ಕ್ಯಾನ್ಬೆರಾ: ಶ್ರೀಲಂಕಾ ವಿರುದ್ಧದ ಟಿ-20 ಪಂದ್ಯದ ವೇಳೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅತ್ಯಂತ ವಿಲಕ್ಷಣ ವೈಡ್ ಬಾಲ್ ಎಸೆದಿದ್ದು, ಸಾಮಜಿಕ ಜಾಲಾತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಮಂಗಳವಾರ ಶ್ರೀಲಂಕಾ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಈ ವೈಡ್ ಎಸೆದಿದ್ದಾರೆ. 18ನೇ ಓವರ್ನಲ್ಲಿ ದಾಸುನ್ ಶನಾಕ ಅವರಿಗೆ ಆಫ್ ಕಟರ್ ಎಸೆಯುವುದಕ್ಕೆ ಮುಂದಾದರು. ಆದರೆ, ಚೆಂಡು ಅವರ ಕೈಯಿಂದ ಜಾರಿ ವಿಕೆಟ್ ಕೀಪರ್ ಕೈಗೆ ಸಿಗದೇ, ಬೌಂಡರಿ ಸೇರಿಕೊಂಡಿತು. ಈ ಎಸೆತದಿಂದ ಶ್ರೀಲಂಕಾ ತಂಡ 5 ರನ್ ತನ್ನದಾಗಿಸಿಕೊಂಡಿದ್ದಲ್ಲದೇ, ಮುಂದಿನ ಎಸೆತದಲ್ಲಿ ಫ್ರೀ ಹಿಟ್ ಕೂಡ ಪಡೆದುಕೊಂಡಿತು.
-
Not the greatest delivery Mitchell Starc has ever bowled… 😂#AUSvSL pic.twitter.com/zkODpSEatA
— Wisden (@WisdenCricket) February 15, 2022 " class="align-text-top noRightClick twitterSection" data="
">Not the greatest delivery Mitchell Starc has ever bowled… 😂#AUSvSL pic.twitter.com/zkODpSEatA
— Wisden (@WisdenCricket) February 15, 2022Not the greatest delivery Mitchell Starc has ever bowled… 😂#AUSvSL pic.twitter.com/zkODpSEatA
— Wisden (@WisdenCricket) February 15, 2022
ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದ ಕಮೆಂಟೇಟರ್ ಇಂತಹ ವೈಡ್ ಬಾಲ್ ಅನ್ನು ನಾನು ನೋಡೇ ಇಲ್ಲ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದರು. ಈ ಪಂದ್ಯದಲ್ಲಿ ಶ್ರೀಲಂಕಾ 20 ಓವರ್ಗಳಲ್ಲಿ ಕೇವಲ 121 ರನ್ಗಳಿಸಿದರೆ, ಆಸ್ಟ್ರೇಲಿಯಾ 16.5 ಓವರ್ಗಳಲ್ಲಿ ಗುರಿ ತಲುಪಿ 3-0ಯಲ್ಲಿ ಸರಣಿ ತನ್ನದಾಗಿಸಿಕೊಂಡಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ಲಯದಲ್ಲಿರುವ ಮಿಚೆಲ್ ಸ್ಟಾರ್ಕ್ ಟಿ20 ಕ್ರಿಕೆಟ್ನಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ತೋರುತ್ತಿದ್ದಾರೆ. ಅವರು ಕಳೆದ ಮೂರು ಇನ್ನಿಂಗ್ಸ್ಗಳಲ್ಲಿ 12 ಓವರ್ಗಳಿಂದ ಒಂದು ವಿಕೆಟ್ ಇಲ್ಲದೇ 131 ರನ್ ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ:ಭಾರತ - ಶ್ರೀಲಂಕಾ ಸರಣಿ ವೇಳಾಪಟ್ಟಿಯಲ್ಲಿ ದಿಢೀರ್ ಬದಲಾವಣೆ.. ಬೆಂಗಳೂರಿಗೆ ಅಹರ್ನಿಶಿ ಟೆಸ್ಟ್ ಭಾಗ್ಯ