ETV Bharat / sports

ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ: ಹೆಚ್ಚು ಗೆದ್ದವರು ಯಾರು? - ETV Bharath Kannada news

ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2023ರ ತನ್ನ ಕೊನೆಯ ಟಿ20 ಸರಣಿಯನ್ನಾಡಲು ಟಿಂ ಇಂಡಿಯಾ ಸಿದ್ಧವಾಗಿದೆ. ಮೂರು ಪಂದ್ಯಗಳ ಸರಣಿ ಡಿಸೆಂಬರ್ 10ರಿಂದ ಡಿ.14 ರವರೆಗೆ ನಡೆಯಲಿದೆ. ಹರಿಣಗಳು ಮತ್ತು ಭಾರತದ ನಡುವಿನ ಹಿಂದಿನ ಸರಣಿಗಳ ಒಂದು ಮೆಲುಕುನೋಟ.

Indian Cricket Team
Indian Cricket Team
author img

By ETV Bharat Karnataka Team

Published : Dec 8, 2023, 5:13 PM IST

ಹೈದರಾಬಾದ್​​: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿ ಭಾನುವಾರದಿಂದ ಆರಂಭವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಯಶಸ್ವಿ ನಾಯಕತ್ವ ನಿಭಾಯಿಸಿರುವ ಸೂರ್ಯಕುಮಾರ್​ ಯಾದವ್​ ಈ ಸರಣಿಯ ಮುಂದಾಳತ್ವ ವಹಿಸಿದ್ದಾರೆ. ಅನುಭವಿ ರವೀಂದ್ರ ಜಡೇಜಾ ಉಪನಾಯಕರಾಗಿ ಸಾಥ್​ ಕೊಡಲಿದ್ದಾರೆ. 2024ರ ಟಿ20 ವಿಶ್ವಕಪ್​ ಹಿನ್ನೆಲೆಯಲ್ಲಿ ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್, ರವಿ ಬಿಷ್ಣೋಯ್ ಮತ್ತು ಮುಖೇಶ್ ಕುಮಾರ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ವಿಶ್ವಕಪ್​ ಮುಗಿದ ಬೆನ್ನಲ್ಲೇ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೆಚ್ಚೂಕಮ್ಮಿ ಅದೇ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಿದೆ. ವಿದೇಶದಲ್ಲಿ ಈ ಆಟಗಾರರ ಪ್ರದರ್ಶನ ಹೇಗಿರಲಿದೆ ಎಂಬ ಕುತೂಹಲ ಭಾರತದ ಕ್ರಿಕೆಟ್​ ಪ್ರೇಮಿಗಳದ್ದು. ವಿಶ್ವಕಪ್​​ ನಂತರ ಕೋಚ್​ ದ್ರಾವಿಡ್​​ ಈ ಸರಣಿಯಿಂದ ಮತ್ತೆ ಹುದ್ದೆಗೆ ಮರಳಿದ್ದಾರೆ. ವಿಶ್ವಕಪ್​ ಹಿನ್ನೆಲೆಯಲ್ಲಿ ಅವರ ಲೆಕ್ಕಾಚಾರವೇನು ಎಂಬುದು ಈ ಸರಣಿಯಲ್ಲಿ ತಿಳಿದುಬರಲಿದೆ.

ಭಾರತ vs ದಕ್ಷಿಣ ಆಫ್ರಿಕಾ: ಉಭಯ ರಾಷ್ಟ್ರಗಳ ನಡುವೆ 8 ಬಾರಿ ಹರಿಣಗಳ ನಾಡಿನಲ್ಲಿ ಟಿ20 ಸರಣಿ ನಡೆದಿದೆ. ಇದರಲ್ಲಿ ಭಾರತ ಮೇಲುಗೈ ಸಾಧಿಸಿದೆ. ಟೀಮ್​ ಇಂಡಿಯಾ ನಾಲ್ಕು ಸರಣಿ ಗೆದ್ದರೆ, 2ರಲ್ಲಿ ಸೋತು ಎರಡನ್ನು ಟೈ ಮಾಡಿಕೊಂಡಿದೆ. ದಕ್ಷಿಣ ಆಫ್ರಿಕ ತಂಡ ಯುವ ಆಟಗಾರರನ್ನು ಹೊಂದಿದ್ದು, ಬಲಿಷ್ಠ ಪೈಪೋಟಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಸಮಬಲದ ಪ್ರದರ್ಶನ ನಿರೀಕ್ಷೆ ಇದೆ.

