ಸಿಡ್ನಿ(ಆಸ್ಟ್ರೇಲಿಯಾ): ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತನ್ನದೇ ನೆಲದಲ್ಲಿ ನಡೆದ ಟಿ20 ವಿಶ್ವಕಪ್-2022 ರ ಮೊದಲ ಸೂಪರ್ 12 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದೆ. ಡೆವೋನ್ ಕಾನ್ವೇ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ ಹೋರಾಟದಿಂದ ಡಾರ್ಕ್ಹಾರ್ಸ್ ಕುಖ್ಯಾತಿಯ ನ್ಯೂಜಿಲೆಂಡ್ 89 ರನ್ಗಳ ಭರ್ಜರಿ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಭರ್ಜರಿ ಪ್ರದರ್ಶನ ನೀಡಿ 20 ಓವರ್ಗಳಲ್ಲಿ 200 ರನ್ ಗಳಿಸಿತು. ಬೌಲಿಂಗ್ಗೆ ನೆರವಾಗುವ ಸಿಡ್ನಿ ಮೈದಾನದಲ್ಲಿ ಕಠಿಣ ಗುರಿ ಬೆನ್ನತ್ತಿದ್ದ ತವರು ತಂಡ ಆಸ್ಟ್ರೇಲಿಯಾ ಬ್ಯಾಟಿಂಗ್ ವೈಫಲ್ಯದಿಂದ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 111 ರನ್ಗಳಿಗೆ ಆಲೌಟ್ ಆಯಿತು. ಇದು ಚುಟುಕು ಕ್ರಿಕೆಟ್ನಲ್ಲಿ ತವರಿನಲ್ಲಿ ತಂಡ ದಾಖಲಿಸಿದ ಅತಿ ಕಡಿಮೆ ಮೊತ್ತವಾಗಿದೆ. ಇದಕ್ಕೂ ಮೊದಲು ಪಾಕಿಸ್ತಾನ ವಿರುದ್ಧ 127 ರನ್ ಗಳಿಸಿದ್ದೇ ಕನಿಷ್ಠ ಮೊತ್ತವಾಗಿತ್ತು.
-
New Zealand win their first men's international game on Australian soil since 2011 🔥#T20WorldCup | #AUSvNZ | 📝 Scorecard: https://t.co/1mYxKgn4aP pic.twitter.com/D784MzZbam
— T20 World Cup (@T20WorldCup) October 22, 2022 " class="align-text-top noRightClick twitterSection" data="
">New Zealand win their first men's international game on Australian soil since 2011 🔥#T20WorldCup | #AUSvNZ | 📝 Scorecard: https://t.co/1mYxKgn4aP pic.twitter.com/D784MzZbam
— T20 World Cup (@T20WorldCup) October 22, 2022New Zealand win their first men's international game on Australian soil since 2011 🔥#T20WorldCup | #AUSvNZ | 📝 Scorecard: https://t.co/1mYxKgn4aP pic.twitter.com/D784MzZbam
— T20 World Cup (@T20WorldCup) October 22, 2022
ಆಸೀಸ್ ಬ್ಯಾಟಿಂಗ್ ಧೂಳಿಪಟ: ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ ವಿಶ್ವಕಪ್ ಆಯೋಜಕ ತಂಡ ಆಸ್ಟ್ರೇಲಿಯಾದ ಬ್ಯಾಟಿಂಗ್ ಪಡೆ ಅಕ್ಷರಶಃ ಧೂಳೀಪಟ ಕಂಡಿತು. ನ್ಯೂಜಿಲ್ಯಾಂಡ್ ಬೌಲರ್ಗಳ ಬೆಂಕಿಚೆಂಡಿಗೆ ತರಗೆಲೆಗಳಂತೆ ಉದುರಿದರು. ಆಸೀಸ್ ಪಡೆಯ ಬ್ಯಾಟಿಂಗ್ ದೈತ್ಯ ಡೇವಿಡ್ ವಾರ್ನರ್ 5 ರನ್ಗೆ ಔಟ್ ಆದರು. ಇದಾದ ಬಳಿಕ ತಂಡದ ಯಾವುದೇ ಬ್ಯಾಟರ್ ಪ್ರತಿರೋಧ ತೋರಲಿಲ್ಲ. ಗ್ಲೆನ್ ಮ್ಯಾಕ್ಸವೆಲ್ 28, ಪ್ಯಾಟ್ ಕಮಿನ್ಸ್ 21 ರನ್ ಗಳಿಸಿದ್ದೇ ಅಧಿಕ ಮೊತ್ತವಾಗಿತ್ತು.
ಬ್ಲ್ಯಾಕ್ಕ್ಯಾಪ್ಸ್ ತ್ರಿವಳಿ ದಾಳಿ: ಬಲಾಢ್ಯ ಆಸೀಸ್ ತಂಡವನ್ನು ನ್ಯೂಜಿಲೆಂಡ್ ಸ್ಪಿನ್, ವೇಗದ ಬಲ ಬಳಸಿ ಖೆಡ್ಡಾಗೆ ಕೆಡವಿತು. ವೇಗಿ ಟಿಮ್ ಸೌಥಿ ಆರಂಭದಲ್ಲೇ ನಡುಕ ಹುಟ್ಟಿಸಿ 3 ವಿಕೆಟ್ ಕೆಡವಿದರೆ, ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ 3, ಟ್ರೆಂಟ್ ಬೌಲ್ಟ್ 2 ವಿಕೆಟ್ ಕಿತ್ತರು.
ಸಿಡಿಲ ಮರಿ ಡೆವೋನ್ ಕಾನ್ವೇ: ಇದಕ್ಕೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ಗೆ ಡೆವೋನ್ ಕಾನ್ವೇ ಸಿಡಿಲಿ ಬ್ಯಾಟಿಂಗ್ ನೆರವಿನಿಂದ 200 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಆರಂಭಿಕ ಆಟಗಾರ ಕಾನ್ವೇ ಔಟಾಗದೇ 92 ರನ್ ಗಳಿಸಿದರು. ಇನ್ನೊಬ್ಬ ಆರಂಭಿಕ ಆಟಗಾರ ಫಿನ್ ಅಲೆನ್ 16 ಎಸೆತಗಳಲ್ಲಿ 3 ಸಿಕ್ಸರ್, 5 ಬೌಂಡರಿಗಳಿಂದ 42 ರನ್ ಬಾರಿಸಿದರು. ನಾಯಕ ಕೇನ್ಸ್ ವಿಲಿಯಮ್ಸನ್ 23, ಗ್ಲೆನ್ ಫಿಲಿಪ್ಸ್ 12, ಜಿಮ್ಮಿ ನೀಶಂ 26 ರನ್ ಗಳಿಸಿ ತಂಡವನ್ನು 200 ರ ಗಡಿ ಮುಟ್ಟಿಸಿದರು. ಆಸೀಸ್ ಪರವಾಗಿ ಜೋಸ್ ಹೇಜಲ್ವುಡ್ 2, ಆ್ಯಡಂ ಜಂಪಾ 1 ವಿಕೆಟ್ ಪಡೆದರು.
ಓದಿ: ವಿಶ್ವಕಪ್ಗೆ 'ಸೂಪರ್' ಆರಂಭ.. ನ್ಯೂಜಿಲ್ಯಾಂಡ್ ವಿರುದ್ಧ ಆಸೀಸ್ಗೆ 201 ರನ್ ಗುರಿ