ಅಬುಧಾಬಿ: ಆರಂಭಿಕ ಬ್ಯಾಟರ್ಗಳಾದ ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಮ್ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ ತಂಡ ನಮೀಬಿಯಾಗೆ 190 ರನ್ಗಳ ಬೃಹತ್ ಗುರಿ ನೀಡಿದೆ.
ಟಾಸ್ ಗೆದ್ದ ಪಾಕಿಸ್ತಾನ ತಂಡ ಇದೇ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದ ರಿಜ್ವಾನ್ ಮತ್ತು ಬಾಬರ್ ಅಜಮ್ ಮೊದಲ ವಿಕೆಟ್ಗೆ 113 ರನ್ಗಳ ಭರ್ಜರಿ ಜೊತೆಯಾಟ ನೀಡಿದರು.
-
A blazing batting display from Pakistan helps them to a score of 189/2 🔥
— T20 World Cup (@T20WorldCup) November 2, 2021 " class="align-text-top noRightClick twitterSection" data="
Can Namibia chase this down?#T20WorldCup | #PAKvNAM | https://t.co/LOepIWiGnz pic.twitter.com/JeqLWQYbNK
">A blazing batting display from Pakistan helps them to a score of 189/2 🔥
— T20 World Cup (@T20WorldCup) November 2, 2021
Can Namibia chase this down?#T20WorldCup | #PAKvNAM | https://t.co/LOepIWiGnz pic.twitter.com/JeqLWQYbNKA blazing batting display from Pakistan helps them to a score of 189/2 🔥
— T20 World Cup (@T20WorldCup) November 2, 2021
Can Namibia chase this down?#T20WorldCup | #PAKvNAM | https://t.co/LOepIWiGnz pic.twitter.com/JeqLWQYbNK
ಬಾಬರ್ ಅಜಮ್ 49 ಎಸೆತಗಳಲ್ಲಿ 7 ಬೌಂಡರಿ ಸಹಿತ 70 ರನ್ಗಳಿಸಿ ಔಟಾದರೆ, ರಿಜ್ವಾನ್ 50 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ ಅಜೇಯ 79 ರನ್ಗಳಿಸಿದರು. ಇವರಿಗೆ ಸಾಥ್ ನೀಡಿದ ಮೊಹಮ್ಮದ್ ಹಫೀಜ್ 16 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 32 ರನ್ಗಳಿಸಿ 190 ರನ್ಗಳ ಬೃಹತ್ ಗುರಿ ನೀಡಲು ನೆರವಾದರು.
ನಮೀಬಿಯಾ ಉತ್ತಮ ಬೌಲಿಂಗ್ ಮಾಡಿದರೂ ಕಳಪೆ ಕ್ಷೇತ್ರರಕ್ಷಣೆಯಿಂದ ಸಾಕಷ್ಟು ರನ್ ಬಿಟ್ಟುಕೊಟ್ಟರು. ಡೇವಿಡ್ ವೀಸ್ 31ಕ್ಕೆ1 ಮತ್ತು ಜಾನ್ ಫ್ರಾಲಿಂಕ್ 31ಕ್ಕೆ1 ವಿಕೆಟ್ ಪಡೆದರು.
ಇದನ್ನು ಓದಿ: T20 World Cup: ಬಾಂಗ್ಲಾದೇಶ ಬಗ್ಗುಬಡಿದು ಸೆಮಿಫೈನಲ್ಸ್ ಸನಿಹ ತಲುಪಿದ ದಕ್ಷಿಣ ಆಫ್ರಿಕಾ