8 ಸರಣಿಗಳು ಹೀಗಿವೆ:

  • 2006ರಲ್ಲಿ ಭಾರತವು ವೀರೇಂದ್ರ ಸೆಹ್ವಾಗ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ತನ್ನ ಮೊದಲ ಏಕ-ಪಂದ್ಯದ ಟಿ20 ಸರಣಿ ಆಡಿತ್ತು. ಅದನ್ನು ಭಾರತ ಗೆದ್ದುಕೊಂಡಿತು.
  • ಭಾರತ 2010ರಲ್ಲಿ ದಕ್ಷಿಣ ಆಫ್ರಿಕಾದೊಂದಿಗೆ ಎರಡನೇ ಏಕ-ಪಂದ್ಯದ ಸರಣಿ ಆಡಿತ್ತು. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸಿತ್ತು.
  • 2011ರಲ್ಲಿ ಭಾರತ ಮತ್ತೊಮ್ಮೆ ದಕ್ಷಿಣ ಆಫ್ರಿಕಾದಲ್ಲಿ 1 ಪಂದ್ಯಗಳ ಟಿ20 ಸರಣಿ ಆಡಿತ್ತು. ಈ ಸರಣಿಯಲ್ಲಿ ಭಾರತ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನುಭವಿಸಿತ್ತು.
  • ಧೋನಿ ನಾಯಕತ್ವದಲ್ಲಿ 2015ರಲ್ಲಿ ಭಾರತವು ದಕ್ಷಿಣ ಆಫ್ರಿಕಾದೊಂದಿಗೆ 3 ಪಂದ್ಯಗಳ ಟಿ20 ಸರಣಿ ಆಡಿತು. ಇದನ್ನು ದಕ್ಷಿಣ ಆಫ್ರಿಕಾ 2-0 ಅಂತರದಲ್ಲಿ ಗೆದ್ದುಕೊಂಡಿತು.
  • 2017ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ 3 ಪಂದ್ಯಗಳ ಟಿ20 ಸರಣಿ ನಡೆದಿತ್ತು. ಈ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿತು.
  • ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2019ರಲ್ಲಿ ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿತು. ಮೂರು ಪಂದ್ಯಗಳ ಸರಣಿ 1-1ರಿಂದ ಟೈನಿಂದ ಮುಕ್ತಾಯಗೊಂಡಿತು.
  • ರಿಷಬ್ ಪಂತ್ ನಾಯಕತ್ವದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ 5 ಟಿ20 ಪಂದ್ಯಗಳ ಸರಣಿ ನಡೆದಿದೆ. ಈ ಸರಣಿಯೂ 2-2ರಲ್ಲಿ ಸಮಬಲಗೊಂಡಿತು.
  • ಅಕ್ಟೋಬರ್ 2022ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ 3 ಟಿ 20 ಪಂದ್ಯಗಳ ಸರಣಿ ಆಡಲಾಯಿತು. ಇದನ್ನು ಭಾರತ 2-1ರಿಂದ ಗೆದ್ದುಕೊಂಡಿದೆ.

ಇದನ್ನೂ ಓದಿ: ವಿಶ್ವಕಪ್‌ ಫೈನಲ್ ನಡೆದ ಅಹಮದಾಬಾದ್​ ಪಿಚ್ 'ಸಾಮಾನ್ಯ', ವಾಂಖೆಡೆ 'ಉತ್ತಮ': ಐಸಿಸಿ ರೇಟಿಂಗ್ ​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.