ದುಬೈ: 2022ನೇ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಶಸ್ತಿಗಳು ಪ್ರಕಟಗೊಂಡಿವೆ. ಭಾರತ ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಅವರಿಗೆ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಒಲಿದಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಎರಡು ಐಸಿಸಿ ಅವಾರ್ಡ್ಗಳನ್ನು ಬಾಚಿಕೊಂಡಿದ್ದಾರೆ.
2022ರಲ್ಲಿ ಟಿ20 ಮಾದರಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ್ದ ಸೂರ್ಯಕುಮಾರ್ ಯಾದವ್, 31 ಪಂದ್ಯಗಳನ್ನು ಆಡಿದ್ದು, 46.56ರ ಸರಾಸರಿಯಲ್ಲಿ 1,164 ರನ್ ಬಾರಿಸಿದ್ದರು. ಅವರ ಸ್ಟ್ರೈಕ್ ರೇಟ್ 187.43 ಆಗಿತ್ತು. ಎರಡು ಶತಕ ಹಾಗೂ 9 ಅರ್ಧಶತಕ ಗಳಿಸಿದ್ದ ಸೂರ್ಯಕುಮಾರ್, ದಾಖಲೆಯ 68 ಸಿಕ್ಸರ್ ಸಿಡಿಸಿದ್ದರು. ಅವರ ಸಿಡಿಲಬ್ಬರದ ಆಟಕ್ಕೆ ಐಸಿಸಿ ವರ್ಷದ ಟಿ-20 ಕ್ರಿಕೆಟಿಗ ಪ್ರಶಸ್ತಿ ಸಿಕ್ಕಿದೆ.
-
🏅 1164 runs at an average of 46.56
— ICC (@ICC) January 26, 2023 " class="align-text-top noRightClick twitterSection" data="
🔥 Brilliant strike-rate of 187.43
An incredible 2022 for the ICC Men's T20I Cricketer of the Year 🏏
Details ➡️ https://t.co/MBhJkWq8Xe pic.twitter.com/z5KgYNv5zq
">🏅 1164 runs at an average of 46.56
— ICC (@ICC) January 26, 2023
🔥 Brilliant strike-rate of 187.43
An incredible 2022 for the ICC Men's T20I Cricketer of the Year 🏏
Details ➡️ https://t.co/MBhJkWq8Xe pic.twitter.com/z5KgYNv5zq🏅 1164 runs at an average of 46.56
— ICC (@ICC) January 26, 2023
🔥 Brilliant strike-rate of 187.43
An incredible 2022 for the ICC Men's T20I Cricketer of the Year 🏏
Details ➡️ https://t.co/MBhJkWq8Xe pic.twitter.com/z5KgYNv5zq
ಬಾಬರ್ ಅಜಂಗೆ ಎರಡು ಗೌರವ: ಪಾಕ್ ನಾಯಕ ಬಾಬರ್ ಅಜಂಗೆ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಹಾಗೂ ಐಸಿಸಿ ಪುರುಷರ ವರ್ಷದ ಕ್ರಿಕೆಟಿಗನಿಗೆ ನೀಡಲಾಗುವ 'ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ'ಗೂ ಕೂಡ ಭಾಜನರಾಗಿದ್ದಾರೆ. ಬಾಬರ್ 9 ಏಕದಿನ ಪಂದ್ಯಗಳಿಂದ 84.87 ಸರಾಸರಿಯಲ್ಲಿ 679 ರನ್ ಗಳಿಸಿದ್ದರು. ಇದರಲ್ಲಿ ಮೂರು ಶತಕ ಹಾಗೂ 5 ಅರ್ಧಶತಕಗಳು ಸೇರಿವೆ. ಸದ್ಯ ಬಾಬರ್ ಅಜಂ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಕೆಲ ತಿಂಗಳುಗಳಿಂದ ನಂಬರ್ 1 ಸ್ಥಾನದಲ್ಲಿದ್ದಾರೆ.
