ETV Bharat / sports

ಶ್ರೀಲಂಕಾ ಏಕದಿನ ತಂಡದ ನಾಯಕ ಕುಸಾಲ್ ಪೆರೆರಾಗೆ CORONA

author img

By

Published : Aug 16, 2021, 10:49 PM IST

ಪೆರೆರಾ ಭುಜದ ಗಾಯದಿಂದ ಭಾರತ ವಿರುದ್ಧದ ಸೀಮಿತ ಓವರ್​ಗಳಿಂದ ಹೊರಗುಳಿದಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡರೂ ಕೊರೊನಾ ವೈರಸ್​ಗೆ ತುತ್ತಾಗಿ ಮತ್ತಷ್ಟು ದಿನ ತಂಡದಿಂದ ಹೊರಗುಳಿಯಬೇಕಾಗಿದೆ. ಪ್ರಸ್ತುತ ಅವರು 2 ವಾರಗಳ ಕಾಲ ಕೊಲಂಬೋದಲ್ಲಿ ಐಸೊಲೇಟ್ ಆಗಲಿದ್ದಾರೆ.

ಕುಸಾಲ್ ಪೆರೆರಾಗೆ ಕೊರೊನಾ

ಕೊಲಂಬೊ: ಶ್ರೀಲಂಕಾ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕುಸಾಲ್ ಪೆರೆರಾ ಅವರಿಗೆ ಕೊರೊನಾ ವೈರಸ್​ ಸೋಂಕು ದೃಢಪಟ್ಟಿದೆ. ಮುಂದಿನ ತಿಂಗಳು ದಕ್ಷಿಣ ಅಫ್ರಿಕಾ ವಿರುದ್ಧ ಸೀಮಿತ ಓವರ್​ಗಳ ಸರಣಿಗೂ ಮುನ್ನ ಸ್ಟಾರ್​ ಬ್ಯಾಟ್ಸ್​ಮನ್​ಗೆ ತಲೆ ನೋವು ತಂದಿದೆ.

ಕುಸಾಲ್​ ಪೆರೆರಾ ಅವರಿಗೆ ಕೊರೊನಾ ಸೋಂಕು ತಗುಲಿರುವ ಮಾಹಿತಿಯನ್ನು ಸೋಮವಾರ ಶ್ರೀಲಂಕಾ ಕ್ರಿಕೆಟ್​ ಮಂಡಳಿ ದೃಢಪಡಿಸಿದೆ. ಮಂಗಳವಾರ 31ನೇ ವಸಂತಕ್ಕೆ ಕಾಲಿಡುತ್ತಿರುವ ಪೆರೆರಾ ಶ್ರೀಲಂಕಾ ತಂಡದ ಏಕದಿನ ತಂಡದ ನಾಯಕನಾಗಿದ್ದರು. ಇದೀಗ ಅವರು ವಿಶ್ವಕಪ್​ಗೂ ಮುನ್ನ ನಡೆಯಲಿರುವ ಪ್ರಮುಖ ಟೂರ್ನಿಯಿಂದ ತಂಡದ ಸ್ಟಾರ್ ಆಟಗಾರ ಹೊರಬಿದ್ದಿರುವುದು ತಂಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಪೆರೆರಾ ಭುಜದ ಗಾಯದಿಂದ ಭಾರತ ವಿರುದ್ಧದ ಸೀಮಿತ ಓವರ್​ಗಳಿಂದ ಹೊರಗುಳಿದಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡರೂ ಕೊರೊನಾ ವೈರಸ್​ಗೆ ತುತ್ತಾಗಿ ಮತ್ತಷ್ಟು ದಿನ ತಂಡದಿಂದ ಹೊರಗುಳಿಯಬೇಕಾಗಿದೆ. ಪ್ರಸ್ತುತ ಅವರು 2 ವಾರಗಳ ಕಾಲ ಕೊಲಂಬೋದಲ್ಲಿ ಐಸೊಲೇಟ್ ಆಗಲಿದ್ದಾರೆ.

ದಕ್ಷಿಣ ಆಫ್ರಿಕಾ ಸೆಪ್ಟೆಂಬರ್​ 2 ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ನಂತರ ಸೆಪ್ಟೆಂಬರ್​ 10ರಿಂದ 3 ಪಂದ್ಯಗಳ ಟಿ-20 ಸರಣಿ ನಡೆಯಲಿದೆ.

ಇದನ್ನು ಓದಿ: ಕೆಕೆಆರ್​ಗೆ ಖುಷಿ ಸುದ್ದಿ, ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಸ್ಟಾರ್​ ಓಪನರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.