ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಭಾಗವಹಿಸುವುದಾಗಿ ಟ್ವೀಟಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಅವರು, 'ಭಾರತದ ಅಸಾಧಾರಣ ತಂಡ'ವನ್ನು ಸೇರಲಿದ್ದೇನೆ ಎಂದು ಹೇಳಿದ್ದರು.
ಈ ಬಾರಿಯ ಐಪಿಎಲ್ ಮನರಂಜನೆ ವೀಕ್ಷಿಸಲು ಎರಡು ವೇದಿಕೆ ಬೇರೆ ಬೇರೆ ಒಡೆತನದ ಕಂಪನಿಗಳ ಕೈಯಲ್ಲಿ ಇರುವುದರಿಂದ ಜನರನ್ನು ಸೆಳೆಯಲು ಎರಡೂ ಸಂಸ್ಥೆಗಳು ವಿಭಿನ್ನ ಪ್ರಯತ್ನ ಮಾಡುತ್ತಿವೆ. ಇದರ ಫಲವಾಗಿ ಸ್ಟೀವ್ ಸ್ಮಿತ್ ಅವರನ್ನು ಸ್ಟಾರ್ ಸ್ಟೋರ್ಟ್ ಸಂಸ್ಥೆ ಕಾಮೆಂಟೆಟರ್ ಆಗಿ ತಮ್ಮ ಬಳಗಕ್ಕೆ ಸೇರಿಸಿಕೊಂಡಿದೆ.
-
One more incredible ⭐ has been added to our team of experts and we’re proud to welcome @stevesmith49 to the Incredible Star Cast 🥳
— Star Sports (@StarSportsIndia) March 28, 2023 " class="align-text-top noRightClick twitterSection" data="
Tune-in to #IPLonStar on Mar 31 | Broadcast starts at 5 PM & LIVE match at 7:30 PM#ShorOn #GameOn #BetterTogether https://t.co/v1C9OLfaac pic.twitter.com/2YnpFxZmcs
">One more incredible ⭐ has been added to our team of experts and we’re proud to welcome @stevesmith49 to the Incredible Star Cast 🥳
— Star Sports (@StarSportsIndia) March 28, 2023
Tune-in to #IPLonStar on Mar 31 | Broadcast starts at 5 PM & LIVE match at 7:30 PM#ShorOn #GameOn #BetterTogether https://t.co/v1C9OLfaac pic.twitter.com/2YnpFxZmcsOne more incredible ⭐ has been added to our team of experts and we’re proud to welcome @stevesmith49 to the Incredible Star Cast 🥳
— Star Sports (@StarSportsIndia) March 28, 2023
Tune-in to #IPLonStar on Mar 31 | Broadcast starts at 5 PM & LIVE match at 7:30 PM#ShorOn #GameOn #BetterTogether https://t.co/v1C9OLfaac pic.twitter.com/2YnpFxZmcs
ಸ್ಮಿತ್ ವೀಕ್ಷಕ ವಿವರಣೆಗಾರರಾಗಿ ಸೇರಿರುವ ಬಗ್ಗೆ ಸ್ಟಾರ್ ಸ್ಪೋರ್ಟ್ ಟ್ವಿಟ್ ಮಾಡಿ ತಿಳಿಸಿದೆ. ನಮ್ಮ ತಜ್ಞರ ತಂಡಕ್ಕೆ ಮತ್ತೊಬ್ಬ ವಿಶೇಷ ಸ್ಟಾರ್ ಸೇರ್ಪಡೆಯಾಗಿದ್ದಾರೆ. ನಾವು ಅವರನ್ನು ಸ್ವಾಗತಿಸಲು ಹೆಮ್ಮೆಪಡುತ್ತೇವೆ. ಇನ್ಕ್ರೆಡಿಬಲ್ ಸ್ಟಾರ್ ಕಾಸ್ಟ್ ಸ್ಟೀವ್ ಸ್ಮಿತ್ಗೆ ಸ್ವಾಗತ. ಮಾರ್ಚ್ 31 ರಿಂದ ಸ್ಟಾರ್ ಸ್ಪೋರ್ಟ್ನಲ್ಲಿ ನೋಡಿ ಎಂದು ತಿಳಿಸಿದೆ.
