ದುಬೈ : ಭಾರತದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ದಕ್ಷಿಣ ಆಫ್ರಿಕಾದ ಬ್ಯಾಟರ್ ಕೀಗನ್ ಪೀಟರ್ಸನ್ ತಮ್ಮದೇ ದೇಶದ ಯುವ ಪ್ರತಿಭೆ ಬೇಬಿ ಎಬಿಡಿ ಖ್ಯಾತಿಯ ಡೆವಾಲ್ಡ್ ಬ್ರೇವಿಸ್ ಮತ್ತು ಬಾಂಗ್ಲಾದೇಶದ ವೇಗಿ ಎಬಾದತ್ ಹೊಸೈನ್ರನ್ನು ಹಿಂದಿಕ್ಕಿ ಜನವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1ರ ಹಿನ್ನಡೆ ಅನುಭವಿಸಿದ್ದ ದಕ್ಷಿಣ ಆಫ್ರಿಕಾ ಅದ್ಭುತವಾಗಿ ತಿರುಗಿ ಬಿದ್ದು 2-1ರಲ್ಲಿ ಸರಣಿ ಗೆಲ್ಲುವುದಕ್ಕೆ ಕೀಗನ್ ಪ್ರಮುಖ ಪಾತ್ರವಹಿಸಿದ್ದರು.
2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 62 ಮತ್ತು 240 ರನ್ಗಳನ್ನು ಚೇಸ್ ಮಾಡುವಾಗ 28 ರನ್ಗಳಿಸಿದ್ದರು. ಕೊನೆಯ ಟೆಸ್ಟ್ ಪಂದ್ಯದಲ್ಲಿ 212 ರನ್ಗಳನ್ನು ಚೇಸ್ ಮಾಡುವ ವೇಳೆ ಆಕರ್ಷಕ 82 ರನ್ಗಳಿಸಿ ಸರಣಿ ಗೆಲುವಿಗೆ ಕಾರಣವಾಗಿದ್ದರು.
-
🇿🇦 Keegan Petersen
— ICC (@ICC) February 14, 2022 " class="align-text-top noRightClick twitterSection" data="
🏴 Heather Knight
🌟 ICC Players of the Month for January 2022#POTM
">🇿🇦 Keegan Petersen
— ICC (@ICC) February 14, 2022
🏴 Heather Knight
🌟 ICC Players of the Month for January 2022#POTM🇿🇦 Keegan Petersen
— ICC (@ICC) February 14, 2022
🏴 Heather Knight
🌟 ICC Players of the Month for January 2022#POTM
ಈ ಸರಣಿಯಲ್ಲಿ 276 ರನ್ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಗೌರವಕ್ಕೂ ಕೀಗನ್ ಪೀಟರ್ಸನ್ ಪಾತ್ರವಾಗಿದ್ದರು. ಇವರ ಜೊತೆಗೆ ನಾಮ ನಿರ್ದೇಶನಗೊಂಡಿದ್ದ ಬ್ರೇವಿಸ್ ಅಂಡರ್-19 ವಿಶ್ವಕಪ್ನಲ್ಲಿ 506 ರನ್ಗಳಿಸಿ ಟೂರ್ನಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಎಬಾದತ್ ಹೊಸೈನ್ ಕಿವೀಸ್ ವಿರುದ್ಧ ಐತಿಹಾಸಿಕ ಟೆಸ್ಟ್ ಪಂದ್ಯ ಜಯಕ್ಕೆ ಕಾರಣರಾಗಿದ್ದರು. ಅವರು ಸರಣಿಯಲ್ಲಿ 9 ವಿಕೆಟ್ ಪಡೆದಿದ್ದರು.
ಮಹಿಳಾ ವಿಭಾಗದಲ್ಲಿ ಇಂಗ್ಲೆಂಡ್ ನಾಯಕಿ ಹೀದರ್ ನೈಟ್ ಐಸಿಸಿ ಜನವರಿ ತಿಂಗಳ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರು ಮಹಿಳಾ ಆ್ಯಶಸ್ನಲ್ಲಿ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಲು ನೆರವಾಗಿದ್ದರು.
ಇದನ್ನೂ ಓದಿ:ಐಪಿಎಲ್ನ 10 ತಂಡಗಳಿಗೆ ಖರ್ಚಾದ 553 ಕೋಟಿ ರೂ.ಗಳಲ್ಲಿ 16 ಕನ್ನಡಿಗರಿಗೆ ಸಿಕ್ತು 66.6 ಕೋಟಿ ರೂ!