ಅಲ್ಲದೆ, 2022ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್ನಲ್ಲೂ ಅದ್ಭುತ ಆಟ ತೋರಿದ ಪಾಕ್ ನಾಯಕನಿಗೆ ಐಸಿಸಿ ಪುರುಷರ ವರ್ಷದ ಕ್ರಿಕೆಟಿಗ ಪ್ರಶಸ್ತಿ ಅಂದರೆ 'ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ'ಯೂ ಸಹ ದೊರೆತಿದೆ. ಕಳೆದ ವರ್ಷ ಬಾಬರ್ ಅಜಂ ಎಲ್ಲ ಮಾದರಿಗಳಿಂದ 2,000ಕ್ಕೂ ಅಧಿಕ ರನ್ ಗಡಿ ದಾಟಿದ ಏಕೈಕ ಆಟಗಾರರಾಗಿದ್ದರು. ಅವರು 54.12ರ ಸರಾಸರಿಯಲ್ಲಿ 2,598 ರನ್ ಪೇರಿಸಿದ್ದರು. ಒಟ್ಟಾರೆ, 8 ಶತಕಗಳು ಹಾಗೂ 17 ಅರ್ಧಶತಕಗಳನ್ನು ದಾಖಲಿಸಿದ್ದರು. ಇದರ ಜೊತೆಗೆ 2022ರ ಐಸಿಸಿ ಏಕದಿನ ತಂಡದ ನಾಯಕರಾಗಿಯೂ ಸಹ ಬಾಬರ್ ಅಜಂ ಆಯ್ಕೆಯಾಗಿದ್ದರು. ಈ ಏಕದಿನ ತಂಡದಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಹಾಗೂ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದಾರೆ.
ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಆಲ್‌ರೌಂಡರ್ ಬೆನ್ ಸ್ಟೋಕ್ಸ್ಗೆ 2022ರ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ. ಆಲ್‌ರೌಂಡರ್ ಆಟ ಪ್ರದರ್ಶಿಸಿದ್ದ ಸ್ಟೋಕ್ಸ್ 36.25ರ ಸರಾಸರಿಯಲ್ಲಿ 870 ರನ್ ಹಾಗೂ 31.19ರ ಸರಾಸರಿಯಲ್ಲಿ 26 ವಿಕೆಟ್ ಕಬಳಿಸಿದ್ದರು. ಅಲ್ಲದೆ, 2022ರಲ್ಲಿ ಬೆನ್ ನಾಯಕತ್ವದಡಿ ಇಂಗ್ಲೆಂಡ್ ಟೆಸ್ಟ್ ತಂಡವು ಆಕ್ರಮಣಕಾರಿ ಆಟದ ಮೂಲಕ ಕೆಲವು ಅದ್ಭುತ ಗೆಲುವುಗಳನ್ನು ದಾಖಲಿಸಿತ್ತು.
-
A heart-warming #SpiritOfCricket moment from Nepal's wicket-keeper Aasif Sheikh 👏
— ICC (@ICC) February 16, 2022 " class="align-text-top noRightClick twitterSection" data="
Follow the upcoming T20 World Cup Qualifier A live on @FanCode and https://t.co/CPDKNxoJ9v (in select regions).
All you need to know 👉 https://t.co/XQgeYSj7Z7 pic.twitter.com/1JoX7qRube
">A heart-warming #SpiritOfCricket moment from Nepal's wicket-keeper Aasif Sheikh 👏
— ICC (@ICC) February 16, 2022
Follow the upcoming T20 World Cup Qualifier A live on @FanCode and https://t.co/CPDKNxoJ9v (in select regions).
All you need to know 👉 https://t.co/XQgeYSj7Z7 pic.twitter.com/1JoX7qRubeA heart-warming #SpiritOfCricket moment from Nepal's wicket-keeper Aasif Sheikh 👏
— ICC (@ICC) February 16, 2022
Follow the upcoming T20 World Cup Qualifier A live on @FanCode and https://t.co/CPDKNxoJ9v (in select regions).