ಸ್ಮಿತ್ ಕೊನೆಯ ಬಾರಿಗೆ 2021 ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸಿದಾಗ ಐಪಿಎಲ್ ಪಂದ್ಯ ಆಡಿದ್ದರು. ಇವರು 103 ಪಂದ್ಯಗಳನ್ನು ಆಡಿದ್ದು, 2485 ರನ್ ಗಳಿಸಿದ್ದಾರೆ. ಇವರ ಅತ್ಯಧಿಕ ಸ್ಕೋರ್ 101 ಆಗಿದೆ. ಆದರೆ, ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಮಾರಾಟವಾಗದ ಕಾರಣ ಯಾವುದೇ ತಂಡಕ್ಕೆ ಸೇರಿರಲಿಲ್ಲ. ಈ ಬಾರಿಯ ಐಪಿಎಲ್ ವೀಕ್ಷಕ ವಿವರಣೆಕಾರರಾಗಿ ಸ್ಥಾನ ಪಡೆದುಕೊಂಡಿದ್ದಾರೆ.
2022 ಹರಾಜಿನಲ್ಲಿ ಖರೀದಿಯಾಗದ ಕಾರಣ 2023ರ ಮಿನಿ ಹರಾಜಿನಿಂದ ದೂರ ಉಳಿದರು. 2021 ರಲ್ಲಿ ದೆಹಲಿ ಕ್ಯಾಪಿಟಲ್ಸ್‌ನ ಭಾಗವಾಗುವುದಕ್ಕಿಂತ ಮೊದಲು ಸ್ಮಿತ್ ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಈಗ ಕಾರ್ಯನಿರ್ವಹಿಸದ ಫ್ರಾಂಚೈಸಿಗಳಾದ ರೈಸಿಂಗ್ ಪುಣೆ ಸೂಪರ್‌ಜೈಂಟ್, ಪುಣೆ ವಾರಿಯರ್ಸ್ ಮತ್ತು ಕೊಚ್ಚಿ ಟಸ್ಕರ್ಸ್ನಲ್ಲಿ ಆಡಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್‌ನ 16 ನೇ ಆವೃತ್ತಿಯು ಮಾರ್ಚ್ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚಾಲನೆಗೊಳ್ಳಲು ಸಿದ್ಧವಾಗಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ.
ಪ್ರಸಾರದ ಫೈಟ್: ಸ್ಟಾರ್ ಸ್ಪೋರ್ಟ್ ಎಂದಿನಂತೆ ಟಿವಿ ಪ್ರಸಾರದ ಹಕ್ಕು ಹೊಂದಿದೆ. ಮೊಬೈಲ್ ಪ್ರಸಾರ ಮಾಡುವ ಹಕ್ಕು ಜಿಯೋ ಜೊತೆಗಿದೆ. ಹೀಗಾಗಿ ಎರಡು ಸಂಸ್ಥೆಗಳಿಂದ ಪ್ರೇಕ್ಷಕರನ್ನು ಸೆಳೆಯಲು ಸ್ಪರ್ಧೆ ಏರ್ಪಟ್ಟಿದೆ. ಜಿಯೋ ಸಿನಿಮಾ ಆ್ಯಪ್ ಮುಖಾಂತರ ಬೇರೆ ಬೇರೆ ದಿಕ್ಕುಗಳನ್ನು ನಾವೇ ಬದಲಾಯಿಸಿಕೊಂಡು ನೋಡುವ ಹೊಸ ಆಯ್ಕೆ ನೀಡುವುದಾಗಿ ತಿಳಿಸಿದೆ. ಯಾವ ವೇದಿಕೆ ಹೆಚ್ಚು ಜನರನ್ನು ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:'ನನ್ನ ಹೃದಯ ತುಂಬಿ ಬಂತು': ಆರ್‌ಸಿಬಿ ಅಭಿಮಾನಿಗಳ ಪ್ರೀತಿಗೆ ಭಾವನಾತ್ಮಕ ಸಂದೇಶ ಬರೆದ ಎಬಿಡಿ