ETV Bharat / sports

ಫೈನಲ್ ಪಂದ್ಯದಲ್ಲೂ 10 ವಿಕೆಟ್​ಗಳ ಜಯ: ಲಂಕಾ ವಿರುದ್ಧ T20 ಸರಣಿ ಕ್ಲೀನ್​ ಸ್ವೀಪ್ ಮಾಡಿದ ಆಫ್ರಿಕಾ

author img

By

Published : Sep 14, 2021, 10:56 PM IST

ಆತಿಥೇಯ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋಲು ಕಂಡು ಮುಖಭಂಗ ಅನುಭವಿಸಿದ್ದ ದಕ್ಷಿಣ ಆಫ್ರಿಕಾ ಟಿ-20 ಸರಣಿಯಲ್ಲಿ ತಿರುಗೇಟು ನೀಡಿದ್ದು, ಮೂರು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲು ಮಾಡಿ ಸರಣಿಯಲ್ಲಿ ಕ್ಲೀನ್​ ಸ್ವೀಪ್​ ಸಾಧನೆ ಮಾಡಿದೆ.

Sri Lanka vs South Africa
Sri Lanka vs South Africa

ಕೊಲಂಬೋ: ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಕೊನೆಯ ಟಿ-20 ಪಂದ್ಯದಲ್ಲೂ ಪ್ರವಾಸಿ ದಕ್ಷಿಣ ಆಪ್ರಿಕಾ 10 ವಿಕೆಟ್​ಗಳ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಮೂರು ಪಂದ್ಯಗಳ ಚುಟುಕು ಕ್ರಿಕೆಟ್​ನಲ್ಲಿ ಸರಣಿ ಕ್ಲೀನ್​ ಸ್ವೀಪ್​ ಸಾಧನೆ ಮಾಡಿದೆ.

Sri Lanka vs South Africa
ಶ್ರೀಲಂಕಾ ವಿರುದ್ಧ ಟಿ-20 ಸರಣಿ ಗೆದ್ದ ದಕ್ಷಿಣ ಆಫ್ರಿಕಾ

ಆರ್​.ಪ್ರೇಮದಾಸ್​ ಮೈದಾನದಲ್ಲಿ ನಡೆದ ಫೈನಲ್​​ ಟಿ-20 ಪಂದ್ಯದಲ್ಲಿ ಮೊದಲು ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ 20 ಓವರ್​ಗಳಲ್ಲಿ 8 ವಿಕೆಟ್​​ ನಷ್ಟಕ್ಕೆ 120ರನ್​ ಮಾತ್ರಗಳಿಸಲು ಶಕ್ತವಾಯಿತು. ತಂಡದ ಪರ ಆರಂಭಿಕ ಆಟಗಾರ ಪರೆರಾ 39 ರನ್​ ಹಾಗೂ ಕರುಣರತ್ನೆ 24ರನ್​ಗಳಿಕೆ ಮಾಡಿ ಅತಿ ಹೆಚ್ಚು ರನ್​ಗಳಿಸಿರುವ ಆಟಗಾರರಾದರು. ಉಳಿದಂತೆ ಯಾವೊಬ್ಬ ಪ್ಲೇಯರ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.

Sri Lanka vs South Africa
39ರನ್​ಗಳಿಕೆ ಮಾಡಿದ ಪರೆರಾ

ಆಫ್ರಿಕಾ ಪರ ಪೋರ್ಟೂನ್​, ರಬಾಡಾ ತಲಾ 2ವಿಕೆಟ್ ಪಡೆದುಕೊಂಡರೆ, ಮಾರ್ಕ್ರಾಮ್, ಮುಲ್ಡರ್​ ಹಾಗೂ ಕೇಶವ್​ ಮಹಾರಾಜ್ ತಲಾ 1 ವಿಕೆಟ್ ಕಿತ್ತರು.

121ರನ್​ಗಳ ಗುರಿ ಬೆನ್ನತ್ತಿದ್ದ ದ. ಆಫ್ರಿಕಾ ತಂಡ ವಿಕೆಟ್​ನಷ್ಟವಿಲ್ಲದೇ 14.4 ಓವರ್​ಗಳಲ್ಲಿ 121ರನ್​ಗಳಿಕೆ ಮಾಡಿ ಗೆಲುವಿನ ಗುರಿ ಮಟ್ಟಿತ್ತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಹೆಂಡ್ರಿಕ್ಸ್​ ಅಜೇಯ 56 ರನ್​ ಹಾಗೂ ವಿಕೆಟ್ ಕೀಪರ್​ ಡಿಕಾಕ್​​ ಅಜೇಯ 59ರನ್​ಗಳಿಕೆ ಮಾಡಿ, ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಜೊತೆಗೆ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್​​ ಸ್ವೀಪ್ ಸಾಧನೆ ಮಾಡಿತು.

ಮೊದಲ ಟಿ-20 ಪಂದ್ಯದಲ್ಲಿ 28ರನ್​ಗಳ ಗೆಲುವು ದಾಖಲು ಮಾಡಿದ್ದ ಪ್ರವಾಸಿ ತಂಡ ಎರಡನೇ ಪಂದ್ಯದಲ್ಲೂ 9 ವಿಕೆಟ್​ಗಳ ಅಂತರದ ಜಯ ಸಾಧಿಸಿತು. ಇದೀಗ ಫೈನಲ್​ ಪಂದ್ಯದಲ್ಲಿ 10 ವಿಕೆಟ್​ಗಳ ಗೆಲುವು ಸಾಧಿಸಿದೆ. ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ವಿಂಟನ್​ ಡಿಕಾಕ್​ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಶ್ರೀಲಂಕಾ ವಿರುದ್ಧ ಟಿ-20ಯಲ್ಲಿ ದೊಡ್ಡ ಜೊತೆಯಾಟ

ದ. ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಹೆಂಡ್ರಿಕ್ಸ್ ಹಾಗೂ ಡಿಕಾಕ್​ ಲಂಕಾ ವಿರುದ್ಧ ಹೊಸ ರೆಕಾರ್ಡ್ ಬರೆದರು. ದಕ್ಷಿಣ ಆಫ್ರಿಕಾ ಪರ ಇಲ್ಲಿಯವರೆಗೆ ಆರಂಭಿಕರಾಗಿ ಕಣಕ್ಕಿಳಿದು ಅತಿ ದೊಡ್ಡ ಜೊತೆಯಾಟ ನೀಡಿರುವ ಸಾಧನೆ ಮಾಡಿದರು. ಹೆಂಡ್ರಿಕ್ಸ್​​​ ಅಜೇಯ 56ರನ್ ಹಾಗೂ ಡಿಕಾಕ್​​ ಅಜೇಯ 59ರನ್​ಗಳೊಂದಿಗೆ 121ರನ್​ ಗಳಿಸಿದರು. ಈ ಹಿಂದೆ ಆಫ್ರಿಕಾದ ಯಾವುದೇ ಜೋಡಿ ಇಷ್ಟೊಂದು ರನ್​ಗಳಿಕೆ ಮಾಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.