ಗಾಲೆ(ಶ್ರೀಲಂಕಾ): ಆತಿಥೇಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ದಿನದ ಅಂತ್ಯಕ್ಕೆ 298ರನ್ಗಳಿಕೆ ಮಾಡಿದ್ದು, ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ. ತಂಡದ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಬರೋಬ್ಬರಿ 546 ದಿನಗಳ ಬಳಿಕ ಈ ಸಾಧನೆ ಮಾಡಿದ್ದಾರೆ.
-
This is Steve Smith 28'th century moment pic.twitter.com/gxJXKAV9a5
— Hammered Truth 🇦🇺🦘 (@hammered_truth7) July 8, 2022 " class="align-text-top noRightClick twitterSection" data="
">This is Steve Smith 28'th century moment pic.twitter.com/gxJXKAV9a5
— Hammered Truth 🇦🇺🦘 (@hammered_truth7) July 8, 2022This is Steve Smith 28'th century moment pic.twitter.com/gxJXKAV9a5
— Hammered Truth 🇦🇺🦘 (@hammered_truth7) July 8, 2022
ಕಳೆದ 19 ತಿಂಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದ ಸ್ಟೀವ್ ಸ್ಮಿತ್ ಇದೀಗ ಶತಕ ಸಿಡಿಸುವ ಮೂಲಕ ಕಮ್ಬ್ಯಾಕ್ ಮಾಡಿದ್ದು, ಅಜೇಯ 109ರನ್ಗಳಿಕೆ ಮಾಡಿ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಇದು ಅವರ ಬ್ಯಾಟ್ನಿಂದ ಹರಿದ ಬಂದ 28ನೇ ಶತಕವಾಗಿದ್ದು, ಇದರಲ್ಲಿ 14 ಬೌಂಡರಿ ಸೇರಿಕೊಂಡಿವೆ. 2021ರಲ್ಲಿ ಭಾರತದ ವಿರುದ್ಧ ನಡೆದ ಸಿಡ್ನಿ ಟೆಸ್ಟ್ನಲ್ಲಿ ಸ್ಟೀವ್ ಸ್ಮಿತ್ ಕೊನೆಯದಾಗಿ ಶತಕ ಸಿಡಿಸಿದ್ದರು. ಇದಾದ ಬಳಿಕ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದ ಬ್ಯಾಟಿಂಗ್ ದಿಗ್ಗಜ ಅನೇಕ ಕಳಪೆ ಪ್ರದರ್ಶನ ನೀಡಿದ್ದರು.
ಸಕ್ರಿಯ ಟೆಸ್ಟ್ ಆಟಗಾರರ ಪೈಕಿ ಸ್ಮಿತ್ ಹೆಚ್ಚು ಶತಕ ಸಾಧನೆ ಮಾಡಿದ್ದಾರೆ. ಇಲ್ಲಿಯವರೆಗೆ 28 ಸೆಂಚುರಿ ಸಿಡಿಸಿದ್ದು, ನಂತರದ ಸ್ಥಾನದಲ್ಲಿ ಇಂಗ್ಲೆಂಡ್ನ ಜೋ ರೂಟ್(28 ಶತಕ) ಇದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ(27 ಶತಕ), ಕೇನ್ ವಿಲಿಯಮ್ಸನ್(24) ಹಾಗೂ ಡೇವಿಡ್ ವಾರ್ನರ್(24 ಶತಕ) ಸಿಡಿಸಿದ್ದಾರೆ.