ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಸಿಡ್ನಿ ಕ್ರಿಕೆಟ್ ಮೈದಾನವು ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದು, ರೋಚಕ ಹಣಾಹಣಿಯ ನಿರೀಕ್ಷೆ ಇದೆ.
ಟೂರ್ನಿಯ ಗ್ರೂಪ್-1ರಲ್ಲಿನ ಅಗ್ರ ತಂಡವಾಗಿ ನ್ಯೂಜಿಲೆಂಡ್ ಸೆಮೀಸ್ಗೆ ತಲುಪಿದ್ದರೆ, ಇನ್ನೊಂದೆಡೆ ಪಾಕಿಸ್ತಾನವು ಸೂಪರ್ -12 ಹಂತದ ಅಂತಿಮ ದಿನ ಗ್ರೂಪ್-2ರಲ್ಲಿ 2ನೇ ಸ್ಥಾನ ಪಡೆದು ಈ ಹಂತಕ್ಕೆ ದಾಪುಗಾಲಿಟ್ಟಿದೆ.
-
New Zealand have opted to bat against Pakistan in semi-final 1 at the SCG 🏏
— T20 World Cup (@T20WorldCup) November 9, 2022 " class="align-text-top noRightClick twitterSection" data="
Who are you cheering for?#T20WorldCup | #NZvPAK | 📝: https://t.co/7EuauryZFX pic.twitter.com/Zrrr3VZsRc
">New Zealand have opted to bat against Pakistan in semi-final 1 at the SCG 🏏
— T20 World Cup (@T20WorldCup) November 9, 2022
Who are you cheering for?#T20WorldCup | #NZvPAK | 📝: https://t.co/7EuauryZFX pic.twitter.com/Zrrr3VZsRcNew Zealand have opted to bat against Pakistan in semi-final 1 at the SCG 🏏
— T20 World Cup (@T20WorldCup) November 9, 2022
Who are you cheering for?#T20WorldCup | #NZvPAK | 📝: https://t.co/7EuauryZFX pic.twitter.com/Zrrr3VZsRc
ಸೆಮಿಫೈನಲ್ಗಳಲ್ಲಿ ಪಾಕ್ ಸೋತಿಲ್ಲ: ನ್ಯೂಜಿಲೆಂಡ್ ಎದುರು ಈ ಹಿಂದಿನ ಸೆಮಿಫೈನಲ್ ಮುಖಾಮುಖಿಗಳಲ್ಲಿ ಪಾಕ್ ತಂಡ ಪ್ರಾಬಲ್ಯ ಸಾಧಿಸಿದೆ. 1992ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪಾಕ್ ಎದುರು ಕಿವೀಸ್ ಸೋತಿದೆ. ಬಳಿಕ 1992, 1999ರಲ್ಲಿನ ಸೆಮಿಫೈನಲ್ ಪಂದ್ಯಗಳಲ್ಲೂ ಪಾಕಿಸ್ತಾನವು ಬ್ಲ್ಯಾಕ್ ಕ್ಯಾಪ್ಸ್ ವಿರುದ್ಧ ಮೇಲುಗೈ ಸಾಧಿಸಿತ್ತು. ತದನಂತರ 2007ರ ಟಿ20 ವಿಶ್ವಕಪ್ನಲ್ಲೂ ಸಹ ಸೆಮೀಸ್ನಲ್ಲಿ ಕಿವೀಸ್ ಎದುರು ಪಾಕಿಸ್ತಾನ ಜಯ ಕಂಡಿತ್ತು. ಈ ಗೆಲುವಿನ ದಾಖಲೆಯನ್ನು ಪಾಕಿಸ್ತಾನ ಮುಂದುವರೆಸುವ ವಿಶ್ವಾಸದಲ್ಲಿದೆ.
ಎರಡೂ ತಂಡಗಳು ಬಲಿಷ್ಠ ಬೌಲಿಂಗ್ ಹಾಗೂ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು, ಫೈನಲ್ಗಾಗಿ ಕಠಿಣ ಹೋರಾಟ ನಡೆಸಲಿವೆ. ಗೆದ್ದ ತಂಡವು ಟಿ20 ವಿಶ್ವಕಪ್ ಪ್ರಶಸ್ತಿ ಸುತ್ತಿಗೆ ತಲುಪಲಿದೆ. ಫೈನಲ್ ಪಂದ್ಯವು ನ.13ರಂದು ಮೆಲ್ಬೋರ್ನ್ ಮೈದಾನದಲ್ಲಿ ನಡೆಯಲಿದೆ.
11ರ ಬಳಗ: ಪಾಕಿಸ್ತಾನ : ಮೊಹಮ್ಮದ್ ರಿಜ್ವಾನ್ (ವಿ.ಕೀ), ಬಾಬರ್ ಅಜಮ್ (ನಾಯಕ), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ
ನ್ಯೂಜಿಲೆಂಡ್ : ಫಿನ್ ಅಲೆನ್, ಡೆವೊನ್ ಕಾನ್ವೇ(ವಿ.ಕೀ), ಕೇನ್ ವಿಲಿಯಮ್ಸನ್(ನಾಯಕ), ಗ್ಲೆನ್ ಫಿಲಿಪ್ಸ್, ಡೆರ್ಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
ಇದನ್ನೂ ಓದಿ: ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಸೆಮೀಸ್, ರಿಷಭ್ ಪಂತ್ OR ದಿನೇಶ್ ಕಾರ್ತಿಕ್?