ಮೆಲ್ಬೋರ್ನ್ (ಆಸ್ಟ್ರೇಲಿಯಾ): ಮಾರ್ಚ್ 17 ರಿಂದ ಆರಂಭವಾಗುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಗೆ ಸ್ಟೀವ್ ಸ್ಮಿತ್ ನಾಯಕತ್ವ ಮುಂದುವರೆಯಲಿದೆ. ಕಳೆದ ವಾರ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪ್ಯಾಟ್ ಕಮಿನ್ಸ್ ತಾಯಿ ಮರಿಯಾ ನಿಧನರಾಗಿದ್ದರು ಈ ಕಾರಣ ಅವರು ಮನೆಯಲ್ಲೇ ಕೆಲ ಸಮಯ ಕಳೆಯಲಿಚ್ಛಿಸಿದ್ದಾರೆ ಎಂದು ಕೋಚ್ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ನಂತರ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾಕ್ಕೆ ಮರಳಿದ್ದರು. ಮೂರು ಮತ್ತು ನಾಲ್ಕನೇ ಟೆಸ್ಟ್ನ್ನು ಸ್ಟೀವ್ ಸ್ಮಿತ್ ಮುನ್ನಡೆಸಿದ್ದರು. ಎರಡು ಪಂದ್ಯದ ನಂತರ ಆಸಿಸ್ ಟೆಸ್ಟ್ ಸರಣಿಯಲ್ಲಿ 2-0 ಯಲ್ಲಿತ್ತು. ಸ್ಮಿತ್ ನಾಯಕತ್ವದಲ್ಲಿ ಇಂದೋರ್ನಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿತ್ತು. ಅಹಮದಾಬಾದ್ನಲ್ಲಿ ನಡೆದ ಅಂತಿಮ ಟೆಸ್ಟ್ ನಿನ್ನೆ ಡ್ರಾದಲ್ಲಿ ಅಂತ್ಯವಾಯಿತು.
ಪ್ಯಾಟ್ ಕಮಿನ್ಸ್ ಈ ದುಃಖಕರ ಸಂದರ್ಭದಲ್ಲಿ ಅವರ ಕುಟುಂಬದ ಜೊತೆ ಇರಲಿ ಎಂದು ನಾವು ಭಾವಿಸಿದ್ದೇವೆ. ತಂಡದಲ್ಲಿ ಕಮಿನ್ಸ್ ಬದಲಿಗೆ ಯಾರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ. ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಝೈ ರಿಚರ್ಡ್ಸನ್ ಅವರ ಬದಲಿಯಾಗಿ ನಾಥನ್ ಎಲ್ಲಿಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಆಸ್ಟ್ರೇಲಿಯಾ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
-
The Australia captain will remain home and miss the upcoming ODIs in India.
— ICC (@ICC) March 14, 2023 " class="align-text-top noRightClick twitterSection" data="
Details 👇https://t.co/NjZD2zdy41
">The Australia captain will remain home and miss the upcoming ODIs in India.
— ICC (@ICC) March 14, 2023
Details 👇https://t.co/NjZD2zdy41The Australia captain will remain home and miss the upcoming ODIs in India.
— ICC (@ICC) March 14, 2023
Details 👇https://t.co/NjZD2zdy41
ಆಸ್ಟ್ರೇಲಿಯಾ ಕೊನೆಯ ಐದು ಏಕದಿನ ಪಂದ್ಯಗಳಿಗೆ ಬೇರೆ ಬೇರೆ 4 ನಾಯಕರನ್ನು ಆಯ್ಕೆ ಮಾಡಿಕೊಂಡಿದೆ. ಭಾರತ ವಿರುದ್ಧದ ಪಂದ್ಯಕ್ಕೆ ಸ್ಮಿತ್ ನಾಯಕತ್ವ ನೀಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಂತರ ಆರನ್ ಫಿಂಚ್ ನಿವೃತ್ತರಾದ ಬಳಿಕ ಕಮಿನ್ಸ್ಗೆ ನಾಯಕತ್ವ ನೀಡಲಾಗಿತ್ತು. ನವೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯಕ್ಕೆ ಕಮಿನ್ಸ್ಗೆ ವಿಶ್ರಾಂತಿ ನೀಡಿದ ಕಾರಣ ತಂಡವನ್ನು ಜೋಶ್ ಹ್ಯಾಜಲ್‌ವುಡ್ ಮುನ್ನಡೆಸಿದರು. ಗಾಯ ಸಮಸ್ಯೆಯಿಂದ ಜೋಶ್ ಹ್ಯಾಜಲ್‌ವುಡ್ ಭಾರತದ ಸರಣಿಗೆ ಆಯ್ಕೆಯಾಗಿಲ್ಲ. ಹೀಗಾಗಿ ಸ್ಮಿತ್ ಹೆಗಲಿಗೆ ನಾಯಕತ್ವದ ಹೊರೆ ಬಿದ್ದಿದೆ. ಸ್ಮಿವ್ ಸ್ಮಿತ್ ಈ ಹಿಂದೆ 51 ಏಕದಿನ ಪಂದ್ಯಗಳ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.
ವಿಶ್ವಕಪ್ ಹಿನ್ನಲೆಯಲ್ಲಿ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಇಚ್ಛಿಸುತ್ತೇವೆ. ಎಂಟು ಜನ ಬ್ಯಾಟರ್ಗಳೊಂದಿಗೆ ಕಣಕ್ಕಿಳಿಯುವ ಚಿಂತನೆ ಇದೆ. ಹೆಚ್ಚು ಆಲ್ರೌಂಡರ್ಗಳಿಂದ ತಂಡವನ್ನು ರಚನೆ ಮಾಡಲು ಬಯಸುತ್ತೇವೆ. ಮೂರು ಏಕದಿನದಲ್ಲಿ ಸಾಧ್ಯವಾದಷ್ಟು ತಂಡದಲ್ಲಿ ಪ್ರಯೋಗಗಳನ್ನು ಮಾಡುತ್ತೇವೆ" ಎಂದು ಕೋಚ್ ತಿಳಿಸಿದ್ದಾರೆ.
ಭಾರತ ವಿರುದ್ಧ ಆಸ್ಟ್ರೇಲಿಯಾದ ಏಕದಿನ ತಂಡ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಆಶ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್, ಆಡಮ್ ಝಂಪಾ.
ಆಸ್ಟ್ರೇಲಿಯಾ ಪ್ರವಾಸ ಭಾರತ ಏಕದಿನ ವೇಳಾಪಟ್ಟಿ:
ಮೊದಲ ಏಕದಿನ: ಮಾರ್ಚ್ 17, ಮುಂಬೈ
ಎರಡನೇ ಏಕದಿನ: ಮಾರ್ಚ್ 19, ವಿಶಾಕಪಟ್ಟಣ
ಮೂರನೇ ಏಕದಿನ: ಮಾರ್ಚ್ 22, ಚೆನ್ನೈ
ಇದನ್ನೂ ಓದಿ:ವಿರಾಟ್ ಫಾರ್ಮ್ ಕಳೆದುಕೊಂಡಿರಲಿಲ್ಲ, ಅದು ಶತಕದ ಲಯ ನಿರ್ಧರಿಸುವ ಮಾನದಂಡವೂ ಅಲ್ಲ: ಸುನಿಲ್ ಗವಾಸ್ಕರ್