ETV Bharat / sports

ಬಯೋಬಬಲ್​ ನಿಯಮ ಉಲ್ಲಂಘಿಸಿದ ಶ್ರೀಲಂಕಾ ಆಟಗಾರರು!

ಅಂತಿಮ ಟಿ - 20 ಅಂತಾರಾಷ್ಟ್ರೀಯ ಪಂದ್ಯದ ಬಳಿಕ ನಿರೋಶನ್ ಡಿಕ್ವೆಲ್ಲಾ ಮತ್ತು ಕುಸಲ್ ಮೆಂಡಿಸ್ ಡರ್ಹಾಮ್‌ನ ಬೀದಿಗಳಲ್ಲಿ ಓಡಾಡುತ್ತಿದ್ದರು ಎನ್ನಲಾಗಿದೆ. ಈ ಮೂಲಕ ಬಯೋಬಬಲ್​ ನೀತಿ ಉಲ್ಲಂಘನೆ ಮಾಡಿದ್ದಾರೆ ಎಂಬ ಕೇಳಿ ಬಂದಿದ್ದು, ತನಿಖೆ ನಡೆಲಾಗುತ್ತಿದೆ.

Sri Lanka cricketer
ಶ್ರೀಲಂಕಾ ಆಟಗಾರರು
author img

By

Published : Jun 28, 2021, 4:17 PM IST

ಕೊಲಂಬೊ: ಶ್ರೀಲಂಕಾ ಕ್ರಿಕೆಟ್​ ತಂಡ (ಎಸ್‌ಎಲ್‌ಸಿ)ದ ಆಟಗಾರರಾದ ನಿರೋಶನ್ ಡಿಕ್ವೆಲ್ಲಾ ಮತ್ತು ಕುಸಲ್ ಮೆಂಡಿಸ್ ವಿರುದ್ಧ ಬಯೋಬಬಲ್​ನ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ತನಿಖೆ ನಡೆಲಾಗುತ್ತಿದೆ.

ಕಳೆದ ರಾತ್ರಿ ನಡೆದ ಅಂತಿಮ ಟಿ -20 ಅಂತಾರಾಷ್ಟ್ರೀಯ ಪಂದ್ಯದ ಬಳಿಕ ಇವರಿಬ್ಬರು ಡರ್ಹಾಮ್‌ನ ಬೀದಿಗಳಲ್ಲಿ ಓಡಾಡುತ್ತಿದ್ದರು ಎನ್ನಲಾಗಿದೆ. ಇನ್ನು ಶ್ರೀಲಂಕಾವು 89 ರನ್​ಗಳಿಂದ ಭಾರಿ ಸೋಲು ಅನುಭವಿಸಿದ್ದು ,ಎರಡೂ ಆಟಗಾರರು ಪಂದ್ಯದ ಇಲೆವೆನ್​ನ ಭಾಗವಾಗಿದ್ದರು ಎನ್ನಲಾಗಿದೆ. ರಾತ್ರಿಯಲ್ಲಿ ಹೊರಗೆ ಹೋಗುವ ಮೂಲಕ ಅವರು ಬಯೋಬಬಲ್​ ನೀತಿ ಉಲ್ಲಂಘಿಸಿದ್ದಾರೆಯೇ ಎಂದು ಎಸ್‌ಎಲ್‌ಸಿ ತನಿಖೆ ನಡೆಸಲಿದೆ.

ಶ್ರೀಲಂಕಾದ ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ ವಿಡಿಯೋಗೆ ಪ್ರತಿಕ್ರಿಯಿಸಿದ ಎಸ್‌ಎಲ್‌ಸಿ ಮುಖ್ಯಸ್ಥ ಶಮ್ಮಿ ಸಿಲ್ವಾ, "ಅವರು ನೀತಿ ಸಂಹಿತೆ ಉಲ್ಲಂಘಿಸಿರುವುದರಿಂದ ತನಿಖೆ ನಡೆಯುತ್ತಿದೆ" ಎಂದು ಹೇಳಿದರು. ಭಾನುವಾರ ಕೊನೆಗೊಂಡ ಟಿ 20 ಸರಣಿಯಲ್ಲಿ ಶ್ರೀಲಂಕಾ 0-3ರಿಂದ ಹಿನ್ನಡೆ ಕಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.