಧವೂ ಹೀನಾಯ ಸೋಲು ಕಂಡಿದೆ. ಆದರೂ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟಿದೆ.

ಕೆಸಿಎ ಕ್ರೀಡಾಂಗಣದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಬರೋಡ 39 ಓವರ್​ಗಳಲ್ಲಿ 114 ರನ್​ಗಳಿಗೆ ಆಲೌಟ್ ಆಗಿತ್ತು. ಕೃನಾಲ್ ಪಾಂಡ್ಯ 38 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಉಳಿದ ಬ್ಯಾಟರ್​ಗಳು 20ರ ಗಡಿ ದಾಟಲು ಸಾಧ್ಯವಾಗಲಿಲ್ಲ.

ತಮಿಳುನಾಡು ಪರ ಎಂ ಸಿದ್ಧಾರ್ಥ್​, ಸಂದೀಪ್ ವಾರಿಯರ್​, ವಾಷಿಂಗ್ಟನ್ ಸುಂದರ್​, ಸಂಜಯ್ ಯಾದವ್​ ತಲಾ 2 ವಿಕೆಟ್ ಪಡೆದರೆ, ಸಾಯಿ ಕಿಶೋರ್​ ಮತ್ತು ಹರಿ ನಿಶಾಂತ್ ತಲಾ ಒಂದು ವಿಕೆಟ್ ಪಡೆದಿದ್ದರು.

ತಮಿಳುನಾಡು 73ಕ್ಕೆ ಆಲೌಟ್​

ದಿನೇಶ್ ಕಾರ್ತಿಕ್(1), ವಿಜಯ್ ಶಂಕರ್(1)​ ವಾಷಿಂಗ್ಟನ್​​ ಸುಂದರ್(8)​ ಅಂತಹ ಅಂತಾರಾಷ್ಟ್ರೀಯ ಅನುಭವ ಹೊಂದಿರುವ ಕ್ರಿಕೆಟಿಗರಿದ್ದರೂ ತಮಿಳುನಾಡು ಕೇವಲ 73 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ವಿಜಯ ಹಜಾರೆ ಟ್ರೋಫಿ ಇತಿಹಾಸದಲ್ಲೇ ಕಡಿಮೆ ಮೊತ್ತವನ್ನು ಚೇಸ್ ಮಾಡಲಾಗದೆ ಸೋತ ಕುಖ್ಯಾತಿಗೆ ಪಾತ್ರವಾಗಿದೆ. ಬರೋಡ್ ಕಡಿಮೆ ರನ್​ ಡಿಫೆಂಢ್ ಮಾಡಿದ ದಾಖಲೆಗೆ ಪಾತ್ರವಾಯಿತು.

ಸಂಜಯ್ ಯಾದವ್​ 19 ರನ್​ಗಳಿಸಿದ್ದೇ ತಮಿಳುನಾಡಿನ ಗರಿಷ್ಠ ಸ್ಕೋರ್ ಆಯಿತು. ಸ್ಫೋಟಕ ಬ್ಯಾಟರ್​ ಶಾರುಕ್​ ಖಾನ್​(9), ಇಂದ್ರಜಿತ್​(0), ಜಗದೀಶನ್(11), ಹರಿ ನಿಶಾಂತ್(11) ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಬರೋಡ ಪರ ಭಾರ್ಗವ್​ ಭಟ್​ 27ಕ್ಕೆ 3, ಕೃನಾಲ್ ಪಾಂಡ್ಯ 16ಕ್ಕೆ 2, ಗುರ್ಜಿಂದರ್ ಸಿಂಗ್ 7ಕ್ಕೆ 2, ಲುಕ್ಮನ್​ ಮೆರಿವಾಲಾ 17ಕ್ಕೆ 1 ವಿಕೆಟ್ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.