All you need to know 👉 https://t.co/XQgeYSj7Z7 pic.twitter.com/1JoX7qRube
ಐಸಿಸಿ ಕ್ರಿಕೆಟ್ ಸ್ಫೂರ್ತಿ ಪ್ರಶಸ್ತಿ: ಐಸಿಸಿ ಕ್ರಿಕೆಟ್ ಸ್ಫೂರ್ತಿ ಪ್ರಶಸ್ತಿಯು ನೇಪಾಳ ತಂಡದ ವಿಕೆಟ್ ಕೀಪರ್ ಆಸೀಫ್ ಶೇಖ್ ಅವರಿಗೆ ಒಲಿದಿದೆ. ಮಸ್ಕತ್ನ ಅಲ್-ಅಲ್ಮೇರತ್ ಕ್ರೀಡಾಂಗಣದಲ್ಲಿ ನಡೆದ ಐರ್ಲೆಂಡ್ ಮತ್ತು ನೇಪಾಳ ನಡುವಿನ ಟಿ20 ಪಂದ್ಯದಲ್ಲಿ ಆಸೀಫ್ ಶೇಖ್ ಕ್ರೀಡಾ ಸ್ಫೂರ್ತಿ ಮೆರೆದಿದ್ದರು. ಅಂದಿನ ಪಂದ್ಯದಲ್ಲಿ ನೇಪಾಳದ ಬೌಲರ್ ಕಮಲ್ ಸಿಂಗ್ ಐರಿ ಬೌಲಿಂಗ್ ಮಾಡಿದ್ದು, ಕ್ರೀಸ್ನಲ್ಲಿದ್ದ ಬ್ಯಾಟರ್ ಮಾರ್ಕ್ ಅಡೈರ್ ರನ್ ಗಳಿಸಲು ಮುಂದಾಗಿದ್ದರು. ಆಗ ಕ್ರೀಸ್ನ ಮತ್ತೊಂದು ತುದಿಯಲ್ಲಿದ್ದ ಮೆಕ್ಬ್ರಿನ್ ಅವರು ರನ್‌ಗಾಗಿ ಓಡುವಾಗ ಬೌಲರ್ಗೆ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದರು. ಆಗ ಚೆಂಡನ್ನು ತೆಗೆದುಕೊಂಡ ಕಮಲ್ ಸಿಂಗ್ ಐರಿ ತಕ್ಷಣ ವಿಕೆಟ್ ಕೀಪರ್ ಆಸೀಫ್ ಕೈಗೆ ಎಸೆಯುತ್ತಾರೆ. ಆದರೆ ಕೆಳಗೆ ಬಿದ್ದಿದ್ದ ಮೆಕ್ಬ್ರಿನ್ ಅವರು ಗೆರೆ ತಲುಪುವ ಮೊದಲೇ ರನ್ ಔಟ್ ಮಾಡುವ ಅವಕಾಶವಿದ್ದರೂ ವಿಕೆಟ್ ಕೀಪರ್ ಆಸೀಫ್ ಶೇಖ್ ಹಾಗೆ ಮಾಡುವುದಿಲ್ಲ. ಈ ವೇಳೆ, ನಿರಾಯಾಸವಾಗಿ ನಡೆದುಕೊಂಡು ಬಂದು ಮೆಕ್ಬ್ರಿನ್ ಕ್ರೀಸ್ ತಲುಪಿದ್ದರು. ವಿಕೆಟ್ ಕೀಪರ್ ಆಸೀಫ್ ಶೇಖ್ ಅವರ ಈ ನಡೆಗೆ ಬಹುಮೆಚ್ಚುಗೆ ವ್ಯಕ್ತವಾಗಿತ್ತಲ್ಲದೆ, ಇದೀಗ 2022ರ ಐಸಿಸಿ ಕ್ರಿಕೆಟ್ ಸ್ಫೂರ್ತಿ ಪ್ರಶಸ್ತಿ ಲಭಿಸಿದೆ.
