ಕೊಲಂಬೊ (ಶ್ರೀಲಂಕಾ): ವಿರಾಟ್ ಕೊಹ್ಲಿಗೆ ಪಾಕಿಸ್ತಾನದ ಬೌಲರ್ಗಳೆಂದರೆ ಅದೇನು ಪ್ರೀತಿಯೋ ಗೊತ್ತಿಲ್ಲ. ಪಾಕ್ ವಿರುದ್ಧದ ಪಂದ್ಯದಲ್ಲಿ ಬೌಲರ್ಗಳನ್ನು ಸತತವಾಗಿ ದಂಡಿಸುತ್ತಾ ಬಂದಿದ್ದಾರೆ. ವಿರಾಟ್ ಅವರ ಹಳೆಯ ಎಲ್ಲ ರೆಕಾರ್ಡ್ಗಳಲ್ಲಿ ಅವರು ಪಾಕಿಸ್ತಾನದ ಮೇಲೆ ವಿಫಲರಾದದ್ದು ಬೆರಳೆಣಿಕೆಯ ಪಂದ್ಯದಲ್ಲಿ ಮಾತ್ರ. ಇಂದು ಸಹ ಮತ್ತೆ ಪಾಕಿಸ್ತಾನದ ವಿರುದ್ಧ ಘರ್ಜಿಸಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಪತಿಯ ಅದ್ಭುತ ಆಟವನ್ನು ಟಿವಿಯಲ್ಲಿ ನೋಡಿದ ಅನುಷ್ಕ್ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿ ಶುಭಾಶಯ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಪ್ರೇರಣಾ ಶಕ್ತಿಯೇ ಅನುಷ್ಕಾ ಶರ್ಮಾ ಎಂದು ಆಗಾಗಾ ಹೇಳುತ್ತಿರುತ್ತಾರೆ. ಪತಿಯ ಆಟಕ್ಕೆ ಯಾವಾಗಲೂ ಬೆನ್ನೆಲುಬಾಗಿ ನಿಲ್ಲುವ ಅನುಷ್ಕಾ ವಿರಾಟ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶತಕ ಗಳಿಸಿದ ಕೆಎಲ್ ರಾಹುಲ್ಗೂ ತಮ್ಮ ಶುಭಾಶಯ ತಿಳಿಸಿದ್ದಾರೆ. ಅನುಷ್ಕಾ ಶರ್ಮಾ ಹೆಚ್ಚಾಗಿ ವಿರಾಟ್ ಜೊತೆಗೆ ಪಂದ್ಯಗಳು ನಡೆಯುವಾಗ ಪ್ರವಾಸ ಮಾಡುತ್ತಾರೆ. ಈ ಬಾರಿ ಏಷ್ಯಾಕಪ್ಗೆ ಅವರು ತೆರಳಿಲ್ಲ. ಇಲ್ಲದಿದ್ದರೆ ಕ್ರೀಡಾಂಗಣದ ಸ್ಟ್ಯಾಂಡ್ನಿಂದಲೇ ಪತಿಯ ಆಟವನ್ನು ಹೆಚ್ಚು ನೋಡುತ್ತಾರೆ.
![Anushka Sharma hails Virat Kohli's century against Pakistan](https://etvbharatimages.akamaized.net/etvbharat/prod-images/11-09-2023/19487250_thum.jpg)
ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಅಥಿಯಾ ಶೆಟ್ಟಿ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಗಾಯದಿಂಧ ಮತ್ತು ಫಾರ್ಮ್ನಿಂದ ಪುನರಾಗಮನ ಮಾಡಿದ್ದಾರೆ. ಈ ಪಂದ್ಯದಲ್ಲಿ ಶತಕ ಗಳಿಸಿದ ಕೆಎಲ್ ರಾಹುಲ್ಗೆ ಅವರ ಪತ್ನಿ, ನಟಿ ಅಥಿಯಾ ಶೆಟ್ಟಿ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಶುಭಾಶಯ ಹೇಳಿದ್ದಾರೆ. ಪೋಸ್ಟ್ನಲ್ಲಿ "ಕತ್ತಲೆಯ ರಾತ್ರಿಯೂ ಕೊನೆಗೊಳ್ಳುತ್ತದೆ ಮತ್ತು ಸೂರ್ಯ ಮತ್ತೆ ಉದಯಿಸುತ್ತಾನೆ. ನೀನೇ ನನಗೆ ಸರ್ವಸ್ವ, ಐ ಲವ್ ಯೂ#1" ಎಂದು ಬರೆದುಕೊಂಡಿದ್ದಾರೆ.
ಪಂದ್ಯದಲ್ಲಿ: ನಿನ್ನೆ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ಯುವ ಬ್ಯಾಟರ್ ಶುಭಮನ್ ಗಿಲ್ 121 ರನ್ಗಳ ಜೊತೆಯಾಟ ಮಾಡಿ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ರೋಹಿತ್ 56 ರನ್ ಗಳಿಸಿ ವಿಕೆಟ್ ಕೊಟ್ಟರೆ, 58 ರನ್ ಗಳಿಸಿದ ಗಿಲ್ ಶಾಹೀನ್ ಔಟ್ ಆದರು. ನಂತರ ಬಂದ ವಿರಾಟ್ ಮತ್ತು ಕೆಎಲ್ ರಾಹುಲ್ 24 ರನ್ನ ಜೊತೆಯಾಟ ಮಾಡಿದ್ದರು, ಈ ವೇಳೆ ಮಳೆ ಬಂದು ಪಂದ್ಯವನ್ನು ಮುಂದೂಡಲಾಯಿತು. ಆಗ ಭಾರತ 24.1 ಓವರ್ಗೆ 2 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತ್ತು. ಇಂದು ಪಂದ್ಯ ಆರಂಭವಾಗುತ್ತಿದ್ದಂತೆ ವಿರಾಟ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಅನ್ನು ವಿಕೆಟ್ ಕೊಡದೇ ಮುನ್ನಡೆಸಿದರು. ಇಬ್ಬರು ಶತಕ ದಾಖಲಿಸುವ ಮೂಲಕ ದಾಖಲೆ ಬರೆದರು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ 11 ಓವರ್ ವೇಳೆಗೆ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ (9) ಮತ್ತು ನಾಯಕ ಬಾಬರ್ ಅಜಮ್ (10) ವಿಕೆಟ್ ಕಳೆದುಕೊಂಡಿದೆ. ಪಾಕಿಸ್ತಾನ ಈಗ ಎರಡು ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದೆ. ಕ್ರೀಸ್ನಲ್ಲಿ ಫಾಕರ್ ಜಮಾನ್ ಮತ್ತು ಮಹಮ್ಮದ್ ರಿಜ್ವಾನ್ ಇದ್ದಾರೆ.
ಇದನ್ನೂ ಓದಿ: Asia Cup 2023: ಪಾಕಿಸ್ತಾನದ ಎರಡು ವಿಕೆಟ್ ಕಿತ್ತ ಭಾರತ.. ದ್ವಿತೀಯ ಇನ್ನಿಂಗ್ಸ್ಗೆ ಮತ್ತೆ ಮಳೆ ಕಾಟ