ETV Bharat / sports

ICC T20 Rankings: ನಂಬರ್ 1 ಸ್ಥಾನದತ್ತ ಸೂರ್ಯ, ಪಾಕಿಸ್ತಾನ ಎದುರಿನ ಪಂದ್ಯವೇ ನಿರ್ಣಾಯಕ

ಟಿ20 ವಿಶ್ವಕಪ್​ನ ಭಾರತದ ಮತ್ತ ಪಾಕಿಸ್ತಾನದ ನಡುವಣ ಪಂದ್ಯದಲ್ಲಿ ರಿಜ್ವಾನ್​ ಜೊತೆಗೆ ಸೂರ್ಯ ಕುಮಾರ್ ಬ್ಯಾಟಲ್​ ಮಾಡಲಿದ್ದಾರೆ. ರ‍್ಯಾಂಕಿಂಗ್​ನಲ್ಲಿ ಎರಡನೇ ಸ್ಥಾನದಲ್ಲಿರುವ ಸೂರ್ಯ​ ಕುಮಾರ್​ ಮೇಲೇರಲು ಪ್ರಯತ್ನಿಸಿದರೆ, ಮೊದಲ ಸ್ಥಾನ ಭದ್ರಗೊಳಿಸಲು ರಿಜ್ವಾನ್​ ಸೆಣಸಲಿದ್ದಾರೆ.

ICC T20 Rankings
ನಂಬರ್ 1 ಸ್ಥಾನದತ್ತ ಸೂರ್ಯ
author img

By

Published : Oct 5, 2022, 7:34 PM IST

ದುಬೈ : ಟಿ20 ರ‍್ಯಾಂಕಿಂಗ್ ಪಟ್ಟಿ ನವೀಕರಿಸಲಾಗಿದ್ದು, ಸೂರ್ಯ ಕುಮಾರ್​ ಯಾದವ್​ ಮತ್ತು ಪಾಕಿಸ್ತಾನದ ಬ್ಯಾಟರ್​ ಕಮ್​ ವಿಕೆಟ್​ ಕೀಪರ್​ ಮೊಹಮ್ಮದ್ ರಿಜ್ವಾನ್ ಜೊತೆ ಪೈಪೋಟಿಗಿಳಿದಿದ್ದಾರೆ. ಇಬ್ಬರು ಬ್ಯಾಟರ್​ಗಳು ಫಾರ್ಮ್​​​​ನಲ್ಲಿದ್ದು ತಂಡಕ್ಕೆ ಉತ್ತಮ ರನ್​ ಕೊಡುಗೆ ನೀಡುತ್ತಾರೆ ಬಂದಿದ್ದಾರೆ. ರಿಜ್ವಾನ್​ ಮೊದಲ ಸ್ಥಾನದಲ್ಲಿದ್ದರೆ, ಸೂರ್ಯಕುಮಾರ್​ ಯಾದವ್​ ಎರಡನೇ ಸ್ಥಾನದಲ್ಲಿದ್ದಾರೆ. ಇಬ್ಬರ ನಡುವೆ 16 ಅಂಕಗಳ ಅಂತರ ಇದೆ.

ಭಾರತ ಹೋಮ್​ ಟೌನ್​​ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎದುರು ಸರಣಿಗಳನ್ನು ಆಡಿ, ಗೆದ್ದುಕೊಂಡಿದೆ. ಎರಡು ತಂಡಗಳ ವಿರುದ್ಧ 6 ಪಂದ್ಯಗಳನ್ನು ಆಡಿರುವ ಸೂರ್ಯ ಆಸ್ಟ್ರೇಲಿಯಾ ವಿರುದ್ಧ 46 ಮತ್ತು 61 ರನ್​ಗಳ ಕೊಡಿಗೆ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ಎದುರು 50 ಮತ್ತು 61ರನ್​ಗಳಿಸಿದ್ದಾರೆ. ಸೆಪ್ಟೆಂಬರ್​ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಸೂರ್ಯ ಈಗ 838 ಅಂಕಗಳಿಂದ ಎರಡನೇ ಸ್ಥಾನ ಅಂಕರಿಸಿದ್ದಾರೆ.

