ಮೀರತ್: ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ತಮ್ಮ ಸಂಬಂಧಿಯೊಬ್ಬರಿಗೆ ತುರ್ತಾಗಿ ಆಕ್ಸಿಜನ್ ಸಿಲಿಂಡರ್ ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಆದರೆ ತಕ್ಷಣ ರೈನಾ ಟ್ವೀಟ್ಗೆ ಮನವಿಗೆ ಸ್ಪಂದಿಸಿದ, ಕೊರೊನಾ ಸಂಕಷ್ಟದಲ್ಲಿ ಸಾಮಾನ್ಯ ಜನತೆಯ ಪಾಲಿಗೆ ಹೀರೋ ಆಗಿರುವ ಬಹುಭಾಷಾ ನಟ ಸೋನು ಸೂದ್ ಆಕ್ಸಿಜನ್ ಸಿಲಿಂಡರ್ ತಲುಪಿಸಲು ಮುಂದೆ ಬಂದಿದ್ದಾರೆ. ಆದರೆ ಮೀರತ್ ಪೊಲೀಸರು ರೈನಾ ಮನವಿ ಮಾಡಿದ 10 ನಿಮಿಷಕ್ಕೆ ಸಿಲಿಂಡರ್ ತಲುಪಿಸಿ ಕಾರ್ಯಕ್ಷಮತೆ ತೋರಿದ್ದಾರೆ.
![ಸುರೇಶ್ ರೈನಾ ಟ್ವೀಟ್ಗೆ ಪ್ರತಿಕ್ರಿಯಿಸಿದ ಸೋನು ಸೂದ್](https://etvbharatimages.akamaized.net/etvbharat/prod-images/11663983_ghb.png)
34 ವರ್ಷದ ಕ್ರಿಕೆಟಿಗ ಸುರೇಶ್ ರೈನಾ ಇಂದು 3:47ರ ಸಮಯದಲ್ಲಿ , ತಮ್ಮ 65 ವರ್ಷ ಸಂಬಂಧಿ ಶ್ವಾಸಕೋಶ ಮತ್ತು ಕೋವಿಡ್ 19 ಸೋಂಕಿನಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ತಕ್ಷಣ ಆಕ್ಸಿಜನ್ ಸಿಲಿಂಡರ್ ಅವಶ್ಯಕತೆಯಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರರಿಗೆ ಟ್ಯಾಗ್ ಮಾಡಿದ್ದರು.
-
मेरठ पुलिस द्वारा @ImRaina की ट्वीट पर 20 मिनिट के अन्दर ऑक्सीजन सिलेण्ड़र उपलब्ध कराया गया @uppolice @adgzonemeerut @igrangemeerut @ipsajaysahni @SurajRai_IPS pic.twitter.com/9240pcloIc
— MEERUT POLICE (@meerutpolice) May 6, 2021 " class="align-text-top noRightClick twitterSection" data="
">मेरठ पुलिस द्वारा @ImRaina की ट्वीट पर 20 मिनिट के अन्दर ऑक्सीजन सिलेण्ड़र उपलब्ध कराया गया @uppolice @adgzonemeerut @igrangemeerut @ipsajaysahni @SurajRai_IPS pic.twitter.com/9240pcloIc
— MEERUT POLICE (@meerutpolice) May 6, 2021मेरठ पुलिस द्वारा @ImRaina की ट्वीट पर 20 मिनिट के अन्दर ऑक्सीजन सिलेण्ड़र उपलब्ध कराया गया @uppolice @adgzonemeerut @igrangemeerut @ipsajaysahni @SurajRai_IPS pic.twitter.com/9240pcloIc
— MEERUT POLICE (@meerutpolice) May 6, 2021
ಇದಕ್ಕೆ ನಿಮಿಷಗಳಲ್ಲೇ ಪ್ರತಿಕ್ರಿಯಿಸಿರುವ ಸೋನು, ವಿವರಗಳನ್ನು ನನಗೆ ಕಳುಹಿಸಿ ನಾನು ತಲುಪಿಸುತ್ತೇನೆ ಎಂದು ತಿಳಿಸಿದ್ದಾರೆ. ರೈನಾ ಕೂಡ ವಿಳಾಸವನ್ನು ಕಳುಹಿಸಿ ಸೋನುಗೆ ಧನ್ಯವಾದ ತಿಳಿಸಿದ್ದಾರೆ.
ಮತ್ತೆ ಎರಡು ಗಂಟೆಗಳ ನಂತರ ಮತ್ತೊಂದು ಟ್ವೀಟ್ ಮಾಡಿರುವ ಅವರು ಆಕ್ಸಿಜನ್ ದೊರಕಿದೆ. ಸೂಕ್ತ ಸಮಯಕ್ಕೆ ನೆರವಾದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಎಲ್ಲರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ರೈನಾ ಅವರ ಮನವಿಯ ಮೇರೆಗೆ 20 ನಿಮಿಷಗಳಲ್ಲಿ ಆಕ್ಸಿಜನ್ ಸಿಲಿಂಡರ್ ಅನ್ನು ಅವರು ತಿಳಿಸಿದ ವಿಳಾಸಕ್ಕೆ ತಲುಪಿಸಿದ್ದೇವೆ ಎಂದು ಮೀರತ್ ಪೊಲೀಸ್ ತಮ್ಮ ಟ್ವೀಟ್ನಲ್ಲಿ ತಿಳಿಸಿದೆ.
ಇದನ್ನು ಓದಿ:ಅಸಡ್ಡೆ ಬೇಡ, ಆದಷ್ಟು ಬೇಗ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಿ: ಶಿಖರ್ ಧವನ್ ಮನವಿ