ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಶ್ರೀಲಂಕಾ ಬ್ಯಾಟರ್​ ವಿದಾಯ.. ನಿವೃತ್ತಿ ಘೋಷಿಸಿದ ಲಹಿರು ತಿರಿಮನ್ನೆ - ಶ್ರೀಲಂಕಾ ಸ್ಟಾರ್​ ಬ್ಯಾಟರ್​ ಲಹಿರು ತಿರಿಮನ್ನೆ

ಶ್ರೀಲಂಕಾ ಬ್ಯಾಟರ್ ಲಹಿರು ತಿರಿಮನ್ನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಶ್ರೀಲಂಕಾ ಬ್ಯಾಟರ್ ಲಹಿರು ತಿರಿಮನ್ನೆ
ಶ್ರೀಲಂಕಾ ಬ್ಯಾಟರ್ ಲಹಿರು ತಿರಿಮನ್ನೆ
author img

By

Published : Jul 23, 2023, 6:49 PM IST

ಕೊಲಂಬೊ (ಶ್ರೀಲಂಕಾ) : ಶ್ರೀಲಂಕಾ ಸ್ಟಾರ್​ ಬ್ಯಾಟರ್​ ಲಹಿರು ತಿರಿಮನ್ನೆ ತಮ್ಮ 12 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ತಿರಿಮನ್ನೆ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ 12 ವರ್ಷಗಳ ಕ್ರಿಕೆಟ್ ಪ್ರಯಾಣವನ್ನು ಕೊನೆಗೊಳಿಸುವುದಾಗಿ ತಿಳಿಸಿದ್ದಾರೆ. ಈ ಕಹಿ ಸುದ್ದಿಯೊಂದು ಕ್ರಿಕೆಟ್​ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.

ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್‌ ಮಾಡಿರುವ ತಿರಿಮನ್ನೆ "ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ಹೊಂದಿದ್ದಕ್ಕೆ ಸಂಪೂರ್ಣ ಗೌರವ. 12 ವರ್ಷಗಳ ಅದ್ಭುತ ನೆನಪುಗಳಿಗೆ ತುಂಬಾ ಧನ್ಯವಾದಗಳು. ಇನ್ನೊಂದು ಬದಿಯಲ್ಲಿ ನಿಮ್ಮನ್ನು ನೋಡೋಣ" ಎಂದು ಬರೆದುಕೊಂಡಿದ್ದಾರೆ. ಇನ್ನು, ಫೇಸ್‌ಬುಕ್ ಪೋಸ್ಟ್‌ನಲ್ಲಿ "ಆಟಗಾರನಾಗಿ ನಾನು ನನ್ನ ಅತ್ಯುತ್ತಮ ಕೊಡುಗೆ ನೀಡಿದ್ದೇನೆ. ನಾನು ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ. ನಾನು ಆಟವನ್ನು ಗೌರವಿಸುತ್ತೇನೆ ಮತ್ತು ನನ್ನ ತಾಯಿನಾಡಿಗೆ ಪ್ರಾಮಾಣಿಕವಾಗಿ ಮತ್ತು ನೈತಿಕವಾಗಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ'' ಎಂದು ಬರೆದಿದ್ದಾರೆ.

