ಮುಂಬೈ: ಬರುವ ಅಕ್ಬೋಬರ್ 17 ರಿಂದ ನವೆಂಬರ್ 14ವರೆಗೆ ನಡೆಯುವ ಐಸಿಸಿ ಟಿ-20 ವಿಶ್ವಕಪ್‌ಗೆ ತಂಡಗಳ ಗುಂಪು ಈಗಾಗಲೇ ಪ್ರಕಟಗೊಂಡಿದ್ದು, ಸುಮಾರು ಎರಡು ವರ್ಷಗಳ ನಂತರ ಭಾರತ-ಪಾಕಿಸ್ತಾನ ಈ ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿವೆ. ಇದೇ ವಿಚಾರವಾಗಿ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಗಂಭೀರ್, ಪಾಕ್ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ತಂಡದಲ್ಲಿ ಅನೇಕ ಯುವ ಪ್ಲೇಯರ್ಸ್ಗಳಿರುವುದರಿಂದ ಅವರನ್ನ ಹಿಡಿತದಲ್ಲಿಟ್ಟುಕೊಳ್ಳುವ ಜವಾಬ್ದಾರಿ ಇವರ ಮೇಲಿದೆ ಎಂದಿದ್ದಾರೆ. ಪಾಕಿಸ್ತಾನ ವಿರುದ್ಧ ನಾನು ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದಾಗ ಇತರ ಹಿರಿಯ ಆಟಗಾರರಿಗಿಂತಲೂ ಹೆಚ್ಚು ಉತ್ಸುಕ ಹಾಗೂ ಹೆದರಿಕೊಂಡಿದ್ದೇನು. ಆದರಿಂದ ತಂಡದಲ್ಲಿನ ಕಿರಿಯ ಆಟಗಾರರನ್ನ ಶಾಂತವಾಗಿಟ್ಟುಕೊಳ್ಳುವ ಜವಾಬ್ದಾರಿ ಕೊಹ್ಲಿ ಹಾಗೂ ರೋಹಿತ್ ಮೇಲಿದೆ ಎಂದಿದ್ದಾರೆ.
ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯ ಅನೇಕ ಭಾವನೆ ಹೊಂದಿರುತ್ತದೆ. ಜನರು ಯಾವಾಗಲೂ ಅದನ್ನ ಎದುರು ನೋಡುತ್ತಿರುತ್ತಾರೆ ಎಂದಿರುವ ಅವರು, 2007 ಮತ್ತು 2011ರ ವಿಶ್ವಕಪ್ನಲ್ಲಿ ಪಾಕ್ ವಿರುದ್ಧದ ಗೆಲುವು ಇಂದಿಗೂ ಎಲ್ಲರ ಮನದಲ್ಲಿದೆ ಎಂದಿದ್ದಾರೆ. ಇದೇ ವೇಳೆ ಮಾತನಾಡಿರುವ ರಾಬಿನ್ ಉತ್ತಪ್ಪ, 2007 ಟಿ-20 ವಿಶ್ವಕಪ್ ವೇಳೆ ನಾನು ತಂಡದ ಭಾಗವಾಗಿದ್ದೆ. ಈ ವೇಳೆ ಪಾಕ್ ವಿರುದ್ಧ ಭಾರತ ಗೆಲುವು ಸಾಧಿಸಿದಾಗ ನಿಜಕ್ಕೂ ನಮಗೆ ಇನ್ನಿಲ್ಲದ ಸಂತೋಷವಾಗಿತು. ಆ ಗಳಿಗೆ ನನಗೆ ವಿಶೇಷವಾಗಿತ್ತು ಎಂದಿದ್ದಾರೆ.
ಟಿ-20 ವಿಶ್ವಕಪ್ನಲ್ಲಿ 2ನೇ ಗ್ರೂಪ್ನಲ್ಲಿ ಭಾರತ ಹಾಗು ಪಾಕಿಸ್ತಾನದ ಜೊತೆ ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ ತಂಡಗಳು ಸೆಣಸಾಡಲಿದ್ದು, ಗ್ರೂಪ್ 1ರಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪೈಪೋಟಿ ನಡೆಸಲಿವೆ.