ಪಾಕಿಸ್ತಾನವೂ ಹೋಮ್​ಗ್ರೌಂಡ್​ನಲ್ಲಿ ಇಂಗ್ಲೆಂಡ್​ ವಿರುದ್ಧ 7 ಟಿ 20 ಪಂದ್ಯಗಳ ಸರಣಿಯಲ್ಲಿ ಸೆಣಸಿದ್ದು, ರಿಜ್ವಾನ್​ ನಾಲ್ಕು ಅರ್ಧ ಶತಕ ಗಳಿಸಿದ್ದರೆ. ಈ ಮೂಲಕ ಬಾಬರ್ ಆಜಂ ಹಿಂದಿಕ್ಕಿ 854 ರೇಟಿಂಗ್​ನಿಂದ ಮೊದಲ ಸ್ಥಾನ ಅಲಂಕರಿಸಿದ್ದಾರೆ.

ಮೆಲ್ಬೋರ್ನ್‌ನಲ್ಲಿ ಇಬ್ಬರ ಕಾಳಗ : ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಆಡಬೇಕಾಗಿದೆ. 2022 ರ ಟಿ 20 ವಿಶ್ವಕಪ್‌ನಲ್ಲಿ ಇದು ಎರಡೂ ತಂಡಗಳ ಮೊದಲ ಪಂದ್ಯವಾಗಿದ್ದು, ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಈ ಶ್ರೇಷ್ಠ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಮತ್ತು ಸೂರ್ಯಕುಮಾರ್ ಯಾದವ್ ಮುಖಾಮುಖಿಯಾಗಲಿದ್ದಾರೆ. ಹೀಗಿರುವಾಗ ಈ ಮಹಾ ಕದನದಲ್ಲಿ ಯಾರು ಗೆಲ್ಲುತ್ತಾರೋ ಕಾದು ನೋಡಬೇಕಿದೆ.

ಮೊಹಮ್ಮದ್ ರಿಜ್ವಾನ್ ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ನೀಡುತ್ತಾ ಬಂದಿದ್ದಾರೆ. ಇತ್ತ ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿ ಬಂದು ಇಡೀ ಪಂದ್ಯವನ್ನು ಬದಲಾಯಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸೂರ್ಯಕುಮಾರ್ ಯಾದವ್ ಅವರು ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಅತಿ ದೊಡ್ಡ ಗೇಮ್ ಚೇಂಜರ್ ಎಂದು ಪರಿಗಣಿಸಲಾಗಿದೆ.

ಬದಲಾವಣೆಗಳೇನು : ಕೆ ಎಲ್​ ರಾಹುಲ್​, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಕ್ರಮವಾಗಿ 14, 15, 16 ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್​ನಲ್ಲಿ ಟಾಪ್​ ಟೆನ್​ ಸ್ಥಾನದಲ್ಲಿ ಯಾರು ಇಲ್ಲ. 12ನೇ ಸ್ಥಾನದಲ್ಲಿ ಭುವನೇಶ್ವರ್​ ಕುಮಾರ್​ ಇದ್ದಾರೆ. ಆಲ್​ರೌಂಡರ್​ ವಿಭಾಗದಲ್ಲಿ ಹಾರ್ದಿಕ್​ ಪಾಂಡ್ಯ ಐದನೇ ಸ್ಥಾನದಲ್ಲಿದ್ದಾರೆ. ತಂಡಗಳ ರ‍್ಯಾಂಕಿಂಗ್​ನಲ್ಲಿ ಭಾರತ 268 ಅಂಕಗಳೊಂದಿಗೆ ಮೊದಲ ಹಾಗೂ ನಂತರದಲ್ಲಿ ಇಂಗ್ಲೆಂಡ್ ​262 ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ : ಟಿ 20 ವಿಶ್ವಕಪ್​ಗೆ ಬುಮ್ರಾ ಬದಲಿಗೆ ಶಮಿ : ರಾಹುಲ್​ ದ್ರಾವಿಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.