ನಿವೃತ್ತಿ ಘೋಷಿಸುವ ನಿರ್ಧಾರ ಕಷ್ಟಕರವಾಗಿತ್ತು. ಆದರೆ ಈ ನಿರ್ಧಾರವನ್ನು ಸ್ವಇಚ್ಛೆಯಿಂದ ಅಥವಾ ಇಷ್ಟವಿಲ್ಲದೆ ತೆಗೆದುಕೊಳ್ಳಲು ನನ್ನನ್ನು ಪ್ರಭಾವಿಸಿದ ಅನೇಕ ಅನಿರೀಕ್ಷಿತ ಕಾರಣಗಳನ್ನು ನಾನು ಇಲ್ಲಿ ಉಲ್ಲೇಖಿಸಲಾರೆ ಎಂದಿದ್ದಾರೆ. ತಿರಿಮನ್ನೆ ಕ್ರಿಕೆಟ್ ಪಯಣದಲ್ಲಿ ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ಅವರ ಕೋಚ್‌ಗಳು, ಸಹ ಆಟಗಾರರು, ಫಿಸಿಯೋಗಳು ಮತ್ತು ಅವರ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ನಾನು ಎಸ್​ಎಲ್​ಸಿ ಸದಸ್ಯರು, ನನ್ನ ತರಬೇತುದಾರರು, ತಂಡದ ಸಹ ಆಟಗಾರರು, ಫಿಸಿಯೋಗಳು, ತರಬೇತುದಾರರು ಮತ್ತು ವಿಶ್ಲೇಷಕರಿಗೆ ಅವರ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ. ಮತ್ತು ಈ ವರ್ಷಗಳಲ್ಲಿ ನೀವು ನನಗೆ ನೀಡಿದ ಎಲ್ಲಾ ಪ್ರೀತಿ, ಬೆಂಬಲ ಮತ್ತು ಪ್ರೇರಣೆಗಾಗಿ ನನ್ನ ಅಭಿಮಾನಿಗಳು, ಬೆಂಬಲಿಗರು, ಪತ್ರಕರ್ತರು. ನಾನು ನಿಮಗೆಲ್ಲರಿಗೂ ಚಿರಋಣಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

33 ವರ್ಷದ ತಿರಿಮನ್ನೆ ಶ್ರೀಲಂಕಾ ಪರ ಮೂರು ಮಾದರಿ ಕ್ರಿಕೆಟ್​ ಸೇರಿ ಒಟ್ಟು 197 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಹೆಸರಿನಲ್ಲಿ 7 ಶತಕ ಮತ್ತು 31 ಅರ್ಧಶತಕಗಳೊಂದಿಗೆ 5573 ರನ್ ದಾಖಲಾಗಿದೆ. 2010 ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ ನಂತರ, ತಿರಿಮನ್ನೆ 44 ಟೆಸ್ಟ್, 127 ಏಕದಿನ ಮತ್ತು 26 ಟಿ-ಟ್ವೆಂಟಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಐಸಿಸಿ ಆಯೋಜಿತ ಮೂರು ಟಿ-20 ವಿಶ್ವಕಪ್​ನಲ್ಲಿ ಲಂಕಾ ಯಶಸ್ಸಿಗೆ ಪ್ರಮುಖ ಪಾತ್ರವಹಿಸಿದ್ದ ತಿರಿಮನ್ನೆ 2014 ರಲ್ಲಿ ಲಂಕಾ ಟಿ-20 ವಿಶ್ವಕಪ್​ ಗೆಲ್ಲಲು ಕೊಡುಗೆ ನೀಡಿದರು. ಅಲ್ಲದೆ ಹಲವು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ನಾಯಕನಾಗಿ ಶ್ರೀಲಂಕಾವನ್ನು ಪ್ರತಿನಿಧಿಸುವ ಅಪೂರ್ವ ಅವಕಾಶ ಪಡೆದಿದ್ದರು. ಕಳೆದ ವರ್ಷ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಭಾರತದ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಶ್ರೀಲಂಕಾ ಪರ ತಿರಿಮನ್ನೆ ಅವರ ಕೊನೆಯ ಪಂದ್ಯವಾಗಿದೆ.

ಇದನ್ನೂ ಓದಿ : ಭಾರತ - ಪಾಕ್​ ಪಂದ್ಯ.. ಹೋಟೆಲ್​ ಫುಲ್​ ಬುಕ್​, ವರ್ಕೌಟ್​ ಆಯ್ತು ಕ್ರಿಕೆಟ್​ ಅಭಿಮಾನಿಗಳ ಸೂಪರ್​ ಐಡಿಯಾ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.