ETV Bharat / sports

ಸಾಮಾಜಿಕ ಅಂತರ: ಹೆಂಡ್ತಿಗೆ ಈ ರೀತಿಯಾಗಿ 'ಕಿಸ್' ಮಾಡಿದ ಸೂರ್ಯಕುಮಾರ್​! - ಪತ್ನಿಗೆ ಮುತ್ತು ನೀಡಿದ ಸೂರ್ಯಕುಮಾರ್​

ಮುಂಬೈ ಇಂಡಿಯನ್ಸ್​ ಪ್ಲೇಯರ್ ಸೂರ್ಯಕುಮಾರ್​ ಯಾದವ್​ ಪತ್ನಿಗೆ ಮುತ್ತು ಕೊಡುವ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Suryakumar Yadav
Suryakumar Yadav
author img

By

Published : Apr 30, 2021, 9:06 PM IST

Updated : May 1, 2021, 2:40 PM IST

ಮುಂಬೈ: ಮಹಾಮಾರಿ ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿದ್ದು, ಎಲ್ಲರೂ ಅಂತರ ಕಾಯ್ದುಕೊಳ್ಳುವುದು ಅತಿ ಅವಶ್ಯವಾಗಿದೆ.

ಇದೀಗ ಟೀಂ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ಕೂಡ ಸಾಮಾಜಿಕ ಅಂತರದೊಂದಿಗೆ ತಮ್ಮ ಹೆಂಡತಿಗೆ ಮುತ್ತು ನೀಡಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ನವದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಮುಂಬೈ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಮುಂಬೈ ಇಂಡಿಯನ್ಸ್​​ ಗೆಲುವಿನ ಲಯಕ್ಕೆ ಮರಳಿದೆ. ಇದೇ ಖುಷಿಯಲ್ಲಿ ಸೂರ್ಯಕುಮಾರ್ ಯಾದವ್​ ತಮ್ಮ ಪತ್ನಿ ದೇವಿಶಾ ಶೆಟ್ಟಿಗೆ ಮುತ್ತಿಕ್ಕಿದ್ದಾರೆ. ವಿಶೇಷವೆಂದರೆ ದೇವಿಶಾ ಸ್ಟೇಡಿಯಂನ ಗ್ಲಾಸ್​ ಹಿಂಬದಿಯಲ್ಲಿದ್ದು, ಮೈದಾನದಲ್ಲಿದ್ದ ಸೂರ್ಯಕುಮಾರ್​ ತಮ್ಮ ಪತ್ನಿಗೆ ಚುಂಬಿಸಿದ್ದಾರೆ. ಗ್ಲಾಸ್​ನ ಒಂದು ತುದಿಯಲ್ಲಿ ಪತ್ನಿ ಹಾಗೂ ಮತ್ತೊಂದು ತುದಿಯಲ್ಲಿ ಸೂರ್ಯಕುಮಾರ್​ ಇರುವುದು ವಿಶೇಷವಾಗಿದೆ.

ಇಲ್ಲಿ ಐಪಿಎಲ್​ನ ಯಾವುದೇ ಬಯೋಬಬಲ್​ ಉಲ್ಲಂಘನೆಯಾಗಿಲ್ಲ ಎಂದು ಮುಂಬೈ ಇಂಡಿಯನ್ಸ್​​ ಕ್ರಿಕೆಟ್​ ನಿರ್ದೇಶಕ ಜಹೀರ್ ಖಾನ್ ಪತ್ನಿ ಸಾಗರಿಕಾ ಘಾಟ್ಕೆ ಮಾಹಿತಿ ನೀಡಿದ್ದಾರೆ.

Last Updated : May 1, 2021, 2:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.