ಅಬುಧಾಬಿ: ನೆದರ್ಲೆಂಡ್ಸ್ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಐರ್ಲೆಂಡ್ ತಂಡದ ವೇಗಿ ಕರ್ಟಿಸ್ ಕ್ಯಾಂಫರ್ ಸತತ ನಾಲ್ಕು ಬಾಲಿಗೆ ನಾಲ್ಕು ವಿಕೆಟ್ ಪಡೆಯುವ ಮೂಲಕ ಟಿ-20 ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
ಅಬುಧಾಬಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕ್ಯಾಂಫರ್, ನೆದರ್ಲೆಂಡ್ಸ್ನ ಇನ್ನಿಂಗ್ಸ್ನ 10ನೇ ಓವರ್ನಲ್ಲಿ ಸತತ 4 ಎಸೆತಗಳಲ್ಲಿ ನಾಲ್ಕು ಬ್ಯಾಟರ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದರು. 2ನೇ ಎಸೆತದಲ್ಲಿ ಕಾಲಿನ್ ಅಕರ್ಮನ್(11), 3ನೇ ಎಸೆತದಲ್ಲಿ ರಯಾನ್ ಔಟ್ ಆಗಿದ್ದಾರೆ.
-
Curtis Campher has four in four 👏
— T20 World Cup (@T20WorldCup) October 18, 2021 " class="align-text-top noRightClick twitterSection" data="
☝️ Colin Ackermann
☝️ Ryan ten Doeschate
☝️ Scott Edwards
☝️ Roelof van der Merwe#T20WorldCup | #IREvNED | https://t.co/TRm5wxuxrO pic.twitter.com/1HvjCUNR38
">Curtis Campher has four in four 👏
— T20 World Cup (@T20WorldCup) October 18, 2021
☝️ Colin Ackermann
☝️ Ryan ten Doeschate
☝️ Scott Edwards
☝️ Roelof van der Merwe#T20WorldCup | #IREvNED | https://t.co/TRm5wxuxrO pic.twitter.com/1HvjCUNR38Curtis Campher has four in four 👏
— T20 World Cup (@T20WorldCup) October 18, 2021
☝️ Colin Ackermann
☝️ Ryan ten Doeschate
☝️ Scott Edwards
☝️ Roelof van der Merwe#T20WorldCup | #IREvNED | https://t.co/TRm5wxuxrO pic.twitter.com/1HvjCUNR38
ಟೆನ್ ಡೋಶೇಟ್(0) 4ನೇ ಎಸೆತದಲ್ಲಿ ಸ್ಕಾಟ್ ಎಡ್ವರ್ಡ್ಸ್(0) ಮತ್ತು 5ನೇ ಎಸೆತದಲ್ಲಿ ವಾನ್ ಡರ್ ಮರ್ವೆ(0) ವಿಕೆಟ್ ಪಡೆದರು. ಅಕರ್ಮನ್ ಮತ್ತು ಮರ್ವೆ ಕ್ಯಾಚ್ ನೀಡಿ ಔಟಾದರೆ, ಡೋಶೇಟ್ ಮತ್ತು ಎಡ್ವರ್ಡ್ಸ್ ಎಲ್ಬಿ ಬಲೆಗೆ ಬಿದ್ದರು.
ಐರಿಸ್ ವೇಗಿಗೂ ಮುನ್ನ ಅಫ್ಘಾನಿಸ್ತಾನದ ರಶೀದ್ ಖಾನ್ 2019ರಲ್ಲಿ ಐರ್ಲೆಂಡ್ ವಿರುದ್ಧ, ಲಸಿತ್ ಮಾಲಿಂಗ 2021ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸತತ ನಾಲ್ಕು ಎಸೆತಗಳಲ್ಲಿ 4 ವಿಕೆಟ್ ಪಡೆದಿದ್ದರು. ಇನ್ನು ಒಟ್ಟಾರೆ ಟಿ-20 ಕ್ರಿಕೆಟ್ನಲ್ಲಿ ನೋಡುವುದಾದರೆ ಇದು 8ನೇ ನಿದರ್ಶನವಾಗಿದೆ. ಆ್ಯಂಡ್ರೆ ರಸೆಲ್, ಜೇಮ್ಸ್ ಅಲೆಂಬಿ, ಅಲ್ ಅಮಿನ್ ಹೊಸೇನ್,ಅಭಿಮನ್ಯು ಮಿಥುನ್, ಶಹೀನ್ ಅಫ್ರಿದಿ, ಕರ್ಟಿಸ್ ಕ್ಯಾಂಫೆರ್ ಕೂಡ ಈ ಸಾಧನೆ ಮಾಡಿದ್ದಾರೆ.