ETV Bharat / sports

ಸೆಮಿಫೈನಲ್​ನಲ್ಲಿ ಪರದಾಡಿದ ಕಿವೀಸ್​.. ಪಾಕ್​ಗೆ 153 ರನ್​ಗಳ ಸಾಧಾರಣ ಗುರಿ - ಮೊದಲ ಸೆಮಿಫೈನಲ್​ ಪಂದ್ಯ

ಸಿಡ್ನಿ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಸೆಮಿಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಜಿಲ್ಯಾಂಡ್​ 152 ರನ್​ಗಳ ಸಾಧಾರಣ ಮೊತ್ತ ಗಳಿಸಿದೆ. ಪಂದ್ಯ ಗೆದ್ದ ತಂಡ ಫೈನಲ್​ ಟಿಕೆಟ್​ ಪಡೆಯಲಿದೆ.

t20-world-cup
ಸೆಮಿಫೈನಲ್​ನಲ್ಲಿ ಪರದಾಡಿದ ಕಿವೀಸ್
author img

By

Published : Nov 9, 2022, 3:49 PM IST

ಸಿಡ್ನಿ(ಆಸ್ಟ್ರೇಲಿಯಾ): ಟಿ20 ವಿಶ್ವಕಪ್​ನ ಫೈನಲ್​ ಟಿಕೆಟ್​ಗಾಗಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ 4 ವಿಕೆಟ್​​ಗೆ 152 ರನ್​ಗಳ ಸಾಧಾರಣ ಮೊತ್ತ ಗಳಿಸಿದೆ. ಬಿಗಿ ಬೌಲಿಂಗ್ ದಾಳಿ ನಡೆಸಿದ ಪಾಕಿಸ್ತಾನ ಕಿವೀಸ್​ ಬ್ಯಾಟರ್​ಗಳು ರಟ್ಟೆಯರಳಿಸದಂತೆ ನೋಡಿಕೊಂಡರು.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ನ್ಯೂಜಿಲ್ಯಾಂಡ್​ ಸಿಡ್ನಿ ಮೈದಾನದಲ್ಲಿ ಸಿಡಿಯುವ ಉತ್ಸಾಹಕ್ಕೆ ಶಾಹೀನ್ ಆಫ್ರಿದಿ ಮೊದಲ ಓವರ್​ನಲ್ಲೇ ಪೆಟ್ಟು ನೀಡಿದರು. ಆರಂಭಿಕ ಫಿನ್​ ಅಲೆನ್​ರನ್ನು ಎಲ್​ಬಿ ಬಲೆಗೆ ಬೀಳಿಸಿದ ಶಾಹೀನ್​ 4 ರನ್​ಗೆ ಪೆವಿಲಿಯನ್​ಗೆ ಅಟ್ಟಿದರು.

ಈ ವೇಳೆ ಜೊತೆಯಾದ ಡೆವೋನ್​ ಕಾನ್ವೇ 21 ರನ್​ ಗಳಿಸಿ ಉತ್ತಮವಾಗಿ ಆಡುತ್ತಿದ್ದಾಗ ಒಂಟಿ ರನ್​ ಕದಿಯಲು ಹೋಗಿ ಶಾದಾಬ್ ಖಾನ್​ ರನೌಟ್​ಗೆ ಬಲಿಯಾದರು. ಇದರ ಬೆನ್ನಲ್ಲೇ ಗುಂಪು ಹಂತದ ಪಂದ್ಯಗಳಲ್ಲಿ ಕೆಚ್ಚೆದೆಯ ಆಟವಾಗಿದ್ದ ಗ್ಲೆನ್​ ಫಿಲಿಪ್ಸ್​ 6 ರನ್​ಗೆ ಔಟ್​ ಆದರು. ಇದು ಕಿವೀಸ್​ ತಂಡಕ್ಕೆ ಅಲ್ಪ ಹಿನ್ನಡೆ ಉಂಟು ಮಾಡಿತು.

ಕೇನ್​- ಮಿಚೆಲ್​ ಜೊತೆಯಾಟದ ನೆರವು: 50 ರನ್​ಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿ ತಂಡವನ್ನು ಆಧರಿಸಿದ ನಾಯಕ ಕೇನ್​ ವಿಲಿಯಮ್ಸನ್​ ಮತ್ತು ಡ್ಯಾರಿಲ್​ ಮಿಚೆಲ್​ ಉತ್ತಮವಾಗಿ ಬ್ಯಾಟಿಂಗ್​ ಮಾಡಿದರು. ನಿಧಾನಗತಿಯಲ್ಲಿ ಬ್ಯಾಟ್​ ಮಾಡಿ ರನ್​ ಗಳಿಸಿದ ಕೇನ್​ ವಿಲಿಯಮ್ಸನ್​​ 42 ಎಸೆತಗಳಲ್ಲಿ 46 ರನ್​ ಮಾಡಿದರು.

ಮಿಚೆಲ್​ ದಾಖಲೆಯ ಅರ್ಧಶತಕ: ತಂಡ ರನ್ ಗಳಿಸಲು ಪರದಾಡುತ್ತಿದ್ದಾಗ ಕಣಕ್ಕಿಳಿದ ಸ್ಪೋಟಕ ಬ್ಯಾಟರ್​ ಡ್ಯಾರಿಲ್​ ಮಿಚೆಲ್​ ದಾಖಲೆಯ ಅರ್ಧಶತಕ ಬಾರಿಸಿದರು. ಟಿ-20 ಇತಿಹಾಸದಲ್ಲಿಯೇ ಸೆಮಿಫೈನಲ್​ ಪಂದ್ಯದಲ್ಲಿ 2 ಬಾರಿ ಅರ್ಧಶತಕ ಗಳಿಸಿದ ಮೂರನೇ ಆಟಗಾರ ಎಂಬ ಖ್ಯಾತಿ ಪಡೆದರು. ಮಿಚೆಲ್​ 3 ಬೌಂಡರಿ, 1 ಸಿಕ್ಸರ್​ ಸಮೇತ 35 ಎಸೆತಗಳಲ್ಲಿ 53 ರನ್​ ಮಾಡಿದರು.

ವೆಸ್ಟ್​​ ಇಂಡೀಸ್​ನ ದೈತ್ಯ ಬ್ಯಾಟರ್​ ಕ್ರಿಸ್​ ಗೇಯ್ಲ್​, ಭಾರತದ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಈ ದಾಖಲೆ ಮಾಡಿದ ಮೊದಲಿಗರು. ಪಾಕಿಸ್ತಾನದ ಪರವಾಗಿ ಶಾಹೀನ್ ಆಫ್ರಿದಿ 2, ನವಾಜ್​ 1 ವಿಕೆಟ್​ ಗಳಿಸಿದರು.

ಓದಿ: ಟಿ20 ವಿಶ್ವಕಪ್ ಸೆಮಿಫೈನಲ್: ಪಾಕ್​ ವಿರುದ್ಧ ಟಾಸ್​ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್​ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.