ETV Bharat / sports

ಟಿ-20 ಪಂದ್ಯ ನಡೆಯುತ್ತಿದ್ದಾಗ ಮೈದಾನದಲ್ಲಿ ಬಾಂಬ್​​ ಸ್ಫೋಟ.. ನಾಲ್ವರಿಗೆ ಗಾಯ - ಈಟಿವಿ ಭಾರತ ಕನ್ನಡ

ಟಿ-20 ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ಕಾಬೂಲ್ ಅಂತಾರಾಷ್ಟ್ರೀಯ ಮೈದಾನದಲ್ಲಿ ಬಾಂಬ್​ ಸ್ಫೋಟಗೊಂಡಿರುವ ಘಟನೆ ನಡೆದಿದೆ.

SUICIDE BOMBING DURING T20 MATCH
SUICIDE BOMBING DURING T20 MATCH
author img

By

Published : Jul 29, 2022, 8:56 PM IST

ಕಾಬೂಲ್​(ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಕಾಬೂಲ್​​​ನ ಅಂತಾರಾಷ್ಟ್ರೀಯ ಮೈದಾನದಲ್ಲಿ ಸ್ಥಳೀಯ ಟಿ-20 ಪಂದ್ಯ ನಡೆಯುತ್ತಿದ್ದ ವೇಳೆ ಬಾಂಬ್​ ಸ್ಫೋಟಗೊಂಡಿದೆ. ಪರಿಣಾಮ ಗ್ಯಾಲರಿಯಲ್ಲಿ ಕುಳಿತುಕೊಂಡಿದ್ದ ನಾಲ್ವರು ಗಾಯಗೊಂಡಿದ್ದಾಗಿ ವರದಿಯಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಕಾಬೂಲ್​ನ ಕ್ರಿಕೆಟ್ ಮೈದಾನದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದೆ ಎಂದು ವರದಿಯಾಗಿದ್ದು, ಈ ವೇಳೆ ಟಿ-20 ಪಂದ್ಯ ನಡೆಯುತ್ತಿತ್ತು. ಕ್ರೀಡಾಂಗಣ ಸಂಪೂರ್ಣವಾಗಿ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು.

Afghanistan Suicide blast
ಟಿ-20 ಪಂದ್ಯ ನಡೆಯುತ್ತಿದ್ದಾಗ ಕಾಬೂಲ್​ ಮೈದಾನದಲ್ಲಿ ಬಾಂಬ್​​ ಸ್ಫೋಟ

ಪಾಮಿರ್​ ಝಲ್ಮಿ ಮತ್ತು ಬ್ಯಾಂಡ್​ ಎ ಅಮೀರ್​​ ಡ್ರಾಗನ್ಸ್​ ತಂಡಗಳ ನಡುವೆ ಶಪೇಜಾ ಕ್ರಿಕೆಟ್ ಲೀಗ್‌ನ 22 ನೇ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಎರಡು ತಂಡದ ಪ್ಲೇಯರ್ಸ್​​​ಗಳನ್ನ ಬಂಕರ್​​ನೊಳಗೆ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ. ವಿಶೇಷವೆಂದರೆ ಈ ಪಂದ್ಯ ನಡೆಯುತ್ತಿದ್ದ ವೇಳೆ ವಿಶ್ವಸಂಸ್ಥೆಯ ಅಧಿಕಾರಿಗಳು ಸಹ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ. ಬಾಂಬ್​​ ಸ್ಫೋಟಗೊಂಡಿರುವ ಬಗ್ಗೆ ಎಸಿಬಿಯ ಮುಖ್ಯ ಕಾರ್ಯನಿರ್ವಾಹಕ ನಸೀಬ್ ಖಾನ್ ಪ್ರಕಟಣೆಯಲ್ಲಿ ಖಚಿತ ಪಡಿಸಿದ್ದು, ಸಿಬ್ಬಂದಿ ಹಾಗೂ ಆಟಗಾರರು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: IND vs WI T-20I: ಟಾಸ್​ ಗೆದ್ದು ಬೌಲಿಂಗ್ ಆಯ್ದ ವೆಸ್ಟ್ ಇಂಡೀಸ್​, ಅಶ್ವಿನ್​, ಶ್ರೇಯಸ್​​ಗೆ ಚಾನ್ಸ್​​

2021ರ ಆಗಸ್ಟ್​​ ತಿಂಗಳಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಆಡಳಿತ ನಡೆಸುತ್ತಿದ್ದು, ಮೇಲಿಂದ ಮೇಲೆ ದಾಳಿಗಳು ನಡೆಯುತ್ತಿವೆ. ಕಳೆದ ಕೆಲ ತಿಂಗಳ ಹಿಂದೆ ಗುರುದ್ವಾರದ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಇದರ ಜೊತೆಗೆ ಅನೇಕ ಧಾರ್ಮಿಕ ಸ್ಮಾರಕಗಳ ಬಳಿ ಸಹ ಬಾಂಬ್ ಸ್ಫೋಟಗೊಳ್ಳುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.