ಉದಯೋನ್ಮುಖ ತಾರೆ: 2022ರಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಭರವಸೆ ಮೂಡಿಸಿದ ದಕ್ಷಿಣ ಆಫ್ರಿಕಾದ ಯುವ ವೇಗದ ಬೌಲರ್ ಮಾರ್ಕೊ ಜಾನ್ಸೆನ್ ಐಸಿಸಿ ಪುರುಷರ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾರ್ಕೊ ಜಾನ್ಸೆನ್ 19.02ರ ಸರಾಸರಿಯಲ್ಲಿ 36 ಟೆಸ್ಟ್ ವಿಕೆಟ್, ಟೆಸ್ಟ್ನಲ್ಲಿ 21.27ರ ಸರಾಸರಿಯಲ್ಲಿ 234 ರನ್ ಬಾರಿಸಿದ್ದರು. ಜೊತೆಗೆ ಏಕದಿನ ಕ್ರಿಕೆಟ್ನಲ್ಲಿ ಎರಡು ವಿಕೆಟ್ ಹಾಗೂ ಒಂದು ಟಿ20 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದರು. ಇಂಗ್ಲೆಂಡ್ ವಿರುದ್ಧ 35 ರನ್ಗೆ 5 ವಿಕೆಟ್ ಪಡೆದಿದ್ದು, ಜಾನ್ಸೆನ್ ಅವರ ಅದ್ಭುತ ಪ್ರದರ್ಶನವಾಗಿದ್ದು, ಆ ಪಂದ್ಯದಲ್ಲಿ ಆಂಗ್ಲರು ಕೇವಲ 158ಕ್ಕೆ ಆಲೌಟ್ ಆಗಿದ್ದರು. ಇನ್ನು ರಿಚರ್ಡ್ ಇಲ್ಲಿಂಗ್ವರ್ತ್ ಅವರು ಐಸಿಸಿ ವರ್ಷದ ಅಂಪೈರ್ ಆಗಿ ಹೊರಹೊಮ್ಮಿದ್ದಾರೆ. ಈ ಹಿಂದೆ 2019ರಲ್ಲೂ ಕೂಡ ಇಲ್ಲಿಂಗ್ವರ್ತ್ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.
ರೇಣುಕಾ ಸಿಂಗ್ಗೆ ಪ್ರಶಸ್ತಿ: ಮಹಿಳೆಯರ ವಿಭಾಗದಲ್ಲಿ ಭಾರತದ ಯುವ ವೇಗದ ಬೌಲರ್ ರೇಣುಕಾ ಸಿಂಗ್ ಅವರಿಗೆ ಐಸಿಸಿ ವರ್ಷದ ಉದಯೋನ್ಮುಖ ಮಹಿಳಾ ಕ್ರಿಕೆಟರ್ ಪ್ರಶಸ್ತಿ ಸಿಕ್ಕಿದೆ. ರೇಣುಕಾ ಸಿಂಗ್ ಏಕದಿನ ಮಾದರಿಯಲ್ಲಿ 14.88ರ ಸರಾಸರಿ ಹಾಗೂ 4.62ರ ಎಕಾನಮಿ ದರದಲ್ಲಿ 18 ವಿಕೆಟ್ ಹಾಗೂ 23.95ರ ಸರಾಸರಿ ಹಾಗೂ 6.50ರ ಎಕಾನಮಿ ದರದಲ್ಲಿ 22 ಟಿ20 ವಿಕೆಟ್ ಕಿತ್ತಿದ್ದರು. ಇನ್ನುಳಿದಂತೆ ಆಸ್ಟ್ರೇಲಿಯಾದ ತಹ್ಲಿಯಾ ಮೆಕ್‌ಗ್ರಾತ್ ಐಸಿಸಿ ವರ್ಷದ ಮಹಿಳಾ ಟಿ20 ಕ್ರಿಕೆಟರ್ ಪ್ರಶಸ್ತಿ ಪಡೆದಿದ್ದಾರೆ. ಇಂಗ್ಲೆಂಡ್ ಸ್ಟಾರ್ ಆಲ್‌ರೌಂಡರ್ ನ್ಯಾಟ್ ಸಿವರ್ 2022ರ ವರ್ಷದ ಐಸಿಸಿ ಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿಯ ವಿಜೇತರಾಗಿದ್ದಾರೆ. ಹಾಗೆಯೇ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಯು ಇಂಗ್ಲೆಂಡ್ನ ಆಲ್-ರೌಂಡರ್ ರಾಚೆಲ್ ಹೇಹೋ ಫ್ಲಿಂಟ್ ಅವರಿಗೆ ಒಲಿದಿದೆ.
ಇದನ್ನೂ ಓದಿ: ದ್ರಾವಿಡ್ ಪ್ರಶ್ನೆಗೆ 'ನನ್ನ ತಂದೆ ಸಂತೋಷಪಡುತ್ತಾರೆ ಎಂದು ಭಾವಿಸಬೇಡಿ'.. ಗಿಲ್ ಹೀಗೆ ಹೇಳಿದ್ದೇಕೆ?